ಸಿನಿಮೀಯ ರೀತಿಯಲ್ಲಿ ಗೋವುಗಳನ್ನು ರಕ್ಷಿಸಿದ ಪೊಲೀಸರು

ಕಾರವಾರ, ಜೂನ್.22: ಇಂದು ಮುಂಜಾನೆ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ನೋಂದಣಿಯಾಗಿರದ ಹೊಸ ಮಾರುತಿ ಸುಜಿಕಿ ಇಗ್ನಿಸ್ ಕಾರ್ ನಲ್ಲಿ ಕುಮಟಾದ ಹರಕಾರ್ ನ ಹರಿಕಂತ್ರ ಕೇರಿಯಲ್ಲಿ ಹಸುಗಳನ್ನು ಕದ್ದು ಒಯ್ಯುಲಾಗುತ್ತಿತ್ತು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿ.ಎಸ್.ಐ ಸಂಪತ್ ಕುಮಾರ್ ಅವರ ತಂಡ ಇದನ್ನು ಗಮನಿಸಿ ಕಾರನ್ನು ಬೆನ್ನಟ್ಟಿದೆ.

Police seized cows in Cinematic style in kumta

ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಕಳ್ಳರು ವೇಗವಾಗಿ ಕಾರು ಚಲಾಯಿಸಿದ್ದು, ಕಾರು ಅಪಘಾತಕ್ಕೀಡಾಗಿದೆ. ನಂತರ ಅಲ್ಲಿಂದ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಹಸುಗಳನ್ನು ಕಾರಿನ ಸಮೇತ ವಶಪಡಿಸಿಕೊಂಡು ರಕ್ಷಣೆ ಮಾಡಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Police seized cows in Cinematic style in kumta

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು ಸಹ ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಚೇಸ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+