ಜಾತ್ರೆಯಾಗಿ ಬದಲಾದ ಬ್ರಿಟೀಷರನ್ನೇ ಅಣುಕಿಸಿದ್ದ ಹಾಲಕ್ಕಿ ಹಗರಣ: ದಿಂಡಿ ಉತ್ಸವದ ಸಂಪೂರ್ಣ ಮಾಹಿತಿ
ಕಾರವಾರ, ಡಿಸೆಂಬರ್ 25: ಜಾತ್ರೆಗಳು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ನಡೆಯುತ್ತದೆ. ಆದರೆ ಇಲ್ಲೊಂದು ಊರಿನಲ್ಲಿ ಈ ಹಿಂದೆ ಬ್ರಿಟೀಷರನ್ನೇ ಅಣುಕಿಸಿ ಮಾಡುತ್ತಿದ್ದ ಹಾಲಕ್ಕಿ ಹಗರಣವೊಂದು ಇಂದಿಗೂ ಜಾತ್ರೆ ವೇಳೆ ನಡೆಸಿಕೊಂಡು ಬರಲಾಗುತ್ತಿದೆ. ಹಗರಣದಲ್ಲಿ ಬೃಹತ್ ಪ್ರಾಣಿಗಳ ಮಾದರಿ, ಬಾವಲಿ, ಮಂಗನ ಕಾಟ, ಕುಡಿದು ವಾಹನ ಚಲಾಯಿಸುತ್ತುರುವುದು ಸೇರಿದಂತೆ ವಿವಿಧ ಮಾದರಿಗಳ ಪ್ರದರ್ಶನ ಸಾವಿರಾರು ಜನರ ಆಕರ್ಷಣೆಗೆ ಕಾರಣವಾಯಿತು.
ಅಮದಳ್ಳಿಯ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಚರಣೆ ಮಾಡಲಾಗುತ್ತದೆ. ಇದನ್ನು ದಿಂಡಿ ಜಾತ್ರೆ ಎಂದು ಕೂಡ ಕರೆಯಲಾಗುತ್ತದೆ. ಬ್ರಿಟೀಷರ ಕಾಲದಿಂದಲೂ ಹಾಲಕ್ಕಿ ಸಮುದಾಯದವರಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಾಲಕ್ಕಿ ಹಗರಣವನ್ನು ಇಂದಿಗೂ ಚಾಚು ತಪ್ಪದೆ ಆಚರಣೆ ಮಾಡುತ್ತಿದೆ.

ಇತ್ತೀಚಿಗೆ ಕೂಡ ಬೃಹತ್ ಗಾತ್ರದ ಈ ಪ್ರಾಣಿಗಳ ಮಾದರಿಯನ್ನು ಹೊತ್ತುಕೊಂಡು ಕಾಡು ಜನರ ವೇಷಭೂಷಣದಲ್ಲಿ ಬಂದ ಜನರು ಕೂಡ ನೆರೆದವರನ್ನು ರಂಜಿಸುವ ಪ್ರಯತ್ನ ನಡೆಸಿದರು. ಇದಲ್ಲದೆ ಸಿಂಹದ ರೂಪದ ಬಾಲದಲ್ಲಿಯೂ ತಲೆ ಮಾದರಿ ಹೊಂದಿದ್ದ ಪ್ರಾಣಿ ಮಾದರಿ, ಬಾವಲಿ, ವಿವಿಧ ಬೃಹತ್ ಪ್ರಾಣಿಗಳು ಜನರ ಮೆಚ್ಚುಗೆಗೆ ಪಾತ್ರವಾಯಿತು. ಇದಲ್ಲದೆ ತೋಳ, ವಿವಿಧ ದೇವರ ಮಾದರಿಗಳನ್ನು ಸಹ ಪ್ರದರ್ಶಿಸಲಾಯಿತು. ಜೊತೆಗೆ ಯಕ್ಷಗಾನ, ಅಯ್ಯಪ್ಪ ಸ್ವಾಮಿ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನ ಮಾಡಲಾಯಿತು.
ಈ ಹಿಂದೆ ಬ್ರಿಟೀಷರ ಕ್ರೌರ್ಯ, ದಬ್ಬಾಳಿಕೆಯನ್ನು ವ್ಯಕ್ತಪಡಿಸಲು ಭಾಷೆ ಬಾರದ ಹಾಲಕ್ಕಿ ಸಮುದಾಯದವರು ಈ ರೀತಿ ಅಣಕು ಪ್ರದರ್ಶನಗಳ ಮೂಲಕ ಖಂಡಿಸಿ ಆಂಗ್ಲರ ಕಿವಿ ಹಿಂಡುತ್ತಿದ್ದರು. ಅಂದಿನಿಂದಲೂ ಹಾಲಕ್ಕಿ ಸಮುದಾಯದವರು ಹಗರಣವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರಸ್ತುತವಾಗಿ ನಡೆಯುತ್ತಿರುವ ಘಟನೆಗಳನ್ನು ಆಧರಿಸಿ ಇದೀಗ ಸ್ಥಳೀಯ ಯುವಕರು ಇವುಗಳನ್ನು ಮನರಂಜನೆಯಾಗಿಯೂ ವಿವಿಧ ಮಾದರಿಗಳನ್ನು ಸಿದ್ದಪಡಿಸುತ್ತಿದ್ದಾರೆ.

