ಯಾತ್ರಾ, ಓಲಾ & ಉಬರ್ ಕ್ಯಾಬ್ ಸೇವೆ ಕರ್ನಾಟಕದ ಈ ಭಾಗದಲ್ಲಿ ವಿರೋಧ, ಕಾರಣವೇನು!
Yatra, Ola & Uber cab services: ಯಾತ್ರಾ, ಓಲಾ ಹಾಗೂ ಉಬರ್ ಕ್ಯಾಬ್‌ಗಳ ಸೇವೆ ಇಂದು ನಗರದ ಪ್ರಮುಖ ಜೀವನಾಡಿಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಈ ಆ್ಯಪ್ ಆಧಾರಿತ ಸೇವೆಗಳು ಇಲ್ಲದೆ ಸಂಚಾರ ಅಂದಾಜಿಸಿಕೊಳ್ಳುವುದು ಸಹ ಕಷ್ಟವೇ. ಆದರೆ, ಈ ಆ್ಯಪ್‌ಗಳ ಸೇವೆಗೆ ಉತ್ತರ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಉತ್ತರ ಕರ್ನಾಟಕದ ವಿವಿಧ ನಗರಗಳು ಸಹ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿವೆ. ಅಲ್ಲೂ ಜನ ಆ್ಯಪ್ ಆಧಾರಿ ಕ್ಯಾಬ್ ಸೇವೆಗಳ ಬಗ್ಗೆ ಆಸಕ್ತರಾಗಿದ್ದಾರೆ. ಆದರೆ, ಪರಿಸ್ಥಿತಿ ಈ ರೀತಿ ಇರುವಾಗಲೇ ಉತ್ತರ ಕರ್ನಾಟಕದ ಪ್ರಮುಖ ನಗರದಲ್ಲಿ ಈ ಸೇವೆಗೆ ಆಕ್ಷೇಪಣೆ ವ್ಯಕ್ತವಾಗಿದೆ.
ರಾಜ್ಯದ ಅವಳಿ ನಗರ ಎಂದೇ ಖ್ಯಾತಿ ಗಳಿಸಿರುವ ಹುಬ್ಬಳ್ಳಿ - ಧಾರವಾಡದಲ್ಲಿ ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಯಾತ್ರಾ, ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಅವಕಾಶ ಕೊಡಬಾರದು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಯಾವುದೇ ಕಾರಣಕ್ಕೋ ಅನುಮತಿ ಕೊಡುವುದು ಬೇಡ ಎಂದು ಹೇಳಲಾಗುತ್ತಿದೆ. ಯಾವುದೇ ನಗರದಲ್ಲೂರೂ ಈ ರೀತಿಯ ಪ್ರಾರಂಭಿಕ ಹಂತದ ಆಕ್ಷೇಪಣೆಗಳು ವ್ಯಕ್ತವಾಗುತ್ತಿರುತ್ತವೆ. ಇನ್ನು ಹುಬ್ಬಳ್ಳಿ - ಧಾರವಾಡದಲ್ಲೂ ಇದೇ ಮಾದರಿ ಪ್ರಕ್ರಿಯೆ ನಡೆದಿದೆ. ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಈ ವಿಷಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಯಾತ್ರಾ, ಓಲಾ ಹಾಗೂ ಉಬರ್ ಕ್ಯಾಬ್‌ಗಳ ಸೇವೆ ಹಾಗೂ ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ಯಾವುದೇ ಕಾರಣಕ್ಕೂ ಹುಬ್ಬಳ್ಳಿ - ಧಾರವಾಡದಲ್ಲಿ ಅವಕಾಶ ಕೊಡಬಾರದು ಎಂದು ಹುಬ್ಬಳ್ಳಿ ಆಟೋ ಚಾಲಕರ ಸಂಘ ಹಾಗೂ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ಜಂಟಿಯಾಗಿ ವಿರೋಧ ವ್ಯಕ್ತಪಡಿಸಲಾಗಿದೆ. ಇಲ್ಲಿನ ನಿಲಿಂಜನ್ ರಸ್ತೆಯಲ್ಲಿನ ಆಟೋ ಚಾಲಕರ ಸಂಘದ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿ ತಹಶೀಲ್ದಾರ್ ಕಚೇರಿ ತಲುಪಲಾಗಿದೆ.
