ಯಲ್ಲಾಪುರ: ಐದು ಅಭ್ಯರ್ಥಿಗಳ ಠೇವಣಿ ನಷ್ಟ
ಶಿರಸಿ, ಡಿಸೆಂಬರ್ 9: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳ ಪೈಕಿ ಐದು ಅಭ್ಯರ್ಥಿಗಳು ತಮ್ಮ ಠೇವಣಿ ಹಣ ಕಳೆದುಕೊಂಡಿದ್ದಾರೆ.
ಚುನಾವಣಾ ಆಯೋಗದ ನಿಯಮದ ಪ್ರಕಾರ, ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯದಿದ್ದರೆ ಅಭ್ಯರ್ಥಿಗಳು ಕಟ್ಟಿದ್ದ 10,000 ರೂಪಾಯಿ (ಮೀಸಲು ಕ್ಷೇತ್ರಕ್ಕೆ ₹ 5,000) ಠೇವಣಿ ಜಪ್ತಿಯಾಗುತ್ತದೆ.

ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್
ಇದರಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಅವರನ್ನೂ ಒಳಗೊಂಡು, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ ಪವಾರ್, ಕರ್ನಾಟಕ ರಾಷ್ಟ್ರ ಸಮಿತಿಯ ಜೈತುನಾಬಿ ಜಿಗಳೂರು, ಪಕ್ಷೇತರ ಅಭ್ಯರ್ಥಿಗಳಾದ ಮಹೇಶ್ ಹೆಗ್ಡೆ, ಚಿದಾನಂದ ಹರಿಜನ ಅವರಿಗೆ ಠೇವಣಿ ನಷ್ಟವಾಗಿದೆ.












Click it and Unblock the Notifications