ಮೀನು ಸಾಗಣೆ ವಾಹನದಲ್ಲಿ ಅಕ್ರಮ ಸ್ಪಿರಿಟ್ ಮಾರಾಟ: ಬಂಧನ

ಕಾರವಾರ. ಜನವರಿ 29: ಮೀನು ಸಾಗಣೆ ವಾಹನದಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಕೇರಳ ಮೂಲದ ಜಿತೀನ್ ಜೋಶ್ ಅವರನ್ನು ಕರವಾರದ ಮಾಜಾಳಿಯಲ್ಲಿ ಅಬಕಾರಿ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಅಧಿಕಾರಿ ಮಂಜುನಾಥ್ ಅರೆಗುಳಿಯವರು ಸೋಮವಾರ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿನಿತ್ಯವೂ ಅಕ್ರಮವಾಗಿ ಗೋವಾದಿಂದ ಕೇರಳಕ್ಕೆ ಸ್ಪಿರಿಟ್ ಸಾಗಣೆಯಾಗುತ್ತಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಮವಾರ ಬೆಳಗ್ಗೆ ಮೀನು ಸಾಗಣೆ ವಾಹನದ ಮೇಲೆ ದಾಳಿ ನಡೆಸಿದ್ದಾರೆ.

Kerala man arrested for illigal spirit transportation

ವಾಹನದಲ್ಲಿ ಮೀನುಗಳ ಟ್ರೇಗಳ ನಡುವೆ ಸ್ಪಿರಿಟ್ ಕ್ಯಾನ್ ಗಳನ್ನಿರಿಸಿ ಸಾಗಣೆ ಮಾಡುತ್ತಿದ್ದರು, ಚಾಲಕ ಜಿತೀನ್ ನಿಂದ ಸುಮಾರು7.5 ಲಕ್ಷ ರೂ. ಮೌಲ್ಯದ 3,600 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+