ಪುಕ್ಕಟೆ ಪ್ರವಾಸ, ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ನಾಟಕ
ಮಾಲೂರು(ಕೋಲಾರ ಜಿಲ್ಲೆ), ಫೆಬ್ರವರಿ 23 : ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಅದಾಗಲೇ ಮತದಾರರ ಓಲೈಕೆಗೆ ನಿಂತುಬಿಟ್ಟಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರ ಅಂದರೆ ಬಿಜೆಪಿಯ ಕೃಷ್ಣಯ್ಯ ಶೆಟ್ಟರು ಪ್ರತಿನಿಧಿಸುವಂಥ ಕ್ಷೇತ್ರ ಅನ್ನೋದು ನೆನಪಾದರೆ ಗಂಗಾಜಲ, ಲಡ್ಡು, ದೇವಸ್ಥಾನಗಳಿಗೆ ಪುಕ್ಕಟೆ ಪ್ರವಾಸ ಎಲ್ಲ ನೆನಪಾಗುತ್ತದೆ.
ಸದ್ಯಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ವೈ.ನಂಜೇಗೌಡ ಮಹಿಳೆಯರಿಗೆ ಸೀರೆ, ಪ್ರವಾಸ, ಉಡುಗೊರೆ ಆಮಿಷ ಒಡ್ಡುತ್ತಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಎನ್.ಕೃಷ್ಣಯ್ಯಶೆಟ್ಟಿಯಿಂದ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಉಚಿತ ತಿಂಡಿ, ಊಟದ ವ್ಯವಸ್ಥೆ ಆಗುತ್ತಿದೆ.
ಜೆಡಿಎಸ್ ನಿಂದ ಶಾಸಕರಾಗಿರುವ ಮಂಜುನಾಥ್ ಗೌಡರಿಂದ ಪೌರಾಣಿಕ ನಾಟಕಗಳ ಪ್ರದರ್ಶನ ಹಾಗೂ ಪ್ರವಾಸ ಭಾಗ್ಯ ಸಿಗುತ್ತಿದೆ. ಒಟ್ಟಾರೆ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಿಂದ ಮತದಾರರಿಗೆ ಭರ್ಜರಿ ಆಮಿಷ, ಪುಕ್ಕಟೆ ಕೊಡುಗೆಗಳು ಸಿಗುತ್ತಿವೆ.

ಚುನಾವಣೆ ಮುಂಚೆಯೇ ತಾಲೂಕಿನಲ್ಲಿ ಹಣದ ಹೊಳೆ ಹರಿಸುತ್ತಿದ್ದು, ಮತದಾರರ ಪೈಕಿ ಕೆಲವರು ಇಂಥ ಯಾವ ಕೊಡುಗೆಗಳನ್ನು ನಿರಾಕರಿಸುತ್ತಲೂ ಇಲ್ಲ.












Click it and Unblock the Notifications