ಯಲ್ಲಾಪುರ ಉಪ ಚುನಾವಣೆ: ಶಿವರಾಂ ಹೆಬ್ಬಾರ್ ಗೆಲುವು

Recommended Video

      Karnataka Bypoll Results:ಬಿಜೆಪಿಯಿಂದ ಸ್ಪರ್ಧಿಸಿರುವ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಗೆಲುವು| Oneindia Kannada

      ಯಲ್ಲಾಪುರ, ಡಿಸೆಂಬರ್ 9: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಆರಂಭದ ಸುತ್ತಗಳ ಮತ ಎಣಿಕೆಯಲ್ಲಿ ಮುನ್ನಡೆ ಬಳಿಕ ಭರ್ಜರಿ ಜಯಗಳಿಸಿದ್ದಾರೆ. 31,406 ಮತಗಳ ಅಂತರದಿಂದ ಶಿವರಾಂ ಹೆಬ್ಬಾರ್ ಜಯಗಳಿಸಿದ್ದಾರೆ. ಜನರು ತಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೆಬ್ಬಾರ್ ಸಂತಸ ವ್ಯಕ್ತಪಡಿಸಿದ್ದಾರೆ.

      ವಿಶೇಷವೆಂದರೆ ಯಲ್ಲಾಪುರ ಉಪ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದಿರುವುದು ನೋಟಾ. ಶಿವರಾಂ ಹೆಬ್ಬಾರ್ 80440 ಮತಗಳನ್ನು ಪಡೆದರೆ, ಅವರ ಎದುರಾಳಿ ಭೀಮಣ್ಣ ನಾಯ್ಕ 49,034 ಮತಗಳನ್ನು ಪಡೆದರು. ನೋಟಾಕ್ಕೆ 1,444 ಮತಗಳು ಬಿದ್ದಿವೆ. ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ 1,235 ಮತ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.

       Karnataka By Election Results Shivaram Hebbar Bhima Naik Chaithra Gowda

      ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜೈತುನಬಿ ಜಿಗಳೂರರು 443, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸುನೀಲ ಪವಾರ 281, ಪಕ್ಷೇತರ ಅಭ್ಯರ್ಥಿ ಮಹೇಶ್ ಹೆಗ್ಡೆ 301 ಮತ್ತು ಚಿದಾನಂದ ಹರಿಜನ ಅವರಿಗೆ 413 ಮತಗಳು ದೊರೆತಿವೆ. ತಮ್ಮನ್ನು ಅನರ್ಹಗೊಳಿಸಿದವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಶಿವರಾಂ ಹೆಬ್ಬಾರ್ ಹೇಳಿದ್ದಾರೆ.

      ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಂ ಹೆಬ್ಬಾರ್ ಅವರ ಎದುರು ಅಲ್ಪಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಶಿವನಗೌಡ ಪಾಟೀಲ್, ಈ ಬಾರಿ ಹೆಬ್ಬಾರ್ ಅವರಿಗೆ ಬೆಂಬಲ ನೀಡಿದ್ದರು. ಡಿ. 5ರಂದು ನಡೆದ ಮತದಾನದಲ್ಲಿ ಇಲ್ಲಿ ಶೇ 77ರಷ್ಟು ಮತದಾನ ನಡೆದಿತ್ತು.

      2018ರ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ (66,290 ಮತಗಳು) ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಅವರನ್ನು 1,904 ಮತಗಳಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ವಿ.ಎಸ್.ಪಾಟೀಲ ಅವರ ವಿರುದ್ಧ 24,489 ಮತಗಳಿಂದ ಗೆದ್ದಿದ್ದರು. ಆಗ ಹೆಬ್ಬಾರ್, 58,025 ಮತಗಳನ್ನು ಪಡಡೆದಿದ್ದರು. ಅದಕ್ಕೂ ಮೊದಲು 2008ರಲ್ಲಿ 2,485 ಮತಗಳಿಂದ ವಿ.ಎಸ್.ಪಾಟೀಲ ವಿರುದ್ಧ ಹೆಬ್ಬಾರ್ ಸೋಲು ಕಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+