ಮೇ 30ಕ್ಕೆ ಕೋಲಾರ ಶಾಲಾ ಕಾಲೇಜುಗಳಿಗೆ ರಜೆ: ಡಿಸಿ ಆದೇಶ
ಬೆಮೆಲ್ ಕಂಪನಿಯ ಖಾಸಗಿಕರಣ ಪ್ರಯತ್ನ ವಿರೋಧಿಸಿ ಕಾರ್ಮಿಕರ ಸಂಘವು ಕೋಲಾರ ಬಂದ್ ಗ ಕರೆ ಕೊಟ್ಟಿದೆ.
ಕೋಲಾರ, ಮೇ 29: ಪ್ರತಿಷ್ಠಿತ ಬೆಮೆಲ್ ಕಂಪನಿಯನ್ನು ಖಾಸಗೀಕರಣ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಕಾರ್ಖಾನೆಯ ಕಾರ್ಮಿಕ ಸಂಘಟನೆಗಳು ಮೇ 30ರಂದು ಕರೆ ಕೊಟ್ಟಿರುವ ಕೋಲಾರ ನಗರ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಕೋಲಾರದ ಶಾಲಾ, ಕಾಲೇಜುಗಳಿಗೆ ಮೇ 30ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಕೆ.ವಿ. ತ್ರಿಲೋಕ ಚಂದ್ರ ಆದೇಶ ಹೊರಡಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ಇರಲಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ ಎಂದು ತಿಳಿಸಿರುವ ಅವರು, ಪರಿಸ್ಥಿತಿ ನೋಡಿಕೊಂಡು ಕೆಎಸ್ ಆರ್ ಟಿಸಿ ಬಸ್ ಗಳನ್ನು ಓಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications