ಕಾರವಾರದಲ್ಲಿ ಸೇತುವೆಯಿಂದ ಚರಂಡಿಗೆ ಬಿದ್ದ ಕಾರು; ಇಬ್ಬರ ಸಾವು

ಕಾರವಾರ, ನವೆಂಬರ್ 03: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕಾರೊಂದು ಕೆಳಗೆ ಬಿದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ಮುಂಜಾನೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.

ಚಿಕ್ಕಮಗಳೂರು ಮೂಲದ ಕಿರಣ್ (28) ಹಾಗೂ ರಾಕೇಶ್ ಸಿ.ಆರ್ (28) ಘಟನೆಯಲ್ಲಿ ಮೃತಪಟ್ಟವರು. ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದು, ಗಂಭೀರವಾಗಿ ಗಾಯಗೊಂಡಿರುವ ಮತ್ತಿಬ್ಬರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Karwar: Two Dies And Two Injured In Accident Near London Bridge

ಅಂಕೋಲಾದಿಂದ ಗೋವಾ ಕಡೆಗೆ ಕಾರು ಚಲಿಸುತ್ತಿದ್ದ ಸಂದರ್ಭ, ಲಂಡನ್ ಬ್ರಿಡ್ಜ್ ಸಮೀಪದ ಪೆಟ್ರೋಲ್ ಬಂಕ್ ಗೆ ಹೋಗಿ ಮರಳುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆ ಮೇಲಿಂದ ಬೀಳುತ್ತಿದ್ದಂತೆ ಚರಂಡಿ ನೀರಿನಲ್ಲಿ ಮುಳುಗಿದೆ. ಕಾರಿನ ಎತ್ತರಕ್ಕೂ ನೀರು ತುಂಬಿದ್ದ ಪರಿಣಾಮ ಹೊರಬರಲಾಗದೇ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರವಾರ ಸಂಚಾರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Recommended Video

      RRNagar Congress Candidate Kusuma Exclusive Interview | ನಾನು ಯಾರನ್ನೂ ನಂಬೋಲ್ಲ !! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+