ಇದೀಗ ಈ ಉತ್ಸವವನ್ನು ಕೇವಲ ಹಾಲಕ್ಕಿ ಸಮುದಾಯದವರು ಮಾತ್ರ ಮಾಡುವುದಿಲ್ಲ. ಎಲ್ಲ ಸಮುದಾಯದ ಯುವಕರು ಸೇರಿ ಒಗ್ಗಟ್ಟಾಗಿ ನಮ್ಮೂರಿನ ಹಬ್ಬವಾಗಿ ಆಚರಣೆ ಮಾಡುತ್ತಾರೆ. ಈ ಪ್ರದರ್ಶನ ನೋಡುವುದಕ್ಕಾಗಿಯೇ ನಮ್ಮ ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರದಿಂದಲೂ ಜನ ಬರುತ್ತಾರೆ. ತುಂಬಾ ವಿಜ್ರಂಭಣೆಯಿಂದ ನಡೆಯುವ ಹಬ್ಬವನ್ನು ಜನರು ಕೂಡ ಯಾರ ಸಹಾಯವೂ ಇಲ್ಲದೆ ವರ್ಷಂಪ್ರತಿ ನಡೆಸಿಕ್ಕೊಂಡು ಹೋಗುತ್ತಿರುವುದು ಹೆಮ್ಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಗಂಟೆ ಪ್ರದರ್ಶನಕ್ಕೆ ತಿಂಗಳಿಗೂ ಹೆಚ್ಚು ಕಾಲ ಶ್ರಮ!
ನಮ್ಮ ಪೂರ್ವಜರು ಬ್ರಿಟೀಷರ ಕಾಲದಿಂದಲೂ ಜಾತ್ರಾ ಮಹೋತ್ಸವದ ವೇಳೆ ಆಚರಿಸಿಕೊಂಡು ಬರುತ್ತಿದ್ದ ಈ ಹಣಕು ಪ್ರದರ್ಶನವನ್ನು ನಾವೆಲ್ಲರೂ ಮುಂದುವರಿಸುತ್ತಿದ್ದೇವೆ. ಇದು ಕೇವಲ ಒಂದು ಗಂಟೆ ಪ್ರದರ್ಶನ ಅಂತ ಕಂಡರೂ ಈ ಪ್ರದರ್ಶನದ ಹಿಂದೆ ಯುವಕರು ತಿಂಗಳಿಗೂ ಹೆಚ್ಚು ಕಾಲ ಬಿಡುವಿನ ಸಮಯವನ್ನು ಈ ಮಾದರಿಗಳ ತಯಾರಿಕೆಗೆ ಬಳಸುತ್ತಾರೆ. ಇಷ್ಟೊಂದು ದೊಡ್ಡ ಮಟ್ಟದ ಉತ್ಸವವಾದರೂ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಒಂದು ರೂ ಕೋಡುವುದಿಲ್ಲ.
ಊರಿನ ಯುವಕರೇ ತಾವು ಕೂಡಿಟ್ಟ ಹಣವನ್ನು ಬಳಸುತ್ತಾರೆ. ಕನಿಷ್ಟ ಅಂದರು ಒಂದು ಮಾದರಿಯ ಪ್ರಾಣಿ ತಯಾರಿಸಲು 25-35 ಸಾವಿರ ಕರ್ಚಾಗುತ್ತದೆ. ಆದರೆ ಇದನ್ನು ನಾವು ಯಾರ ಬಳಿಯೂ ಬೇಡುವುದಿಲ್ಲ. ಸರ್ಕಾರ ಇಂತಹ ಜನಪದ ಉತ್ಸವವನ್ನು ಪ್ರೋತ್ಸಾಹಿಸಲು ಕೆಲಸ ಮಾಡಬೇಕು. ಅಂದಾಗ ಇಂತಹ ಪ್ರದರ್ಶನಗಳಿಗೆ ಇನ್ನಷ್ಟು ಉತ್ಸಾಹ ದೊರೆಯುತ್ತದೆ ಎಂದು ಸ್ಥಳೀಯರಾದ ಶ್ರೀಕಾಂತ ಗೌಡ ಹೇಳಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications