ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಲ್ಲಿ ಮರಾಠಿ ಭಾಷೆಯಲ್ಲಿ ವಾರ್ಡ್‌ಗಳ ನಾಮಫಲಕ; ಕನ್ನಡಪರ ಸಂಘಟನೆಗಳ ಆಕ್ರೋಶ

By ಉತ್ತರಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂ14: ಗೋವಾ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ವಿಷಯವಾಗಿ ಆಗಾಗ ಎರಡು ರಾಜ್ಯದ ಮುಖಂಡರುಗಳು ಕ್ಯಾತೆ ತೆಗೆಯುತ್ತಲೆ ಇರುತ್ತಾರೆ. ಆದರೆ ಈ ಭಾರಿ ಕಾರವಾರ ನಗರಸಭೆಯ ನಡೆಯೊಂದು ಭಾಷಾ ವಿವಾದಕ್ಕೆ ಕಾರಣವಾಗಿದ್ದು, ವಾರ್ಡ್‌ಗಳಿಗೆ ಅಳವಡಿಸಿದ ನಾಮಫಲಕಗಳಲ್ಲಿ ಕನ್ನಡದ ಜೊತೆಗೆ ಕೊಂಕಣಿ ಹಾಗೂ ಮರಾಠಿ ಅರ್ಥಬರುವಂತೆ ಹಿಂದಿ ಅಕ್ಷರಗಳಲ್ಲಿ ಬರೆದು ಅಳವಡಿಸಿರುವುದು ಇದೀಗ ಕನ್ನಡಪರ ಸಂಘಟನೆಗಳು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಕಾರವಾರ ಬೆಳೆಯುತ್ತಿರುವ ನಗರವಾಗಿರುವ ಕಾರಣ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಕಾರಣ ಕೇವಲ ಕನ್ನಡದಲ್ಲಿದ್ದರೆ ಅರ್ಥ ಆಗುವುದಿಲ್ಲ ಎಂಬುದು ನಗರಸಭೆಯ ವಾದ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕನ್ನಡವನ್ನ ಕಡ್ಡಾಯವಾಗಿ ಬಳಸಬೇಕೆಂಬ ಸರ್ಕಾರದ ನಿಯಮವಿದೆ. ಆದರೆ ಕನ್ನಡದ ಜೊತೆಗೆ ಬೇರೆ ಭಾಷೆ ಬಳಸಬಾರದು ಎಂದು ಎಲ್ಲಿಯೂ ಇಲ್ಲ ಎಂದಿದ್ದಾರೆ.

ಉತ್ತರ ಕನ್ನಡದಲ್ಲಿ ವಿಸ್ತರಣೆಗೊಳ್ಳುತ್ತಿರುವ ಕಾಂಡ್ಲಾ ಪ್ರದೇಶ!ಉತ್ತರ ಕನ್ನಡದಲ್ಲಿ ವಿಸ್ತರಣೆಗೊಳ್ಳುತ್ತಿರುವ ಕಾಂಡ್ಲಾ ಪ್ರದೇಶ!

ಮಹಾರಾಷ್ಟ್ರದ ನಾಯಕರುಗಳು ತಕರಾರು

ಮಹಾರಾಷ್ಟ್ರದ ನಾಯಕರುಗಳು ತಕರಾರು

ತಣ್ಣಗಿದ್ದ ಕಾರವಾರದಲ್ಲಿ ಭಾಷಾ ವಿವಾದಕ್ಕೆ ಸ್ಥಳೀಯ ನಗರಸಭೆ ಎಡೆಮಾಡಿಕೊಟ್ಟಿದೆ. ಕಾರವಾರ ನಗರ ವ್ಯಾಪ್ತಿಯ ವಾವಾರ್ಡ್‌ಗಳ ನಾಮಫಲಕಗಳನ್ನು ಕನ್ನಡದ ಜೊತೆಗೆ ಕೊಂಕಣಿ- ಮರಾಠಿ ಅರ್ಥ ಬರುವಂತೆ ಹಿಂದಿಯಲ್ಲಿ ಬರೆಯಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಹಿಂದಿ ಹೇರಿಕೆಯ ಕುರಿತು ದೇಶದಾದ್ಯಂತ ಚರ್ಚೆಗಳು ನಡೆಯುತ್ತಿದೆ. ಇದರ ಜೊತೆಗೆ ಕೊಂಕಣಿ- ಮರಾಠಿ ಭಾಷಿಗರಿರುವ ಕಾರವಾರ, ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಆಗಾಗ ಮಹಾರಾಷ್ಟ್ರದ ನಾಯಕರುಗಳು ತಕರಾರು ತೆಗೆಯುತ್ತಿರುತ್ತಾರೆ. ಮತ್ತೊಂದು ಕಡೆ ಗೋವಾದ ಕೊಂಕಣಿ ಮಂಚ್ ಕೂಡ ಜೊಯಿಡಾ, ಕಾರವಾರವನ್ನು ಗೋವಾದೊಂದಿಗೆ ಸೇರಿಸಿಕೊಳ್ಳಲು ಹವಣಿಸುತ್ತಿದೆ. ಇಷ್ಟಾದರೂ ಸುಮ್ಮನಿದ್ದ ಕಾರವಾರದ ಕನ್ನಡಿಗರನ್ನು ಇದೀಗ ಕಾರವಾರ ನಗರಸಭೆಯ ನಡೆಯೊಂದು ಬಡಿದೆಬ್ಬಿಸುವಂತೆ ಮಾಡಿದೆ.

ನೆಲೆ‌ ಕಳೆದುಕೊಳ್ಳುವ ಆತಂಕದಲ್ಲಿ ಕಾರವಾರದ ಮೀನುಗಾರರು!ನೆಲೆ‌ ಕಳೆದುಕೊಳ್ಳುವ ಆತಂಕದಲ್ಲಿ ಕಾರವಾರದ ಮೀನುಗಾರರು!

ಕನ್ನಡದ ಹೆಸರುಗಳನ್ನ ಕೊಂಕಣಿ- ಮರಾಠಿಗೆ ತರ್ಜುಮೆ: ಆರೋಪ

ಕನ್ನಡದ ಹೆಸರುಗಳನ್ನ ಕೊಂಕಣಿ- ಮರಾಠಿಗೆ ತರ್ಜುಮೆ: ಆರೋಪ

ನಗರಸಭೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಪೌರಾಯುಕ್ತ ಆರ್.ಪಿ.ನಾಯ್ಕ ನಗರವ್ಯಾಪ್ಯಿಯಲ್ಲಿ ಹಳೆಯಾದ ಬೋವಾರ್ಡ್‌ಗಳನ್ನು ಕಿತ್ತು ಹೊಸ ಬೋರ್ಡ್ ಅಳವಡಿಕೆಗೆ ಮುಂದಾಗಿದ್ದರು. ಅದರಂತೆ ಎಲ್ಲೆಡೆ ಹೊಸ ಬೋರ್ಡ್ ಅಳವಡಿಕೆಯಾಗಿದೆಯಾದರೂ ಈ ಬೋವಾರ್ಡ್‌ಗಳಲ್ಲಿ ಕನ್ಬಡದ ಜೊತೆಗೆ ಹಿಂದಿ ಭಾಷೆಯಲ್ಲಿ ಕೊಂಕಣಿ ಹಾಗೂ ಮರಾಠಿ ಭಾಷೆಯಲ್ಲಿ ಅರ್ಥ ಬರುವಂತೆ ಬರೆಯಲಾಗಿದೆ. ಆದರೆ ಈ ವೇಳೆ ಕನ್ನಡದ ಜೊತೆಗೆ ಹಿಂದಿಯನ್ನೂ ಬಳಸಿರುವುದು ಹಿಂದಿ ಹೇರಿಕೆ ವಿವಾದಕ್ಕೆ ಕಾರಣವಾದರೆ, ಕನ್ನಡದ ಹೆಸರುಗಳನ್ನ ಕೊಂಕಣಿ- ಮರಾಠಿಗೆ ತರ್ಜುಮೆ ಮಾಡಿ ಹಿಂದಿಯಲ್ಲಿ ಬರೆದಿರುವುದು ಎಂಇಎಸ್, ಕೊಂಕಣಿ ಮಂಚ್ ಗಳಿಗೆ ಸಾಥ್ ನೀಡುವ ಕಾರ್ಯವೆಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ.

ಕನ್ನಡಪರ ಸಂಘಟನೆಗಳ ಎಚ್ಚರಿಕೆ

ಕನ್ನಡಪರ ಸಂಘಟನೆಗಳ ಎಚ್ಚರಿಕೆ

ಈಗಾಗಲೇ ಹಿಂದಿ ಹೇರಿಕೆಯ ಕುರಿತು ದೇಶದಾದ್ಯಂತ ಚರ್ಚೆಗಳು ನಡೆಯುತ್ತಿದೆ. ಅಲ್ಲೆ ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತು, ಕರುನಾಡ ರಕ್ಷಣಾ ವೇದಿಕೆ, ಜನಶಕ್ತಿ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿದ್ದು ತಕ್ಷಣ ನಾಮಫಲಕಗಳನ್ನು ಬದಲಾಯಿಸಬೇಕು. ಇಲ್ಲದೆ ಇದ್ದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.

ಇನ್ನು ನಗರಸಭೆ ಅಧಿಕಾರಿಗಳನ್ನು ಕೇಳಿದ್ರೆ, ಕಾರವಾರದಲ್ಲಿ ಬಹುಭಾಷಾ ಜನರಿದ್ದಾರೆ. ಇದು ಬೆಳೆಯುತ್ತಿರುವ ನಗರವಾಗಿರುವ ಕಾರಣ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಕೇವಲ ಕನ್ನಡದಲ್ಲಿದ್ದರೆ ಅರ್ಥ ಆಗುವುದಿಲ್ಲ ಎಂಬ ಕಾರಣಕ್ಕೆ ಹಿಂದಿಯಲ್ಲೂ ಬರೆಯಿಸಲಾಗಿದೆ ಎನ್ನುತ್ತಾರೆ.

ಲಿಖಿತ ಸ್ಪಷ್ಟನೆಗೆ ತಿಳಿಸಿದ್ದೇನೆ: ಡಿಸಿ

ಲಿಖಿತ ಸ್ಪಷ್ಟನೆಗೆ ತಿಳಿಸಿದ್ದೇನೆ: ಡಿಸಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂಬ ಸರ್ಕಾರದ ನಿಯಮವಿದೆ. ಕನ್ನಡದ ಜೊತೆಗೆ ಬೇರೆ ಭಾಷೆ ಬಳಸಬಾರದು ಎಂದು ಎಲ್ಲಿಯೂ ಇರುವುದು ನನ್ನ ಗಮನಕ್ಕಿಲ್ಲ. ಈ ಬಗ್ಗೆ ಲಿಖಿತವಾಗಿ ಸ್ಪಷ್ಟನೆ ನೀಡಲು‌ ನಗರಸಭೆಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈವರೆಗೆ ಯಾವುದೇ ಭಾಷಾ ವಿವಾದಕ್ಕೆ ಆಸ್ಪದ ನೀಡದೆ ಶಾಂತಿಯುತವಾಗಿದ್ದ ಕಾರವಾರದಲ್ಲಿ ಇದೀಗ ಭಾಷೆಗಳ ಬಳಕೆಯ ವಿಚಾರ ವಿವಾದಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿವಾದ ಗಂಭೀರವಾಗುವ ಮೊದಲೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ‌ ಶಾಂತಿ ಕದಡಂದತೆ ನೋಡಿಕೊಳ್ಳಬೇಕಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಮೋಟಮ್ಮ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ ವಿಲನ್ ಆಗಿದ್ದು ಹೇಗೆ? | *India | OneIndia Kannada

English summary
Hindi boards along-with Kannada have come up at the wards in Karwar. Pro-Kannada outfits have objected this by calling it as Hindi imposition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X