ಕೋಲಾರದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ: 45 ದಿನದಲ್ಲೇ ಗಲ್ಲು ಶಿಕ್ಷೆ
ಕೋಲಾರ, ಸೆಪ್ಟೆಂಬರ್ 15: ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ 45 ದಿನದಲ್ಲೇ ಗಲ್ಲು ಶಿಕ್ಷೆ ವಿಧಿಸಿ ಕೋಲಾರ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶನಿವಾರ ಮಹತ್ವದ ತೀರ್ಪು ನೀಡಿದೆ.
ಕೊಲೆ, ಅತ್ಯಾಚಾರ ಪ್ರಕಟಣಗಳಲ್ಲಿ ಎಷ್ಟೋ ವರ್ಷಗಳೇ ಕಳೆದರೂ ಯಾವುದೇ ತೀರ್ಪು ಬರುತ್ತಿರಲಿಲ್ಲ, ಆರೋಪಿ ಅಲ್ಲಿಯವರೆಗೆ ಇನ್ನಷ್ಟು ಕೃತ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಆರಾಮವಾಗಿ ಇರುತ್ತಿದ್ದ, ಆದರೆ ಕೋರ್ಟ್ ನೀಡಿರುವ ತೀರ್ಪು ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಇಮ್ಮಡಿಕೊಳ್ಳುವಂತೆ ಮಾಡಿದೆ.
ಕೇವಲ 13 ದಿನಗಳಲ್ಲೇ ಸಂಪೂರ್ಣ ವಿಚಾರಣೆ ನಡೆಸಿ ನಡೆಸಿ ಗಲ್ಲು ಶಿಕ್ಷೆಯ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ. ಮಾಲೂರು ಪಟ್ಟಣದ ಅಪ್ರಾಪ್ತೆ ಮೇಲೆ ಆತ್ಯಾಚಾರವೆಸಗಿ, ಕೊಲೆ ಮಾಡಿದ್ದ.

ಟೇಕಲ್ ಸುರೇಶ್ ಕುಮಾರ್ ಆರೋಪಿ, ಆಗಸ್ಟ್ 1ರಂದು ಬಾಲಕಿ ಮೇಲೆ ಮಾಲೂರಿನ ರೈಲ್ವೆ ಟ್ರ್ಯಾಕ್ ಬಳಿ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ, ಬಾಲಕಿ ಕೊಲೆ ವಿರುದ್ಧ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದಿತ್ತು. ಇದೀಗ ಕೇವಲ 45 ದಿನಗಳಲ್ಲೇ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷ ವಿಧಿಸಿದೆ.












Click it and Unblock the Notifications