Trisha: ನಟ, ರಾಜಕಾರಣಿ ವಿಜಯ್‌ಗೆ ತ್ರಿಷಾ ಪರೋಕ್ಷ ಬೆಂಬಲ - ವಿಶಿಲ್ ಹಾಡು ಡಿಕೋಡ್ ಮಾಡಿದ ಜನ, ವೈರಲ್ ಪೋಸ್ಟ್
Trisha: ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆದಿದೆ. ಈ ಬಾರಿಯ ತಮಿಳುನಾಡಿನ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲಿಯೂ ತಮಿಳಗ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಡುವೆ ನೇರಾ - ನೇರ ಪೈಪೋಟಿ ಇದೆ. ತಮಿಳುನಾಡಿನ ಸೂಪರ್ ಸ್ಟಾರ್ ರಾಜಕಾರಣಿ ಹಾಗೂ ನಟ ವಿಜಯ್ ಹಾಗೂ ಸ್ಟಾಲಿನ್ ಅವರ ನಡುವೆ ನೇರಾನೇರ ಪೈಪೋಟಿ ಸೃಷ್ಟಿಯಾಗಿತ್ತು.
ಇನ್ನು ಚುನಾವಣೆ ಪ್ರಚಾರದ ಸಮಯದಲ್ಲೇ ನಟ ವಿಜಯ್ ಅವರು ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ವಿಜಯ್ ಪತ್ನಿ ಸಂಗೀತಾ ಅವರು ಆರೋಪಿಸಿದ್ದರು. ಇದೀಗ ಚುನಾವಣೆ ಮತದಾನದ ಸಮಯದಲ್ಲಿ ತ್ರಿಷಾ ಅವರು ವಿಜಯ್ ಬಗ್ಗೆ ಕೊಟ್ಟ ಕೋಡ್ ಅನ್ನು ತಮಿಳುನಾಡಿನ ಜನ ಡಿಕೋಡ್ ಮಾಡಿದ್ದಾರೆ.

ತಮಿಳುನಾಡಿನ ಚುನಾವಣಾ ಭರ್ಜರಿ ಪ್ರಚಾರದ ಸಮಯದಲ್ಲೇ ನಟಿ ತ್ರಿಷಾ ಅವರು ವಿಜಯ್‌ಗೆ ಪರೋಕ್ಷ ಬೆಂಬಲ ಸೂಚಿಸಿರುವಂತಹ ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮತದಾನದ ದಿನ ಯಾವುದೇ ಪ್ರಚಾರವನ್ನು ಮಾಡುವಂತಿಲ್ಲ ಅಥವಾ ನೀವು ಯಾರಿಗೆ ಮತ ಚಲಾಯಿಸಿದ್ದೀರಿ ಅಂತಲೂ ಹೇಳುವಂತಿಲ್ಲ. ಅದನ್ನು ಮತದಾನದ ರಹಸ್ಯ ನಿಯಮ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಇದೀಗ ತ್ರಿಷಾ ಅವರು ವಿಜಯ್‌ಗೆ ನೇರವಾಗಿ ಬೆಂಬಲ ಕೊಟ್ಟಿಲ್ಲವಾದರೂ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ತ್ರಿಷಾ ಅವರ ಕೋಡ್ ಅನ್ನು ತಮಿಳುನಾಡಿನ ಜನರೇ ಡಿ - ಕೋಡ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ತ್ರಿಷಾ ಹಂಚಿಕೊಂಡಿದ್ದಾರೆ.
ತಮಿಳುನಾಡಿನ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತಚಲಾಯಿಸಿರುವ ತ್ರಿಷಾ ಅವರು ಮತಚಲಾಯಿಸಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ತಮಿಳು ಸಿನಿಮಾ ಗಿಲ್ಲಿಯ ಹಾಡನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ, ರಾಜಕಾರಣಿ ವಿಜಯ್ ಹಾಗೂ ನಟಿ ತ್ರಿಷಾ ಅವರು ನಟಿಸಿದ್ದಾರೆ. ಈ ಹಾಡಿನಲ್ಲಿ ವಿಶಿಲ್ ಶಬ್ದವೂ ಇದೆ. ವಿಜಯ್ ಅವರ ಲೋಗೋ - ವಿಶಿಲ್ ಆಗಿದೆ. ಅಲ್ಲದೆ ಹಾಡಿನಲ್ಲಿ ಇವನು ಬಿಡುವ ಬಿಲ್ಲು - ಎಂದೂ ತಪ್ಪುವುದಿಲ್ಲ ಎಂಬರ್ಥದ ಸಾಲುಗಳಿವೆ. ಈ ಹಾಡನ್ನು ಅಭಿಮಾನಿಗಳು ಹಾಗೂ ತಮಿಳುನಾಡಿನ ಜನ ಡಿಕೋಡ್ ಮಾಡಿದ್ದು, ವಿಜಯ್ ಅವರಿಗೆ ನಟಿ ತ್ರಿಷಾ ಅವರು ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.
ವೈರಲ್ ಪೋಸ್ಟ್‌ಗೆ ಅಭಿಮಾನಿಗಳು ಹೇಳಿದ್ದೇನು
ಇನ್ನು ಈ ಹಾಡು ಹಾಗೂ ಪೋಸ್ಟ್‌ಗೆ ಜನ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಈ ಹಾಡನ್ನು ನಾವು ಡಿ- ಕೋಡ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಹಲವರು ಸಂಜೆಯ ವರೆಗೆ ಸುಮ್ಮನಿರಿ ಅಂದರೆ ಇನ್ನೂ ಕೆಲವರು ಅಕ್ಕ ಪ್ಲೀಸ್ ಇವೊತ್ತು ಒಂದು ದಿನ ಸುಮ್ಮನಿರಿ ಅಂತ ರಿಕ್ವೆಸ್ಟ್ ಮಾಡಿದ್ದಾರೆ.












Click it and Unblock the Notifications