ನಮಗೆ ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಆಟೋ ನಿಲ್ದಾಣಗಳು ಇಲ್ಲ. ಸರಿಯಾದ ರಸ್ತೆ ಇಲ್ಲ. ಪಿಕ್ ಅಪ್ ಪಾಯಿಂಟ್ ಇಲ್ಲ, ಅಟೋ ಚಾಲಕರಿಗೆ ಸೌಲಭ್ಯ ಇಲ್ಲ. ಇಷ್ಟೆಲ್ಲ ಸಮಸ್ಯೆ ಇರುವಾಗಲೇ ಓಲಾ, ಉಮರ್ ಹಾಗೂ ಯಾತ್ರಾ ಸಂಚಾರಕ್ಕೆ ತೀವ್ರ ಪೈಪೋಟಿಯನ್ನು ನೀಡುವುದಕ್ಕೆ ನಮ್ಮಿಂದ ಆಗಲ್ಲ. ನಾವು ಈಗಾಗಲೇ ಹಲವು ಬಾರಿ ಸಾರಿಗೆ ಇಲಾಖೆಗೆ ದೂರು ಕೊಟ್ಟಿದ್ದೇವೆ. ಆದರೆ, ಇಷ್ಟಾದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಯಾತ್ರಿ ಆ್ಯಪ್ ಸೇವೆ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಕ್ಕೆ ನಮ್ಮ ವಿರೋಧ ಇದೆ ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಅವರು ಒತ್ತಾಯಿಸಿದ್ದಾರೆ.
ಮುಕ್ತ ಸಂಚಾರ ನೆಟ್‌ವರ್ಕ್ ಅಂಗವಾಗಿ ಕೆಲ ದಿನಗಳ ಹಿಂದೆ ಕೊಚ್ಚಿಯಲ್ಲಿ ಕೇರಳ ಮೆಟ್ರೋ ಪಾಲಿಟನ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (ಕೆಎಂಟಿಎ) ಮತ್ತು ಬೆಕ್ನ್ ಪ್ರತಿಷ್ಠಾನ ಜಂಟಿಯಾಗಿ ಯಾತ್ರಾ ಆ್ಯಪ್ ಬಿಡುಗಡೆ ಮಾಡಿತ್ತು. ನಮ್ಮಲ್ಲಿ ಸಹ ಯಾತ್ರಿ ಆ್ಯಪ್ ಬಗ್ಗೆ ಜನರಿಗೆ ಕುತೂಹಲವಿದೆ. ನಗರದಲ್ಲಿ ಈ ಹಿಂದೆ ಪರಿಚಯಿಸಿದ್ದ ಆ್ಯಪ್ ಆಧಾರಿತ ಟಾಕ್ಸಿ ಸೇವೆ ವಿಫಲಗೊಂಡಿದ್ದರಿಂದ ಜನರಲ್ಲಿ ಗೊಂದಲ ಹಾಗೂ ಸಂದೇಹಗಳಿವೆ. 2017ರಲ್ಲಿ ಆ್ಯಪ್-ಆಧಾರಿತ ಕ್ಯಾಬ್ ಸೇವೆ ನಮ್ಮ ಟೈಗರ್ ಬಿಡುಗಡೆ ಮಾಡಿತ್ತು. ಆದರೆ, ಅದು ಯಶಸ್ವಿಯಾರಲಿಲ್ಲ. ಇನ್ನು ಈ ಸಂಬಂಧ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.












Click it and Unblock the Notifications