ಕೋಲಾರ: ಪ್ರೇಮ ಪ್ರಕರಣ ಗೊತ್ತಾಗಿದ್ದಕ್ಕೆ ಮಗಳನ್ನು ಹೊಡೆದು ಕೊಂದ ತಾಯಿ
ಕೋಲಾರ, ಜೂನ್ 6: ಮಗಳ ಪ್ರೇಮ ಪ್ರಕರಣ ಬೆಳಕಿಗೆ ಬಂದಿದ್ದಕ್ಕೆ ತಾಯಿಯೇ ಮಗಳನ್ನು ಹೊಡೆದು ಕೊಂದ ಘಟನೆ ಕೋಲಾರದ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಮಗಳು ರಾಜೇಶ್ವರಿ ಸಾವಿಗೀಡಾದ ದುರ್ದೈವಿ. ಮಗಳು ರಾಜೇಶ್ವರಿ ಯುವಕನೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ತಾಯಿ ವೆಂಕಮ್ಮರಿಗೆ ಗೊತ್ತಾಗಿತ್ತು. ಇದರಿಂದ ಸಿಟ್ಟಾದ ವೆಂಕಪ್ಪ ಮಗಳನ್ನು ಕೋಲಿನಿಂದಲೇ ಹೊಡೆದು ಕೊಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಾಯಿ ವೆಂಕಮ್ಮರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಮದುವೆಯಾಗಿ ಗರ್ಭಿಣಿಯಾಗಿದ್ದ ಮಹಿಳೆಯ ಮರ್ಯಾದಾ ಹತ್ಯೆ ಬೆಳಗಾವಿಯಲ್ಲಿ ನಡೆದಿತ್ತು. ಇದೀಗ ಕೇವಲ ಪ್ರೀತಿಸಿದ್ದಕ್ಕೆ ಇಲ್ಲಿ ಯುವತಿಯನ್ನೇ ಕೊಲೆ ಮಾಡಲಾಗಿದೆ.












Click it and Unblock the Notifications