Tamil Nadu Election 2026: ತಮಿಳುನಾಡು ಇತಿಹಾಸದಲ್ಲೇ ಶೇ. 84.41 ದಾಖಲೆಯ ಮತದಾನ; ಆಡಳಿತರೂಢ ಡಿಎಂಕೆಗೆ ಮತ ವಿಭಜನೆಯ ಆತಂಕ

Tamil Nadu Election 2026: ತಮಿಳುನಾಡಿನ ವಿಧಾನಸಭೆ ಚುನಾವಣೆ 2026ರ ಮತದಾನ ಪ್ರಕ್ರಿಯೆಯು ಗುರುವಾರ - ಏಪ್ರಿಲ್ 23ರಂದು ನಡೆದಿದೆ. ತಮಿಳುನಾಡಿನ ವಿಧಾನಸಭೆಯ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ವಿಶೇಷವಾಗಿತ್ತು. ನಟ ಹಾಗೂ ರಾಜಕಾರಣಿ ವಿಜಯ್ ಎಂಟ್ರಿ ಹಾಗೂ ಯುವ ಮತದಾರರನ್ನು ಸೆಳೆಯುತ್ತಿರುವುದು ಹೆಚ್ಚು ಹೆಚ್ಚು ಮತದಾರರು ಮತದಾನದಲ್ಲಿ ಭಾಗಿಯಾಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದರೊಂದಿಗೆ ತಮಿಳಗ ಮುನ್ನೇತ್ರ ಕಳಗಂ (ಡಿಎಂಕೆ)ಯೂ ಯುವ ಹಾಗೂ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದ್ದು, ತಮಿಳುನಾಡಿನ ಇತಿಹಾಸದಲ್ಲೇ ದಾಖಲೆಯ ಮತದಾನವಾಗಿದೆ. ಸಂಜೆ 5 ಗಂಟೆಯ ವೇಳೆಗೆ ಭರ್ಜರಿ ಮತದಾನವಾಗಿದೆ. ಸಂಜೆ 6 ಗಂಟೆಯ ವರೆಗೆ ಎಷ್ಟು ಮತದಾನವಾಗಿದೆ ಎನ್ನುವುದು ಇನ್ನು ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿದೆ.

Tamil Nadu Election 2026

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 23ರ ಗುರುವಾರ ಮತದಾನ ನಡೆದಿದೆ. ತಮಿಳುನಾಡಿನ ಇತಿಹಾಸದಲ್ಲೇ ಇದು ದಾಖಲೆಯ ಮತದಾನ ಎಂದು ಪರಿಗಣಿಸಲಾಗಿದೆ. ತಮಿಳುನಾಡಿನಲ್ಲಿ ಸಂಜೆ 5 ಗಂಟೆಯ ವೇಳೆಗೆ 82.24% ಜನರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ಮತದಾನ ಎಂದು ಪರಿಗಣಿಸಲಾಗಿದೆ.

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು ಮುಂದುವರಿದಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ತಮ್ಮ ಮೈತ್ರಿ ಪಕ್ಷಗಳನ್ನೇ ನಂಬಿಕೊಂಡಿವೆ. ಡಿಎಂಕೆಯೊಂದಿಗೆ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಂಡಿದ್ದರೆ, ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೆ ಈ ಬಾರಿ ತಮಿಳಗ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಡುವೆ ನೇರಾ - ನೇರ ಪೈಪೋಟಿ ಸೃಷ್ಟಿಯಾಗಿತ್ತು.

Tamil Nadu Elections 2026: ದಾಖಲೆಯ ಮತದಾನ

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದೆ. ತಿರುಪ್ಪೂರ್‌ನಲ್ಲಿ ಶೇ.62.97 ರಷ್ಟು ಅತಿ ಹೆಚ್ಚು ಮತದಾನ ನಡೆದಿದೆ. ನೀಲಗಿರಿಯಲ್ಲಿ ಶೇ.50.42 ರಷ್ಟು ಕಡಿಮೆ ಮತದಾನವಾಗಿದೆ ಎಂದು ವರದಿಯಾಗಿದೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದ ಚುನಾವಣೆಯಲ್ಲಿ ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಿತು. ತಮಿಳುನಾಡಿನ ವಿಧಾನಸಭೆ ಚುನಾವಣೆಯ ಫಲಿತಾಂಶವು ಮೇ 4ಕ್ಕೆ ಪ್ರಕಟವಾಗಲಿದೆ. ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿ ಮೇ 10ಕ್ಕೆ ಮುಕ್ತಾಯವಾಗಲಿದೆ.

Tamil Nadu Election 2026: ತಮಿಳುನಾಡಿನ ಇತಿಹಾಸದಲ್ಲೇ ದಾಖಲೆಯ ಮತದಾನ

ಇನ್ನು ತಮಿಳುನಾಡಿನ ಇತಿಹಾಸದಲ್ಲೇ ದಾಖಲೆಯ ಮತದಾನವಾಗಿದೆ. ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಬಳಿಕ ದಾಖಲೆಯ ಮತದಾನ ಆಗಿದೆ. ಈ ರಾಜ್ಯದಲ್ಲಿ ಸಂಜೆ 6 ಗಂಟೆಯ ವರೆಗೆ ಶೇ. 84.41ರಷ್ಟು ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+