ಬಾರ್ ಬಾಗಿಲು ಸೀಲ್; ಕೋಲಾರದಲ್ಲಿ ಹಿಂಬಾಗಿಲಿನಿಂದ ಮದ್ಯ ವ್ಯವಹಾರ

ಕೋಲಾರ, ಏಪ್ರಿಲ್ 23: ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಅಲ್ಲಲ್ಲಿ ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ಮದ್ಯ ತಯಾರಿಯಂತಹ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಬಾರ್‌ಗಳಿಗೆ ಅಬಕಾರಿ ಇಲಾಖೆ ಬೀಗ ಹಾಕಿ ಸೀಲ್ ಮಾಡಿದ್ದರೂ ಅಕ್ರಮವಾಗಿ ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ.

ಕೋಲಾರದ ಬಂಗಾರಪೇಟೆ ತಾಲೂಕಿನ ಕಾಮಸಮುದ್ರದಲ್ಲೂ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಹೆಚ್ಚಾಗಿವೆ. ಬಂಗಾರಪೇಟೆ ತಾಲೂಕಿನಲ್ಲಿ 80ಕ್ಕೂ ಹೆಚ್ಚು ಬಾರ್‌ಗಳಿದ್ದು, ಅಬಕಾರಿ ಇಲಾಖೆಯವರು ಮುಂಬಾಗಿಲಿಗೆ ಬೀಗ ಹಾಕಿ, ಸೀಲ್ ಮಾಡಿದ್ದಾರೆ. ಆದರೆ, ಮಾಲೀಕರು ಹಿಂಬಾಗಿಲಿನಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

Illegal Alcohol Selling Cases Increasing In Bangarapete

ಇಲ್ಲಿನ ಬೂದಿ ಕೋಟೆ, ಕಾಮಸಮುದ್ರ ಹೋಬಳಿ, ವಿ.ಕೋಟೆ ಗಡಿ ಭಾಗ, ರಾಜ್‌ಪೇಟ್ ರೋಡ್‌ ಬಳಿ ಇರುವ ಬಾರ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಜೊತೆಗೆ ಪಟ್ಟಣದ ಬಸ್‌ ನಿಲ್ದಾಣದ ಸಮೀಪವಿರುವ ಬಾರ್‌ನಲ್ಲಿ 508 ಪ್ಯಾಕೆಟ್‌ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭ ಕಾಮಸಮುದ್ರ ಪೊಲೀಸರು ಮಾಲು ಸಮೇತ ಹಿಡಿದಿದ್ದಾರೆ.

ಲಾಕ್‌ ಡೌನ್‌ ಆಗಿರುವ ಸಂದರ್ಭವನ್ನೇ ಲಾಭಕ್ಕೆ ಬಳಕೆ ಮಾಡಿಕೊಂಡಿರುವ ಬಾರ್‌ ಮಾಲೀಕರು ಮದ್ಯವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+