ಗಡಿಯಾಚೆಗೂ ದಾಟಿದ ಈ ಹಲ್ವಾ ಪಾವ್ ಘಮಲು: ಇಂದಿಗೂ ಸ್ವಾದ ಕಾಯ್ದುಕೊಂಡ ಸ್ವಾತಂತ್ರ್ಯ ಪೂರ್ವದ ಹೋಟೆಲ್‌!

ಕಾರವಾರ, ನವೆಂಬರ್‌ 27: ಅದು ಮೂರ್ನಾಲ್ಕು ಟೆಂಬಲ್ ಒಳಗೊಂಡಿರುವ ಸಣ್ಣ ಹೋಟೆಲ್. ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿರುವ ಈ ಹೊಟೇಲ್‌ನಲ್ಲಿ ತಯಾರಾಗುವ ಹಲ್ವಾ ಪಾವೊಂದು ಹಲವು ದಶಕಗಳಿಂದ ತನ್ನ ಸ್ವಾದವನ್ನು ಕಾಯ್ದುಕೊಂಡಿದೆ. ಈ ಹೋಟೆಲ್‌ನ ರುಚಿ ಗಡಿಯನ್ನೂ ಮೀರಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾದಲ್ಲಿರುವ ಈ ಹೋಟೆಲ್ ಹೆಸರು ಹೋಟೆಲ್ ಶ್ರೀ ಗಣಪತಿ. 80 ವರ್ಷಗಳಷ್ಟು ಹಳೆಯದಾದ ಈ ಹೋಟೆಲ್‌ನಲ್ಲಿ ಸಂಜೆ 4ರ ನಂತರ ತಯಾರಾಗುವ ಹಲ್ವಾ ಪಾವ್ ರುಚಿ ಸವಿಯಲೆಂದೇ ಜನ ಕಾದು ಕೂರುವಂತೆ ಈ ಹೊಟೇಲ್ ತನ್ನ ಸ್ವಾದವನ್ನು ಕಾಯ್ದುಕೊಂಡಿದೆ.

Karwar Hotel Shree Ganapati Hotel Halwa Pav Famous From Last 80 Years

ಕಾರವಾರದ ನಂದನಗದ್ದಾದ ದತ್ತಾ ಬಾಡಕರ್ ಎನ್ನುವವರು ಸುಮಾರು 1940ರ ಸಮಯದಲ್ಲಿ ಆರಂಭಿಸಿದ ಈ ಹೋಟೆಲ್‌ಅನ್ನು ನಂತರ ಅವರ ಮಗ ಸುನೀಲ್ ಬಾಡಕರ್ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಈಗ ಮೂರನೇ ಪೀಳಿಗೆಯ ದರ್ಶನ್ ಬಾಡಕರ್ ತಂದೆಯೊಂದಿಗೆ ಕೈಜೋಡಿಸಿ ಹೋಟೆಲ್‌ ಉದ್ಯಮವನ್ನು ಮುಂದುವರಿಸಿದ್ದಾರೆ.

ಮೂರು ತಲೆಮಾರಿನ ಈ ಹೋಟೆಲ್‌ನ ಹಲ್ವಾ ಪಾವ್ ಭಾರತದ ಸ್ವಾತಂತ್ರ್ಯ ಪೂರ್ವದಿಂದಲೂ ಈ ಭಾಗದಲ್ಲಿ ತುಂಬಾ ಜನಪ್ರಿಯ. ಇಂದಿಗೂ ಅದೇ ರುಚಿ, ಅದೇ ಪ್ರಖ್ಯಾತಿಯನ್ನು ಈ ಸಿಹಿ ತಿಂಡಿ ಉಳಿಸಿಕೊಂಡು ಬಂದಿದೆ. ದತ್ತಾ ಹೋಟೆಲ್, ದತ್ತು ಮಾಮ್ ಹೋಟೆಲ್, ಹಲ್ವಾ ಪಾವ್ ಹೋಟೆಲ್ ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಂಡಿರುವ ಈ ಹೋಟೆಲ್‌ನ ಅಸಲಿ ಹೆಸರು ಹೋಟೆಲ್ ಶ್ರೀ ಗಣಪತಿ ಎಂದು ಗೂಗಲ್ ಮ್ಯಾಪ್‌ನಲ್ಲಿ ತಡಕಾಡಿದರೆ ನೇರವಾಗಿ ಹೋಟೆಲ್‌ನ ಎದುರಿಗೇ ತಂದು ನಿಲ್ಲಿಸುತ್ತದೆ.

ಇನ್ನು ಈ ಹಲ್ವಾ ಪಾವ್ ಗಡಿಭಾಗವಾದ ಕಾರವಾರದವರಿಗೆ ಮಾತ್ರ ರುಚಿಯಾಗಿಲ್ಲ. ಬದಲಿಗೆ ಗೋವಾ, ಮಹಾರಾಷ್ಟ್ರದಲ್ಲೂ ಇಲ್ಲಿನ ಹಲ್ವಾ ಫೇಮಸ್ಸಾಗಿದೆ. ಕಾರವಾರಕ್ಕೆ ಆಗಮಿಸಿದವರು ಇಲ್ಲಿನ ಹೊಟೆಲ್‌ಗೆ ಬಂದು ಹಲ್ವಾ ಪಾವ್‌ನ ರುಚಿ ನೋಡದೆ ತೆರಳುತ್ತಾರೆ ಎಂದು ಹೊಟೇಲ್ ಮಾಲಿಕರಾದ ಸುನೀಲ್ ಬಾಡಕರ್ ಖುಷಿ ವ್ಯಕ್ತಪಡಿಸುತ್ತಾರೆ.

Karwar Hotel Shree Ganapati Hotel Halwa Pav Famous From Last 80 Years

ಇನ್ನು ಇಷ್ಟೊಂದು ಫೇಮಸ್ ಇರುವ ಹಲ್ವಾ ಪಾವ್ ಹೋಟೆಲ್‌ ಬೆಳಿಗ್ಗೆಯಿಂದಲೇ ತೆರೆದುಕೊಂಡಿದ್ದರು ಕೂಡ ಹಲ್ವಾ ಪಾವ್ ಸಿಗುವುದು ಸಂಜೆ 4 ಗಂಟೆ ಬಳಿಕವೇ. ಅದರಲ್ಲಿಯೂ ಭಾನುವಾರ ದಿನ ರಜೆ ಇರುತ್ತದೆ. ಉಳಿದಂತೆ ಎಲ್ಲ ಸಮಯದಲ್ಲೂ 4 ಗಂಟೆ ಬಳಿಕ ಸಿಗುವುದರಿಂದ ನಿಮಗೆನಾದರೂ ಇದರ ಸವಿ ಸವಿಯಬೇಕೆಂದರೇ ಕಾರವಾರಕ್ಕೆ ಭೇಟಿ ನೀಡಿದಾಗ ಒಮ್ಮೆ ಈ ಪುಟ್ಟ ಹೋಟೆಲ್‌ಗೆ ಭೇಟಿ ನೀಡಿ ರುಚಿ ಸವಿಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+