• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೇಣು ಹಾಕಿಕೊಂಡ ಮರದ ಕೊಂಬೆ ಮುರೀತು ಎಂದು ಶಿಕ್ಷಕ ಮಾಡಿದ್ದೇನು?

|

ಕೋಲಾರ, ಡಿಸೆಂಬರ್ 20: ನೇಣು ಹಾಕಿಕೊಂಡ ಮರದ ಕೊಂಬೆ ಮುರೀತು ಎಂದು ಕೆರೆಗೆ ಹಾರಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಭಟ್ರಹಳ್ಳಿ ಗ್ರಾಮದ ಪ್ರಭಾಕರ್ (31) ಆತ್ಮಹತ್ಯೆ ಶರಣಾದ ಶಿಕ್ಷಕ. ಪ್ರಭಾಕರ್ ಯಾದಗಿರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಊರಹಬ್ಬಕ್ಕಾಗಿ ಪ್ರಭಾಕರ್ ಸ್ವಗ್ರಾಮಕ್ಕೆ ಬಂದಿದ್ದ. ಜೊತೆಗೆ ಮನೆತನ ನೋಡಲು ಹೆಣ್ಣಿನ ಮನೆಯವರು ಬರುತ್ತಾರೆ ಅಂತ ಪ್ರಭಾಕರ್ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟಿದ್ದ.

ಪಿ.ಜಿ. ಮಾಲೀಕನ ಕಿರುಕುಳ: ಸ್ಪೈಸ್ ಜೆಟ್ ಗಗನಸಖಿ ಆತ್ಮಹತ್ಯೆ

ಆದರೆ ಬುಧವಾರ ಹೆಣ್ಣಿನ ಮನೆಯವರು ಬರುವುದಕ್ಕೂ ಮುನ್ನ ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೊಬೈಲ್ ಅನ್ನು ತಮ್ಮನ ಕೈಗೆ ಕೊಟ್ಟು ಹೋಗಿದ್ದ.

ಘಟನೆಯು ಕೋಲಾರದ ಕಾಳಹಸ್ತಿಯಲ್ಲಿ ಘಟನೆ ನಡೆದಿದೆ. ಮನೆಗೆ ಬಂದಿದ್ದ ಹುಡುಗಿ ಮನೆಯವರು ಕಾದು ಕಾದು ಮರಳಿ ತಮ್ಮ ಊರಿಗೆ ಹೋದರು. ಆದರೆ ಪ್ರಭಾಕರ್ ಮನೆಗೆ ಬಾರದೆ ಇರುವುದರಿಂದ ಆತನಿಗಾಗಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು.

ಕಾಳಹಸ್ತಿಪುರ ಗ್ರಾಮದ ಕೆರೆಯ ಬಳಿ ಗುರುವಾರ ಪ್ರಭಾಕರ್ ಬೈಕ್ ಮತ್ತು ಚಪ್ಪಲಿ ಪತ್ತೆಯಾಗಿದ್ದವು. ಈ ವಿಷಯ ತಿಳಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು.

ಸ್ಥಳ ಪರಿಶೀಲನೆ ಮಾಡಿದಾಗ ಪ್ರಭಾಕರ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಮೃತದೇಹ ಪತ್ತೆಗಾಗಿ ಕಾರ್ಯಚರಣೆ ನಡೆಸಿದರು.

English summary
The incident occurred in Kolar when a teacher committed suicide by jumping into a lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X