ಕಾರವಾರ: ವನ್ನಳ್ಳಿ ಬೀಚ್‌ನ ಬಂಡೆ ಮೇಲೆ ಕುಳಿತು ಪೋಸ್ ನೀಡುತ್ತಿದ್ದ ವ್ಯಕ್ತಿ ಸಮುದ್ರಪಾಲು!
ಕಾರವಾರ, ಸೆಪ್ಟೆಂಬರ್ 15: ಸಾವಿನ ಮನೆಯಾಗಿ ಬದಲಾಗಿರುವ ಕಡಲ ತೀರಗಳಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ, ಸಾವಿನ ಸರಣಿ ಮಾತ್ರ ನಿಲ್ಲುತ್ತಿಲ್ಲ. ಸ್ನೇಹಿತರ ಜೊತೆ ಕುಮಟಾದ ವನ್ನಳ್ಳಿ ಬೀಚ್‌ಗೆ ಭೇಟಿ ನೀಡಿದ್ದ ಶಿರಸಿ ಮೂಲದ ವಕೀಲರೊಬ್ಬರು ಅಲೆಯ ಹೊಡೆತಕ್ಕೆ ಸಿಕ್ಕು ಸಮುದ್ರ ಪಾಲಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ವಕೀಲಿ ವೃತ್ತಿಯನ್ನು ಮಾಡುತ್ತಿದ್ದ ಶಿರಸಿಯ ಸುಬ್ರಹ್ಮಣ್ಯ ಗೌಡ ಎಂಬಾತ ಬುಧವಾರ ತನ್ನ ಸ್ನೇಹಿತರೊಡಗೂಡಿ ಕುಮಟಾ ತಾಲೂಕಿನ ವನ್ನಳ್ಳಿ ಬೀಚ್‌ಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಸ್ನೇಹಿತರೊಂದಿಗೆ ಬಂದು ಚೆನ್ನಾಗಿ ಮೋಜು ಮಸ್ತಿಯಲ್ಲಿ ನಿರತವಾಗಿದ್ದಾಗ ಅಲೆಗಳು ಬಂದು ಅಪ್ಪಳಿಸುತ್ತಿದ್ದ ಬಂಡೆಯ ಮೇಲೆ ತಪಸ್ಸಿಗೆ ಕುಳಿತಂತೆ ಪೋಸ್ ನೀಡುತ್ತಿದ್ದರು. ಭಾರೀ ಗಾತ್ರದ ಅಲೆಯೊಂದು ಬಂದು ಅಪ್ಪಳಿಸಿದ ರಭಸಕ್ಕೆ ಬಂಡೆಯ ಮೇಲೆ ಕುಳಿತಿದ್ದವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.
ಹೇಳಿದರೂ ಕೇಳದವರ ತಡೆಯುವವರ್ಯಾರು
ಕುಮಟಾ ಕಡಲತೀರದಲ್ಲಿ ಇತ್ತೀಚೆಗೆ ಪ್ರವಾಸಿಗರು ಸಮುದ್ರಕ್ಕಿಳಿದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಾಲೂಕಾಡಳಿತ, ಪೊಲೀಸರು ರೆಸಾರ್ಟ್ ಮಾಲೀಕರ ಸಭೆ ನಡೆಸಿ ಕಡಲಿಗಿಳಿಯುವವರ ಮೇಲೆ ಹದ್ದಿನ ಕಣ್ಣಿಡಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಅಷ್ಟು ಸಾಲದೆಂಬಂತೆ ಕುಮಟಾ ತಾಲೂಕಿನ ವ್ಯಾಪ್ತಿಯ ಕಡಲ ತೀರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಇದೆಲ್ಲವನ್ನೂ ಲೆಕ್ಕಿಸದೇ ನೀರಿಗಿಳಿದ ಕಾರಣ ಇಂದು ಮತ್ತೊಂದು ಸಾವಾಗಿದೆ.

