ಭಟ್ಕಳ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಅಕ್ರಮ ನೇಮಕಾತಿ: ಮಾಜಿ ಶಾಸಕ ಸುನೀಲ್ ನಾಯ್ಕ ವಿರುದ್ಧ ಕ್ರಮ
ಕಾರವಾರ, ಮೇ 21: ಭಟ್ಕಳದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ (ಪಿಎಲ್‌ಡಿ) ಅಕ್ರಮ ನೇಮಕಾತಿ ನಡೆದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧ್ಯಕ್ಷ ಮಾಜಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ನಿರ್ದೇಶಕರನ್ನು ಅನರ್ಹಗೊಳಿಸಿ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದಾರೆ.
ಪಿಎಲ್‌ಡಿ ಬ್ಯಾಂಕ್‌ನಲ್ಲಿ ಅಕ್ರಮವಾಗಿ 24 ಸಿಬ್ಬಂದಿಯನ್ನು ನೇಮಕ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಶಿರಾಲಿಯ ಶಂಕರ ನಾಯ್ಕ ಎನ್ನುವವರು ಜಿಲ್ಲಾ ಸಹಕಾರಿ ಉಪನಿಬಂಧಕರ ಕೋರ್ಟ್‌ಗೆ ದೂರು ನೀಡಿದ್ದರು.
ಅದರಂತೆ ವಿಚಾರಣೆ ನಡೆಸಿದ ಸಹಕಾರ ಅಭಿವೃದ್ಧಿ ಅಧಿಕಾರಿ 24 ಸಿಬ್ಬಂದಿ ನೇಮಕಾತಿ ಅಕ್ರಮವಾಗಿದೆ. ನಿಯಮ ಮೀರಿ ನೇಮಕಾತಿ ನಡೆಸಲಾಗಿದೆ. ಈ ಕಾರಣದಿಂದ ನಿರ್ದೇಶಕರನ್ನು ಅನರ್ಹಗೊಳಿಸಲು ಪರಿಶೀಲನೆ ನಡೆಸಬೇಕು. ಹಾಗೂ ನೇಮಕಗೊಂಡ ಸಿಬ್ಬಂದಿಯನ್ನು ವಜಾಗೊಳಿಸುವಂತೆ ವರದಿ ನೀಡಲಾಗಿತ್ತು. ಅಲ್ಲದೆ ವರದಿ ಆಧರಿಸಿ ನೇಮಕಾತಿ ರದ್ದುಗೊಳಿಸುವಂತೆ ಡಿಆರ್ ಆದೇಶ ನೀಡಿದ್ದರು.

ಆದರೆ ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕಿನ ಅಧ್ಯಕ್ಷ ಹಾಗೂ ಅಂದು ಶಾಸಕರಾಗಿದ್ದ ಸುನೀಲ್ ನಾಯ್ಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠವೂ ಡಿ.ಆರ್ ಆದೇಶವನ್ನು ಎತ್ತಿ ಹಿಡಿದಿದೆ. ಇದರೊಂದಿಗೆ ಬ್ಯಾಂಕಿನ ಎಲ್ಲ ನಿರ್ದೇಶಕರನ್ನು ಮುಂದಿನ ಒಂದು ವರ್ಷದ ಅವಧಿಗೆ ಅನರ್ಹಗೊಳಿಸಲಾಗಿದೆ.
ನಿರ್ದೇಶಕರಾದ ಗಾಯತ್ರಿ ವಿಜಯಕುಮಾರ್ ನಾಯ್ಕ, ಮಂಜಪ್ಪ ನಾಯ್ಕ, ಸಂತೋಷ ನಾಯ್ಕ, ಮೋಹನ್ ನಾಯ್ಕ, ಹರೀಶ್ ನಾಯ್ಕ, ನವನೀತ ನಾಯ್ಕ, ಈರಪ್ಪ ಗರ್ಡಿಕರ್, ಈಶ್ವರ ನಾಯ್ಕ, ಕಮಲಾ ನಾಯ್ಕ, ನಾಗಯ್ಯ ಗೊಂಡ, ಈಶ್ವರ ನಾರಾಯಣ ನಾಯ್ಕ, ಮಂಜು ಮೊಗೇರ, ಸುರೇಶ ನಾಯ್ಕ, ಮಂಜುನಾಥ ನಾಯ್ಕ ಅವರನ್ನು ಹುದ್ದೆಯಿಂದ ಒಂದು ವರ್ಷಗಳ ಕಾಲ ಅನರ್ಹಗೊಳಿಸಲಾಗಿದೆ.

ಮಗನನ್ನು ಕೊಂದು ತಂದೆಯೂ ನೇಣಿಗೆ ಶರಣು!
ವೀಕಲಚೇತನ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಲೆ ಮಾಡಿ ಬಳಿಕ ತಾನು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಳೇ ಮೀನು ಮಾರುಕಟ್ಟೆ ಸಮೀಪದ ಪುರಸಭೆಯ ವಸತಿ ಗೃಹದಲ್ಲಿ ವಾಸುಸುತ್ತಿದ್ದ ಪೌರಕಾರ್ಮಿಕ ಶ್ರೀಧರ್ ಹರಿಜನ್ (45) ವಿಕಲಚೇತನ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಶುಕ್ರವಾರ ತಡರಾತ್ರಿ ವಿಕಲಚೇತನ ಮಗನಾದ ಪ್ರೀತಮ್ ಹರಿಜನ್ (15) ಈತನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ ಶ್ರೀಧರ್ ಹರಿಜನ್ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಮಟಾ ಠಾಣೆ ಪೊಲೀಸರು, ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಪ್ರೀತಮ್ ಹರಿಜನ್ ಈತನು ಜನಿಸುತ್ತಲೇ ವಿಕಲಚೇತನನಾಗಿದ್ದು, ಈತನ ಚಿಕಿತ್ಸೆಗಾಗಿ ಸಾಕಷ್ಟು ಕಷ್ಟಪಟ್ಟರು ಸಹ ಮಗ ಸರಿಹೋಗದ ಕಾರಣ ನೊಂದ ತಂದೆಯು ಮಗನನ್ನು ಸಾಯಿಸಿ ತಾನು ಸಾವಿಗೆ ಶರಣಾಗಿದ್ದಾರೆ ಎನ್ನುವುದು ಸ್ಥಳೀಯರಿಂದ ತಿಳಿದುಬಂದಿದೆ.












Click it and Unblock the Notifications