ದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವೃದ್ಧೆ ಆತ್ಮಹತ್ಯೆ

ದಾಂಡೇಲಿ, ಮೇ 22: ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದ ವೃದ್ಧೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ. ಇವರು ಈಚೆಗೆ ಕೊರೊನಾ ಸೋಂಕು ದೃಢಪಟ್ಟ ಯುವಕನ ಅಜ್ಜಿ ಎಂದು ತಿಳಿದುಬಂದಿದೆ.

Recommended Video

      ಕೊರೊನ ಗೆದ್ದು ಬಂದ 95ರ ಹರೆಯದ ಅಜ್ಜಿ | Granny beats corona at Age95

      ಯುವಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಸಂಪರ್ಕದಲ್ಲಿದ್ದ 62 ವರ್ಷದ ವೃದ್ಧೆಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬೆಳಗಿನ ಜಾವ ಆಸ್ಪತ್ರೆಯ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

      ಪಟ್ಟಣದಲ್ಲಿ ಪ್ರಥಮ ಬಾರಿಗೆ 24 ವರ್ಷದ ಟ್ರಕ್ ಚಾಲಕನಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಈ ಯುವಕ ಮೃತ ವೃದ್ಧೆಯ ಮೊಮ್ಮಗನಾಗಿದ್ದಾನೆ. ಗುಜರಾತ್ ನ ದಾದಾನಗರ ಹವೇಲಿ ಹಾಗೂ ವಾಪಿಗೆ ತೆರಳಿ ನಂತರ ಸರಕುಗಳೊಂದಿಗೆ ಮಣಿಪಾಲಕ್ಕೆ ಹೋಗಿ, ಅಲ್ಲಿಂದ ಗೋವಾಕ್ಕೆ ತೆರಳಿ, ಹಳಿಯಾಳಕ್ಕೆ ಕಬ್ಬಿಣದ ಲೋಡ್ ನೊಂದಿಗೆ ವಾಪಸ್ಸಾಗಿದ್ದ.

      Old Women Quarantined In Hospital Commited Suicide In Dandeli Of Uttara Kannada District

      ಹಳಿಯಾಳದಿಂದ ದ್ವಿಚಕ್ರ ವಾಹನದಲ್ಲಿ ಮೇ 14ರ ರಾತ್ರಿ ಹಳೆದಾಂಡೇಲಿಯ ಮನೆಗೆ ಬಂದಿದ್ದ ಈತನ ಕುರಿತು ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು‌. ಹೀಗಾಗಿ ಮೇ 15ಕ್ಕೆ ಈತನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಈತನ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+