ವಿಡಿಯೋ; ಕಾರವಾರದಲ್ಲಿ ಯೋಗ ಮಾಡಿದ ರಾಜನಾಥ್ ಸಿಂಗ್

ಕಾರವಾರ, ಮೇ 27; ಎರಡು ದಿನಗಳ ಕಾರವಾರ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗಾಭ್ಯಾಸ ಮಾಡಿದರು. ಗುರುವಾರ ಕಾರವಾರ ನೌಕಾನೆಲೆಗೆ ಆಗಮಿಸಿದ ಸಚಿವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು.

ಶುಕ್ರವಾರ ಮುಂಜಾನೆ ಕಾರವಾರದ ನೌಕಾನೆಲೆ ಸಿಬ್ಬಂದಿಯ ಜೊತೆ ರಾಜನಾಥ್ ಸಿಂಗ್ ಯೋಗ ಮಾಡಿದರು. ಜೂನ್‌ನಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆ ಭಾಗವಾಗಿ ಈ ಯೋಗ ತಾಲೀಮು ನಡೆಯಿತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಹಿನ್ನಲೆಯಲ್ಲಿ ಕಾರವಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗುರುವಾರ ನೌಕಾನೆಲೆಗೆ ಆಗಮಿಸಿದ್ದ ಸಚಿವರು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆ ಯೋಗಾಭ್ಯಾಸ ಕೈಗೊಂಡರು.

Rajnath Singh

ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕದಂಬ ನೌಕಾನೆಲೆಯಲ್ಲಿ ಅಧಿಕಾರಿಗಳು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿದರು. ರಕ್ಷಣಾ ಸಚಿವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕುಟುಂಬದವರು ಸಂಭ್ರಮಿಸಿದರು.

ರಾಜನಾಥ್ ಸಿಂಗ್ ನೌಕಾನೆಲೆಯ 2ನೇ ಹಂತದ ವಿಸ್ತರಣೆ ಕಾರ್ಯವನ್ನು ಸಹ ವೀಕ್ಷಣೆ ಮಾಡಿದ್ದರು. ನೌಕಾಪಡೆಯ ಅಧಿಕಾರಿಗಳ ಜೊತೆ ಸಂವಾದವನ್ನು ನಡೆಸಿದ್ದರು. ಭಾರತೀಯ ನೌಕಾಪಡೆ ವಿಶ್ವದಲ್ಲಿಯೇ ಅತ್ಯುತ್ತಮ ನೌಕಾಪಡೆಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಚಿವ ರಾಜನಾಥ್ ಸಿಂಗ್ ಇತ್ತೀಚಿನ ಅಮೆರಿಕ ಭೇಟಿಯ ವೇಳೆ ಅಮೆರಿಕ ನೌಕಾಪಡೆ ಮುಖ್ಯಸ್ಥರ ಜೊತೆ ನಡೆದ ಮಾತುಕತೆಯ ಅಂಶಗಳನ್ನು ನೌಕಾಪಡೆ ಸಿಬ್ಬಂದಿ ಜೊತೆ ಹಂಚಿಕೊಂಡರು. ನಮ್ಮ ಪಡೆಗಳ ಮೇಲೆ ಅವರು ಇಟ್ಟಿರುವ ಗೌರವದ ಕುರಿತು ಮಾತನಾಡಿದರು.

ಶುಕ್ರವಾರವೂ ರಾಜನಾಥ್ ಸಿಂಗ್ ಕಾರವಾರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನೌಕಾಪಡೆಯ ಹಿರಿಯ ಅಧಿಕಾರಿಗಳು ಅವರ ಜೊತೆ ಇರಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+