ಭಟ್ಕಳದಲ್ಲಿ ಹನ್ನೆರಡು ವರ್ಷದ ಬಾಲಕನ ಮೇಲೆ 18 ವರ್ಷದ ಯುವಕನಿಂದ ಲೈಂಗಿಕ ದೌರ್ಜನ್ಯ!
ಭಟ್ಕಳ, ಆಗಸ್ಟ್.05: 12 ವರ್ಷದ ಬಾಲಕನೊಬ್ಬನ ಮೇಲೆ 18 ವರ್ಷದ ಯುವಕನೊಬ್ಬ ಲೈಂಗಿಕವಾಗಿ ದೌರ್ಜನ್ಯ ಎಸಗಿರುವ ವಿಚಿತ್ರ ಘಟನೆ ಪಟ್ಟಣದ ಗುಡ್‌ಲಕ್ ರಸ್ತೆಯ ಎರಡನೇ ಕ್ರಾಸ್ ನಲ್ಲಿ ನಡೆದಿದೆ. ಪಟ್ಟಣದ ಗುಡ್‌ಲಕ್ ರಸ್ತೆಯ ಎರಡನೇ ಕ್ರಾಸ್ ನಿವಾಸಿ ಅಬ್ದುಲ್ ದಾಯೀಮ್ ಫಕ್ದೇ (18) ಬಂಧಿತ ಆರೋಪಿ.
ಬಾಲಕನೊಬ್ಬ ಅಂಗಡಿಗೆ ಹೋಗಿ ಬರುತ್ತಿದ್ದಾಗ ದಾರಿ ಮಧ್ಯೆ ಹಣ ಕಳೆದುಕೊಂಡಿದ್ದ. ಆಗ ಆರೋಪಿಯು ಹಿಂದಿನಿಂದ ಬಂದು ಬಾಲಕನ ಬಾಯಿಯನ್ನು ಒತ್ತಿ ಹಿಡಿದು ರಸ್ತೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಳಗೆ ಎಳೆದುಕೊಂಡು ಹೋಗಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಬಾಲಕನ ಅಜ್ಜಿ ದೂರು ನೀಡಿದ್ದಾರೆ.
ಗ್ರಾಮೀಣ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಳೆದ ತಿಂಗಳು ಧಾರವಾಡದಲ್ಲಿ ಮೂರು ವರ್ಷದ ಬಾಲಕನ ಮೇಲೆ 70 ವರ್ಷದ ವೃದ್ಧ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿತ್ತು. ಮೊಮ್ಮಗನನ್ನು ಸ್ಕೂಲ್‌ನಿಂದ ಕರೆದುಕೊಂಡು ಹೋಗಲು ಅಂತಾ ಬಂದಿದ್ದ, ನಗರದ ನಿವಾಸಿ ಮನೋಹರ್ ಕುಲಕರ್ಣಿ ಎಂಬಾತ ಬಾಲಕನೋರ್ವನ ಮೇಲೆ ಶಾಲೆಯ ಪಕ್ಕದ ಮೈದಾನದಲ್ಲಿ ಪೈಶಾಚಿಕ ಕೃತ್ಯ ನಡೆಸಿದ್ದನು ಎಂದು ಆರೋಪಿಸಲಾಗಿತ್ತು.












Click it and Unblock the Notifications