ಕಾರವಾರದಲ್ಲಿ ಇಂಟರ್ನಲ್ ಮಾರ್ಕ್ಸ್‌ ನೀಡಲು ಮಂಚಕ್ಕೆ ಕರೆಯುತ್ತಿದ್ದ ಪ್ರಿನ್ಸಿಪಾಲ್!

ಕಾರವಾರ, ಡಿಸೆಂಬರ್ 26: ಇಂಟರ್ನಲ್ ಮಾರ್ಕ್ಸ್ ನೀಡುವ ಆಮಿಷ ತೋರಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುವ ಇಲ್ಲಿನ ಸರ್ಕಾರಿ ನರ್ಸಿಂಗ್ ಸಂಸ್ಥೆಯ ಪ್ರಭಾರ ಪ್ರಾಂಶುಪಾಲರ ವಿರುದ್ಧ ಇದೀಗ ವಿದ್ಯಾರ್ಥಿನಿಯರು ತಿರುಗಿ ಬಿದ್ದಿದ್ದಾರೆ.

ಇಲ್ಲಿನ ಜಿಲ್ಲಾಸ್ಪತ್ರೆ ಅವರಣದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಗೋವಿಂದಪ್ಪ ಡಿ.ಕೆ., ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಅಂಕ ಮತ್ತು ಹಾಜರಾತಿ ನೀಡುವ ಆಸೆ ತೋರಿಸಿ ವಿದ್ಯಾರ್ಥಿನಿಯರಿಂದ ಹಣ ಮತ್ತು ಲೈಂಗಿಕ ಸಂಪರ್ಕ ಸಾಧಿಸುವಂತೆ ಪೀಡಿಸುತ್ತಿದ್ದ ಎಂದು ಹೆಸರು ಹೇಳಲಿಚ್ಛಿಸದ ಪಾಲಕರು ಆರೋಪಿಸಿದ್ದಾರೆ. ದುಂಬಾಲು ಬೀಳುತ್ತಿದ್ದ ಕೆಲ ವರ್ಷಗಳಿಂದ ಜಿಎನ್ ಎಂ ಸಂಸ್ಥೆಯಲ್ಲಿ ಪ್ರಭಾರಿ ಪ್ರಾಂಶುಪಾಲ ಹುದ್ದೆಯಲ್ಲಿರುವ ಈತ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದರು.

ನಿರಂತರವಾಗಿ ಮಾನಸಿಕ ಹಿಂಸೆಗೆ ತುತ್ತಾದ ಕೆಲ ವಿದ್ಯಾರ್ಥಿನಿಯರೂ ಇದೀಗ ಪ್ರಾಂಶುಪಾಲರ ವಿರುದ್ಧ ತಿರುಗಿಬಿದ್ದಿದ್ದಾರೆ. ಪಾಲಕರ ಬಳಿ ಹೇಳಿಕೊಳ್ಳುವಂತೆಯೂ ಇಲ್ಲದ ಸಮಸ್ಯೆಯಿಂದ ಬಳಲಿದ್ದವರೀಗ ಪಾಲಕರೊಂದಿಗೆ ಠಾಣೆಯ ಮೆಟ್ಟಿಲೇರಿದ್ದಾರೆ.

ಮಂಗಳವಾರ ನಗರಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯಲ್ಲಿಯೂ ಕಾಮುಕ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಿದ್ದಾರೆ.

ಹಣ ನೀಡಿ ಎಂದು ಪೀಡಿಸುತ್ತಿದ್ದ

ಹಣ ನೀಡಿ ಎಂದು ಪೀಡಿಸುತ್ತಿದ್ದ

ಆಂತರಿಕ ಅಂಕ ನೀಡಬೇಕೆಂದರೆ ತನಗೆ ಸಹಕರಿಸುವಂತೆ ದುಂಬಾಲು ಬೀಳುತ್ತಿದ್ದ ಗೋವಿಂದಪ್ಪ ಅಂಕಗಳಿಗಿಷ್ಟು ಹಣ ನೀಡಿ ಎಂದು ಪೀಡಿಸುತ್ತಿದ್ದನೆಂದು ಕೆಲ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯಿಂದ ಒತ್ತಾಯ

ವಿದ್ಯಾರ್ಥಿನಿಯಿಂದ ಒತ್ತಾಯ

ಪ್ರಾಂಶುಪಾಲ ಮತ್ತು ಕಾಲೇಜಿನ ಓರ್ವ ವಿದ್ಯಾರ್ಥಿನಿಯ ಸಲುಗೆ ರೇಖೆಯನ್ನೂ ದಾಟಿ ಸಾಗಿತ್ತು. ಪ್ರಾಂಶುಪಾಲರೊಂದಿಗೆ ಸಲುಗೆಯಿಂದಿದ್ದ ಆ ವಿದ್ಯಾರ್ಥಿನಿ ಹೆಚ್ಚು ಆಂತರಿಕ ಅಂಕಗಳಿಸುತ್ತಿದ್ದಳಲ್ಲದೆ, ಇತರ ವಿದ್ಯಾರ್ಥಿನಿಯರಿಗೂ ಆಸೆ ತೋರಿಸಿ ತನ್ನ ಮಾರ್ಗ ಹಿಡಿಯಲು ಬೋಧನೆ ಮಾಡುತ್ತಿದ್ದಳು ಎನ್ನಲಾಗಿದೆ.

ಆತ್ಮಹತ್ಯೆಗೆ ಯತ್ನ

ಆತ್ಮಹತ್ಯೆಗೆ ಯತ್ನ

ಜಿಎನ್ಎಂ ಪ್ರಭಾರಿ ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಸಂಸ್ಥೆಯ ವಿದ್ಯಾರ್ಥಿನಿಯೋರ್ವಳು ಕಳೆದ ತಿಂಗಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಆಕೆಯನ್ನು ಬಚಾವ್ ಮಾಡಲಾಗಿತ್ತು.

ಕಥೆಗಳೆಲ್ಲ ಬಿಚ್ಚಿಕೊಳ್ಳುತ್ತಿವೆ

ಕಥೆಗಳೆಲ್ಲ ಬಿಚ್ಚಿಕೊಳ್ಳುತ್ತಿವೆ

ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಪ್ರಾಂಶುಪಾಲರ ಉಪಟಳಕ್ಕೆ ಹೆದರಿ ಪ್ರಕರಣ ದಾಖಲಿಸಲು ಮುಂದಾಗಿರಲಿಲ್ಲ. ಆದರೆ ಇದೀಗ ಗೋವಿಂದಪ್ಪರ ಕಥಾನಕಗಳು ಒಂದೊಂದಾಗಿ ಹೊರಬರಲಾರಂಭಿಸುತ್ತಿದ್ದು , ಠಾಣೆಯಲ್ಲಿ ಕಥೆಗಳೆಲ್ಲ ಬಿಚ್ಚಿಕೊಳ್ಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+