Get Updates
Get notified of breaking news, exclusive insights, and must-see stories!

ರಾತ್ರೋರಾತ್ರಿ ಮಹಿಳೆಯರ ಉಡುಪು ಮಾಯ; ಸಿಸಿ ಟಿ.ವಿ. ನೋಡಿದವರಿಗೆ ಶಾಕ್

ಕಾರವಾರ, ಜುಲೈ 30: ಒಣಗಲು ಮನೆ ಮುಂದೆ ಹಾಕಿದ್ದ ಮಹಿಳೆಯರ ಬಟ್ಟೆಗಳು ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದವು. ಮಹಿಳೆಯರ ಚಪ್ಪಲಿಗಳೂ ನಾಪತ್ತೆಯಾಗುತ್ತಿದ್ದ ಸಂಗತಿ ಈಚೆಗೆ ಜಿಲ್ಲೆಯ ಕುಮಟಾದಲ್ಲಿ ನಡೆದಿತ್ತು. ಆದರೆ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಯಾವಾಗ ಪದೇ ಪದೇ ಇದೇ ರೀತಿ ಸುತ್ತಮುತ್ತಲ ಕಡೆಯೂ ಆಗಲು ಶುರುವಾಯಿತೋ, ಆಗ ಆರಂಭವಾಗಿದೆ ಅನುಮಾನ.

Recommended Video

      ಎಲ್ಲರ ಮನೆ ಸೇರಲಿ ಮಹಾಲಕ್ಷ್ಮಿ | Oneindia Kannada

      ಆಗ ಸಿಸಿ ಟಿ.ವಿಯೊಂದನ್ನು ಜಾಲಾಡಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ಆ ಸಿಸಿ ಟಿ.ವಿ. ದೃಶ್ಯವನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಯುವಕನೊಬ್ಬ ಕುಮಟಾ ತಾಲೂಕಿನ ಪಟ್ಟಣ ಭಾಗದಲ್ಲಿ ಮಹಿಳೆಯರ ಬಟ್ಟೆ ತೊಟ್ಟು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಬಟ್ಟೆಗಳನ್ನು ರಾತ್ರಿ ಸಮಯ ಕದ್ದೊಯ್ಯುವ ದೃಶ್ಯ ಸಿಸಿ ಟಿ.ವಿ.ಯಲ್ಲಿ ಸೆರೆಯಾಗಿದೆ.

      Man Dressed Like Girl Stolen Women Clothes In Karwar

      ಮಣಿಕಿ ಭಾಗದಲ್ಲಿ ಅಳವಡಿಸಿದ ಸಿಸಿ ಟಿ.ವಿ.ಯಲ್ಲಿ ಈತನ ಕೃತ್ಯ ಬಯಲಾಗಿದೆ. ರಾತ್ರಿ ವೇಳೆ ಕಳ್ಳನಂತೆ ಮನೆಗೆ ಎಂಟ್ರಿ ಕೊಡುವ ಈತ ಮಹಿಳೆಯರ ಉಡುಪು, ಚಪ್ಪಲಿ, ಹೀಗೆ ಕೈಗೆ ಸಿಕ್ಕಿದ ಮಹಿಳೆಯರ ವಸ್ತುಗಳನ್ನು ಕದ್ದು ಪರಾರಿಯಾಗುತ್ತಾನೆ. ಈತ ಮಹಿಳೆಯರ ಬಟ್ಟೆಯನ್ನು ಧರಿಸುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಈತ ಯಾರೆಂಬುದು ಈವರೆಗೆ ಪತ್ತೆಯಾಗಿಲ್ಲ. ಈತನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪಟ್ಟಣದ ಹಲವು ಭಾಗಗಳಲ್ಲಿ ಈತ ಓಡಾಡಿದ್ದಾನೆಂಬ ಸಂಶಯವಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+