ಅಪಘಾತದಲ್ಲಿ ಸತ್ತ ಜೊತೆಗಾರನ ಕಂಡು ಹೃದಯಾಘಾತದಿಂದ ಅಸುನೀಗಿದ ಜಿಂಕೆ
ಕಾರವಾರ, ಅಕ್ಟೋಬರ್ 5: ಕಾರೊಂದು ಡಿಕ್ಕಿ ಹೊಡೆದು ತನ್ನ ಜೊತೆಗಾರ ಜಿಂಕೆ ಸಾವನ್ನಪ್ಪಿದ್ದನ್ನು ನೋಡುತ್ತಲೇ ಮತ್ತೊಂದು ಜಿಂಕೆಯೂ ಹೃದಯಾಘಾತದಿಂದ ಅಸುನೀಗಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ನಾಯಿಯೊಂದು ಅಟ್ಟಾಡಿಸಿಕೊಂಡು ಬಂದಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಎರಡು ಜಿಂಕೆಗಳು ಓಡಿ ಬರುತ್ತಿದ್ದವು. ಅದರಲ್ಲಿ ಒಂದು ಜಿಂಕೆ, ದಾಂಡೇಲಿಯ ಅಂಬೇವಾಡಿ ರೈಲ್ವೆ ಗೇಟಿನ ಬಳಿ ಸಾಗುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಿಂದ ರಸ್ತೆಯ ಮೇಲೆ ಬಿದ್ದಿದ್ದ ಜಿಂಕೆ ಸತ್ತಿರುವುದನ್ನು ಕಂಡು ಇನ್ನೊಂದು ಜಿಂಕೆಗೂ ಹೃದಯಾಘಾತವಾಗಿದೆ. ಹೀಗಾಗಿ ಎರಡೂ ಜಿಂಕೆಗಳು ರಸ್ತೆಯಲ್ಲೇ ಮೃತಪಟ್ಟಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂಜೀವ ಕುಮಾರನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications