ಕೇಂದ್ರ ನಾಯಕರಿಗೆ ಬಿಎಸ್ವೈ ರವಾನಿಸಿದ ಎಚ್ಚರಿಕೆ ಏನು?

By: ಎಚ್ ಎಸ್ ಶ್ರೇಯಸ್
Subscribe to Oneindia Kannada

ಬೆಂಗಳೂರು, ಆಗಸ್ಟ್, 18: ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರ್ ಎಸ್ ಎಸ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದ ಪ್ರಭಾವಿ ಲಿಂಗಾಯಿತ ನಾಯಕ ಭಿನ್ನಮತ ಹೊರಹಾಕುತ್ತಿರುವವರ ವಿರುದ್ಧ ಆರ್ ಎಸ್ ಎಸ್ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ಮೂಲಗಳು ಒನ್ ಇಂಡಿಯಾಕ್ಕೆ ತಿಳಿಸಿದೆ.[ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ]

ಭಿನ್ನಮತದಿಂದ ಬೇಸತ್ತಿರುವ ಬಿಎಸ್ ವೈ, ಮುಂದಿನ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನನ್ನನ್ನು ಈಗಲೇ ಘೊಷಣೆ ಮಾಡಬೇಕು. ಇಲ್ಲವಾದರೆ ಹಿಂದಿನ ಸಾರಿ ಪಕ್ಷ ಬಿಟ್ಟುಹೋದಂತಹದ್ದೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಆರ್ ಎಸ್ ಎಸ್ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

2013ರ ವಿಧಾನಸಭೆ ಚುನಾವಣೆ

2013ರ ವಿಧಾನಸಭೆ ಚುನಾವಣೆ

2013ರ ವಿಧಾನಸಭೆ ಚುನಾವಣೆ ವೇಳೆ ಕೆಲ ಕಾರಣಗಳಿಂದ ಬಿಎಸ್ ವೈ ಬಿಜೆಪಿಯನ್ನು ತೊರೆದು ಕೆಜೆಪಿ ಸ್ಥಾಪನೆ ಮಾಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿ 40 ಸ್ಥಾನ ಗಳಿಸಲಷ್ಟೇ ಶಕ್ತವಾಗಿತ್ತು.

ಕೋರ್ ಕಮಿಟಿ

ಕೋರ್ ಕಮಿಟಿ

ಬಿಜೆಪಿ ಕೋರ್ ಕಮೀಟಿಯಿಂದ ತಮ್ಮ ಬೆಂಬಲಿಗರನ್ನು ಕೈ ಬಿಟ್ಟಿದ್ದಕ್ಕೆ ಬಿ ಎಸ್ ವೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ ಎಲ್ ಸಂತೋಷ ಕೆಲವೊಂದು ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಡಬೇಕು ಎಂದು ಬಿಎಸ್ ವೈ ಹೇಳಿಕೊಂಡಿದ್ದಾರೆ.

75 ಕ್ಕೆ ನಿವೃತ್ತಿ

75 ಕ್ಕೆ ನಿವೃತ್ತಿ

ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ 75 ವರ್ಷ ತುಂಬಿದ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆ ಬಿಜೆಪಿಯಲ್ಲಿ ನಡೆದಿದೆ.

2018ಕ್ಕೆ ಬಿ ಎಸ್ ವೈಗೆ 75

2018ಕ್ಕೆ ಬಿ ಎಸ್ ವೈಗೆ 75

2018 ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಬಿ ಎಸ್ ಯಡಿಯೂರಪ್ಪ ಅವರಿಗೂ 75 ವರ್ಷ ತುಂಬಲಿದೆ. ಪಕ್ಷ ಈ ನಿವೃತ್ತಿ ನೆಲೆಯಲ್ಲೂ ಯೋಚನೆ ಮಾಡಬಹುದು.

ಸಂತೋಷ್ ಮುಖ್ಯಮಂತ್ರಿ ಅಭ್ಯರ್ಥಿ?

ಸಂತೋಷ್ ಮುಖ್ಯಮಂತ್ರಿ ಅಭ್ಯರ್ಥಿ?

ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಬಿಜೆಪಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ ಕೆಲ ಬಿಜೆಪಿ ಮೂಲಗಳು ಹೇಳುತ್ತವೆ. ಆದರೆ ಸಂತೋಷ್ ಈ ಮಾತನ್ನು ತಿರಸ್ಕರಿಸುತ್ತಾರೆ.

ಬಿಎಸ್ ವೈ ಪ್ಲ್ಯಾನ್ ಬಿ

ಬಿಎಸ್ ವೈ ಪ್ಲ್ಯಾನ್ ಬಿ

ಆರ್ ಎಸ್ ಎಸ್ ನಾಯಕರೊಂದಿಗೆ ನಿರಂತರವಾಗಿ ವಿನಂತಿ ಮಾಡಿಕೊಳ್ಳುತ್ತ ಸುಸ್ತಾಗಿ ಹೋಗಿರುವ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೊಂದಿಗೂ ಸಂಪರ್ಕದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP's Lingayat strongman B.S. Yeddyurappa has read out the riot act to the RSS on the issue of who would be the chief minister if the party came to power in 2018, sources close to the former chief minister have told OneIndia. The sources said that Yeddyurappa is angry after the party leadership formed the party core committee but kept his confidants out of it. "He has clearly told the RSS not to needle him any further, especially on the matter of who would be chief minister if the party came to power in 2018," the sources said.
Please Wait while comments are loading...