ಬೆಂಗಳೂರು-ಕಾರವಾರ ರೈಲು ವೇಗ ಹೆಚ್ಚಳ, ವೇಳಾಪಟ್ಟಿ
ಕಾರವಾರ, ಜನವರಿ 22; ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ- ಕಾರವಾರ ನಡುವೆ ಸಂಚಾರ ನಡೆಸುವ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಜನವರಿ 31ರಿಂದ ರೈಲಿನ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ.
ಕೆಎಸ್ಆರ್ ಬೆಂಗಳೂರು-ಕಾರವಾರ ನಡುವೆ ಸಂಚಾರ ನಡೆಸುವ ಎಕ್ಸ್‌ಪ್ರೆಸ್ ರೈಲು (06585/ 06586) ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹಾಸನದ ನಡುವೆ ಗರಿಷ್ಠ ವೇಗದಲ್ಲಿ ಚಲಿಸಲಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಇದ್ದ ನಿಲುಗಡೆಯನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು ಹಾಸನದ ನಡುವೆ ಮಾತ್ರ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಸಕಲೇಶಪುರದಿಂದ ಕಾರವಾರದ ನಡುವೆ ಈ ಮೊದಲಿನ ಸಮಯದಲ್ಲೇ ರೈಲು ಸಂಚರಿಸಲಿದೆ.

06585 ಸಂಖ್ಯೆಯ ರೈಲು ವೇಳಾಪಟ್ಟಿ : 06585 ಸಂಖ್ಯೆಯ ರೈಲು ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಹೊರಡಲಿದೆ. ಸಂಜೆ 6.40ಕ್ಕೆ ರೈಲು ಹೊರಡಲಿದ್ದು, 6.50ಕ್ಕೆ ಯಶವಂತಪುರ, 8.24ಕ್ಕೆ ಚನ್ನಪಟ್ಟಣ, 9.15ಕ್ಕೆ ಹಾಸನ, 10.10ಕ್ಕೆ ಸಕಲೇಶಪುರ ತಲುಪಲಿದೆ.
ರಾತ್ರಿ 1.20ಕ್ಕೆ ಸುಬ್ರಹ್ಮಣ್ಯ ರೋಡ್, 2.08ಕ್ಕೆ ಕಬಕ ಪುತ್ತೂರು, 2.39ಕ್ಕೆ ಬಂಟ್ವಾಳ, 3:57ಕ್ಕೆ ಸುರತ್ಕಲ್, 4:12ಕ್ಕೆ ಮೂಲ್ಕಿ, 4:30ಕ್ಕೆ ಉಡುಪಿ, ಬಾರ್ಕೂರ್ 4:42, 4:54ಕ್ಕೆ ಕುಂದಾಪುರಕ್ಕೆ ಬರಲಿದೆ.
5:18ಕ್ಕೆ ಮೂಕಾಂಬಿಕಾ ರೋಡ್ ಬೈಂದೂರು, 5:42ಕ್ಕೆ ಭಟ್ಕಳ, 5:56ಕ್ಕೆ ಮುರುಡೇಶ್ವರ, 6:16ಕ್ಕೆ ಹೊನ್ನಾವರ, 6:32ಕ್ಕೆ ಕುಮಟಾ, 6:50ಕ್ಕೆ ಗೋಕರ್ಣ ರೋಡ್, 7:02ಕ್ಕೆ ಅಂಕೋಲಾ, ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ.
Passengers may kindly note, TrNo. 06585 KSR Bengaluru - Karwar special express will run with higher speed to revised timings from 31st Jan.
— South Western Railway (@SWRRLY) January 21, 2021
Stoppage at Bangarapet is eliminated
#TrainUpdates #SWRRLYTrainupdates pic.twitter.com/U2b9giUiX5












Click it and Unblock the Notifications