Get Updates
Get notified of breaking news, exclusive insights, and must-see stories!

ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಉತ್ತರ ಕನ್ನಡ ಜಿಲ್ಲಾಡಳಿತ: ಮತದಾರರ ವಿವರ ಇಲ್ಲಿದೆ

ಕಾರವಾರ, ಜನವರಿ 24: ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಸ್ತುತ 6,04,466 ಪುರುಷರು ಮತ್ತು 6,02,961 ಮಹಿಳೆಯರು ಹಾಗೂ 6 ಇತರೆ ಸೇರಿದಂತೆ ಒಟ್ಟು 12,07,433 ಮತದಾರರು ದಾಖಲಿಸಿಕೊಂಡಿದ್ದಾರೆ.

ಜ.1 2024 ಅರ್ಹತಾ ದಿನದಂತೆ ಅಂತಿಮ ಮತದಾರರ ಪಟ್ಟಿಯನ್ನು 22-1-2024 ರಂದು ಜಿಲ್ಲೆಯ ಎಲ್ಲ ಮತದಾರರ ನೋಂದಣಾಧಿಕಾರಿಗಳ (ಸಹಾಯಕ ಆಯುಕ್ತರ) ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ (ತಹಶೀಲ್ದಾರ) ಕಚೇರಿ ಹಾಗೂ ಆಯಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ.

Uttara Kannada District Administration Has Started Preparations For The Lok Sabha Election 2024

ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸಲಾಗಿದ್ದು, ಯಾವುದೇ ಆಕ್ಷೇಪಗಳಿದ್ದರೆ ಫೆಬ್ರವರಿ ಅಂತ್ಯದೊಳಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು, ದಿ:27-10-2023 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 11,98,532 ಮತದಾರರಿದ್ದು, ಪ್ರಸ್ತುತ 8,901 ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 1,435 ಮತಗಟ್ಟೆಗಳಿಗೆ ಸಂಬಂಧಿಸಿದಂತೆ, 76-ಹಳಿಯಾಳ ವಿಧಾನಸಭಾ ಕ್ಷೇತ್ರದ 215 ಮತಗಟ್ಟೆಯಲ್ಲಿ 91,869 ಪುರುಷ ಮತದಾರರು, 91,166 ಮಹಿಳಾ ಮತದಾರರು ಮತ್ತು 1 ಇತರೆ ಮತದಾರರು ಸೇರಿದಂತೆ ಒಟ್ಟು 1,83,036 ಮತದಾರರಿದ್ದಾರೆ.

77-ಕಾರವಾರ ವಿಧಾನಸಭಾ ಕ್ಷೇತ್ರದ 258 ಮತಗಟ್ಟೆಯಲ್ಲಿ 1,09,378 ಪುರುಷ ಮತದಾರರು, 1,12,786 ಮಹಿಳಾ ಮತದಾರರು ಮತ್ತು 1 ಇತರೆ ಮತದಾರರು ಸೇರಿದಂತೆ ಒಟ್ಟು 2,22,165 ಮತದಾರರಿದ್ದಾರೆ.

Uttara Kannada District Administration Has Started Preparations For The Lok Sabha Election 2024

78-ಕುಮಟಾ ವಿಧಾನಸಭಾಕ್ಷೇತ್ರದ 215 ಮತಗಟ್ಟೆಯಲ್ಲಿ 94,624 ಪುರುಷ ಮತದಾರರು, 95,229 ಮಹಿಳಾ ಮತದಾರರು ಮತ್ತು 3 ಇತರೆ ಮತದಾರರು ಸೇರಿದಂತೆ ಒಟ್ಟು 1,89,856 ಮತದಾರರಿದ್ದಾರೆ. 79-ಭಟ್ಕಳ ವಿಧಾನಸ ಭಾಕ್ಷೇತ್ರದ 248 ಮತಗಟ್ಟೆಯಲ್ಲಿ 1,14,053 ಪುರುಷ ಮತದಾರರು, 1,11,075 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,25,128 ಮತದಾರರಿದ್ದಾರೆ.

80-ಶಿರಸಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಯಲ್ಲಿ 1,01,484 ಪುರುಷ ಮತದಾರರು, 1,01,163 ಮಹಿಳಾ ಮತದಾರರು ಮತ್ತು 1 ಇತರೆ ಮತದಾರರು ಸೇರಿದಂತೆ ಒಟ್ಟು 2,02,648 ಮತದಾರರಿದ್ದಾರೆ. 81-ಯಲ್ಲಾಪುರ ವಿಧಾನಸಭಾ ಕ್ಷೇತ್ರದ 233 ಮತಗಟ್ಟೆಯಲ್ಲಿ 93,058 ಪುರುಷ ಮತದಾರರು, 91,542 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,84,600 ಮತದಾರರಿದ್ದಾರೆ ಎಂದರು.

2024ರ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಒಟ್ಟು 29,229 ಹಿರಿಯ ನಾಗರೀಕ ಮತದಾರರು, 24,399 ಯುವ ಮತದಾರರು, ಹಾಗೂ 15,579 ವಿಕಲಚೇತನ ಮತದಾರರಿದ್ದಾರೆ.

ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜಿಸಿದ ಮತದಾರರ ಪಟ್ಟಿ ವೀಕ್ಷಕರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ, ತೆಗೆದು ಹಾಕುವಿಕೆ ಮುಂತಾದ ಅಂಶಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಜಿಲ್ಲೆಯ ಮತದಾರರು ತಮ್ಮ ಹೆಸರು ಮತ್ತು ವಿವರಗಳು ಸರಿಇವೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟ ಮತಗಟ್ಟೆ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಅಥವಾ ಸಂಬಂಧಪಟ್ಟ ತಹಶೀಲ್ದಾರ ಕಚೇರಿ ಅಥವಾ https://ceo.karnataka.gov.in ಮತ್ತು https://uttarakannada.nic.in ನಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ ಎಂದರು.

2024 ರ ಲೋಕಸಭಾಚುನಾವಣೆ ಸಂಬಂಧ ಜಿಲ್ಲೆಗೆ ಒಟ್ಟು 1945 ಕಂಟ್ರೋಲ್‍ಂ ಯುನಿಟ್, 2756 ಬ್ಯಾಲೆಟ್ ಯುನಿಟ್ ಹಾಗೂ 2035 ವಿವಿಪ್ಯಾಟ್‍ಗಳು ಹಂಚಿಕೆಯಾಗಿದ್ದು, ಪ್ರಥಮ ಹಂತದ ಪರಿಶೀಲನೆ ಪೂರ್ಣಗೊಳಿಸಲಾಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+