ಸಂಪೂರ್ಣ ಲಾಕ್ ಡೌನ್; ಕೋಲಾರ ಟೊಮೋಟೊ ಮಾರುಕಟ್ಟೆ ಓಪನ್

ಕೋಲಾರ, ಜುಲೈ 05 : "ಜುಲೈ ತಿಂಗಳ 4 ಭಾನುವಾರಗಳಂದೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವ್ಯಾಪಾರ ವಹಿವಾಟಿಗೆ ಅನುಮತಿಯನ್ನು ಕಲ್ಪಿಸಲಾಗಿದೆ. ವ್ಯಾಪಾರ ವಹಿವಾಟನ್ನು ಯಥಾವತ್ತಾಗಿ ನಡೆಸಬಹುದಾಗಿದೆ" ಎಂದು ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ಕರ್ನಾಟಕ ಸರ್ಕಾರ ಜುಲೈ 5ರಿಂದ ಮುಂದಿನ ಆದೇಶದ ತನಕ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಸ್, ಕ್ಯಾಬ್, ಆಟೋಗಳ ಸಂಚಾರ ಸಹ ಬಂದ್ ಆಗಲಿದೆ.

ಕೋಲಾರದ ಟೊಮೇಟೊ ಮಾರುಕಟ್ಟೆಗೆ ಸಂಪೂರ್ಣ ಲಾಕ್ ಡೌನ್ ಅನ್ವಯವಾಗುವುದಿಲ್ಲ. ಜುಲೈ ತಿಂಗಳ ಪ್ರತಿ ಭಾನುವಾರ ಮಾರುಕಟ್ಟೆ ತೆರೆದಿರಲು ಅವಕಾಶ ನೀಡಲಾಗಿದೆ. ವ್ಯಾಪಾರ ವಹಿವಾಟು ಎಂದಿನಂತೆ ನಡೆಯಲಿದೆ.

Tomato Market

"ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಟಮೋಟೊ ಮಾರುಕಟ್ಟೆ ಇದಾಗಿದ್ದು, ಪ್ರತಿದಿನ 15-20 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಇಲ್ಲಿ ನಡೆಯುತ್ತದೆ. ಈ ಮಾರುಕಟ್ಟೆಗೆ ಸ್ಥಳದ ಅಭಾವ ಇದ್ದು ಈ ಬಗ್ಗೆ ಸಹಕಾರ ಸಚಿವರ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಯನ್ನು ಅತ್ಯಾಧುನಿಕವಾಗಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು" ಎಂದು ಸಚಿವರು ಹೇಳಿದ್ದಾರೆ.

ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಾತನಾಡಿದ್ದು, "ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ಕಾರ್ಮಿಕರು ಹಾಗೂ ರೈತರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೆಲಸ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುವ ಕಡೆ ಗಮನಹರಿಸಬೇಕೆಂದು" ಅಧಿಕಾರಿಗಳಿಗೆ ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+