ಮೃತ ಸುಬ್ರಹ್ಮಣ್ಯ ಗೌಡ ಮೊದಲ ಮಡದಿಗೆ ವಿಚ್ಛೇದನ ನೀಡಿ ಇನ್ನೊಂದು ವಿವಾಹವಾಗಿದ್ದ. ಎರಡನೇ ಹೆಂಡತಿಗೆ 7 ತಿಂಗಳ ಮಗು ಇರುವ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video
ಕುಮಟಾ ಕಡಲತೀರದಲ್ಲಿ ನಿಷೇಧಾಜ್ಞೆ ಜಾರಿ
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಪ್ರಸಿದ್ಧ ಪ್ರಮುಖ ಕಡಲತೀರಗಳಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಮೀನುಗಾರಿಕೆಗೆ ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ಅಕ್ಟೋಬರ್ 9ರವರೆಗೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ತಹಶೀಲ್ದಾರ ವಿವೇಕ ಶೇಣ್ವಿ ಆದೇಶಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ತಹಶೀಲ್ದಾರ ವಿವೇಕ ಶೇಣ್ವಿ, ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ, ಗುಡೇಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ ಹಾಗೂ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಬೀಚ್, ಕುಡ್ಲೆ ಬೀಚ್, ಮೇನ್ ಬೀಚ್ ಮತ್ತು ಹಾಪ್ ಮೂನ್ ಬೀಚ್‌ಗಳು ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ದಿನ ಸಾವಿರಾರು ಪ್ರವಾಸಿಗರು ಆಗಮಿಸಿ, ಕಡಲ ಸೌಂದರ್ಯಗಳನ್ನು ಸವಿಯುತ್ತಾರೆ. ಹೀಗೆ ಬಂದವರಲ್ಲಿ ಕೆಲ ಪ್ರವಾಸಿಗರು ಆಕಸ್ಮಿಕವಾಗಿ ಸಮುದ್ರ ಅಲೆಗೆ ಸಿಲುಕಿ ಅಥವಾ ಈಜಲು ಸಮುದ್ರದಲ್ಲಿ ಇಳಿದು ಅಲೆಯ ಸೆಳೆತಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವುದು ಪೊಲೀಸ್ ಇಲಾಖಾ ವರದಿಯಿಂದ ತಿಳಿದು ಬಂದಿದೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2010ನೇ ಸಾಲಿನಿಂದ ಈವರೆಗೂ ಬೀಚ್‌ಗಳಲ್ಲಿ ಈಜಲು ಹೋಗಿ ಹಾಗೂ ಆಕಸ್ಮಿಕ ಸಮುದ್ರದ ಅಲೆ ಅಪ್ಪಳಿಸಿ ಮುಳಗಿ ಮೃತಪಟ್ಟ ಪ್ರಕರಣಗಳ ಅಂಕಿ-ಅಂಶ ಮಾಹಿತಿಯಂತೆ 2020 ಡಿಸೆಂಬರ್‌ವರೆಗೆ ಸುಮಾರು 67 ಮತ್ತು 2021 ಜನವರಿಯಿಂದ ಈವರೆಗೆ ಸುಮಾರು 9 ಜನರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕುಮಟಾ ತಾಲೂಕಿನ ಬೀಚ್‌ಗಳಲ್ಲಿ ಘಟಿಸಿದ ಅಸಹಜ, ಅಸ್ವಾಭಾವಿಕ ದುರ್ಮರಣಗಳ ಪ್ರಕರಣಗಳ ಕುರಿತು ಸಂಬಂಧಿಸಿದ ಕಂದಾಯ ಇಲಾಖಾ, ಪೊಲೀಸ್ ಇಲಾಖಾ, ಸ್ಥಳೀಯ ಸಂಸ್ಥೆ, ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಮತ್ತು ಬೀಚ್‌ಗಳಿಗೆ ಲಗತ್ತಿರುವ ರೆಸಾರ್ಟ್ ಮಾಲೀಕರಿಗೆ ಪ್ರವಾಸಿಗರ ಆಕಸ್ಮಿಕ ಮರಣಗಳ ಹಾಗೂ ಅಹಿತಕರ ಘಟನೆಯನ್ನು ತಪ್ಪಿಸಲು ಸಲಹೆ- ಸೂಚನೆಯನ್ನು ಪಾಲಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications