ಕಾರು ಅಪಘಾತ: SSLC ಪರೀಕ್ಷೆ ಬರೆಯಲು ಕಾರವಾರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿ ಸಾವು

ಕಾರವಾರ, ಮಾರ್ಚ್ 21:ಇಂದಿನಿಂದ ಆರಂಭಗೊಂಡಿರುವ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಅಂಕೋಲಾ ಸಮೀಪ ನಡೆದಿದೆ.

ಭಟ್ಕಳದಿಂದ ಕಾರವಾರಕ್ಕೆ ಕಾರಿನಲ್ಲಿ ಮದರಸಾದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದರು. ಈ ವೇಳೆ ಅಂಕೋಲಾದ ಹೊಸೂರ್ ಸೇತುವೆ ಬಳಿ ಕಾರು ಪಲ್ಟಿಯಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

SSLC student died in a car accident near Ankola

ಮೃತ ವಿದ್ಯಾರ್ಥಿಯನ್ನು ಶಮಾಜ್ ಗೋಲ್ಟೆ ಎಂದು ಗುರುತಿಸಲಾಗಿದೆ. ಐದು ಮಂದಿ ತೆರಳುತ್ತಿದ್ದ ಕಾರಿನಲ್ಲಿ ಈತ ಪರೀಕ್ಷೆಗಾಗಿ ಕಾರವಾರಕ್ಕೆ ತೆರಳುತ್ತಿದ್ದ. ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+