• search

ಫೋಟೋ ವೈರಲ್ : ಸರ್ಕಾರಿ ಕಾರು ಮದುವೆ ಕಾರ್ಯಕ್ರಮಕ್ಕೆ ಬಳಕೆ

By ಕಾರವಾರ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕಾರವಾರ, ಜೂನ್.19 : ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕಾರೊಂದು ನಗರದಲ್ಲಿ ಮದುವೆ ದಿಬ್ಬಣಕ್ಕೆ ಬಳಕೆಯಾಗಿರುವ ಕುರಿತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌.

  ‌ಕೆಎ 30 ಎ1787 ನೋಂದಣಿ ಸಂಖ್ಯೆ ಹೊಂದಿರುವ ಕಾರು ಮದುವೆಯ ಬೋರ್ಡ್ ಅಳವಡಿಸಿಕೊಂಡು ನಗರದಲ್ಲಿ ಸಂಚಾರ ನಡೆಸಿದೆ. ಅಷ್ಟಕ್ಕೂ ಈ ಕಾರು ಯಾವಾಗ ಬಳಕೆಯಾಗಿದೆ? ಯಾರು ಬಳಸಿಕೊಂಡಿದ್ದಾರೆ? ಇದು ಮಾಲೀಕರಿಗೆ ತಿಳಿದೇ ಆಗಿದೆಯೇ ಅಥವಾ ಚಾಲಕನೇ ದುರುಪಯೋಗ ಪಡಿಸಿಕೊಂಡಿದ್ದಾನೆಯೇ ಎನ್ನುವುದು ಈವರೆಗೆ ತಿಳಿದು ಬಂದಿಲ್ಲ.

  ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರುಗಳ ಅವಹೇಳನ

  ಇಲ್ಲಿನ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ವಿ.ಎಂ.ಹೆಗಡೆ ಅವರ ಕರ್ತವ್ಯಕ್ಕೆ ಈ ಕಾರನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ. ಹೀಗಾಗಿ 'ರಾಜ್ಯ ಸರ್ಕಾರದ ಸೇವೆಯಲ್ಲಿ' ಎಂಬ ಹಸಿರು ಬೋರ್ಡ್ ಅನ್ನು ಈ ಕಾರಿಗೆ ಅಳವಡಿಸಲಾಗಿದೆ.

  government car used to wedding function in karwar city

  ಆದರೆ, ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಕರ್ತವ್ಯಕ್ಕೆ ನಿಯೋಜಿತ ವಾಹನ ಬಳಕೆ ಆಗಿದೆ ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆರೋಪಿಸಿದ್ದಾರೆ.

  ಹೊರಗುತ್ತಿಗೆಯ ಈ ಕಾರು ಪ್ರತಿ ತಿಂಗಳು 2,500ಕಿ.ಮೀ ಓಡಬೇಕು. ಇಷ್ಟು ಓಡಿಲ್ಲವೆಂದರೆ ಅವರ ಮಾಸಿಕ 29,500 ರೂ. ಬಾಡಿಗೆಗೆಯಲ್ಲಿ ಕಡಿತ ಮಾಡಲಾಗುತ್ತದೆಯಂತೆ. ಆದರೆ, ಅಧಿಕಾರಿಗಳು ಪ್ರತಿ ತಿಂಗಳು ಇಷ್ಟು ದೂರ ಓಡಾಡುವುದಿಲ್ಲ. ಹೀಗಾಗಿ, ನಿಗದಿತ ದೂರವನ್ನು ಕ್ರಮಿಸಲು ಚಾಲಕರು ಈ ರೀತಿ ಖಾಸಗಿ ಕಾರ್ಯಕ್ರಮಗಳಿಗೆ ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

  ಇದೀಗ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಕಾರಿನ ಮಾಲೀಕರಿಗೆ ನೋಟಿಸ್ ಕಳುಹಿಸಲು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ತಿಳಿಸಿದ್ದಾರೆ. ಜತೆಗೆ, ಸರ್ಕಾರಿ ವಾಹನಗಳು ಹಾಗೂ ಚಾಲಕರ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Zilla Panchayat Chief Planning Officer car used to wedding function in the karwar city. These Photos are viral on social networking sites. Many of the social networking sites have complained about this.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more