Archer Devamma: ಗ್ರಾಮೀಣ ಪ್ರತಿಭೆ ದೇವಮ್ಮಗೆ ಚಿನ್ನ, ಬೆಳ್ಳಿ ಪದಕಗಳ ಗರಿ: ಸಾಧನೆಗೆ ಎಂಬಿ ಪಾಟೀಲ್ ಶಹಬ್ಬಾಸ್

ಬೆಂಗಳೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಪುರ ಎಂಬ ಪುಟ್ಟ ಗ್ರಾಮದ ಪ್ರತಿಭೆ 'ದೇವಮ್ಮ ಮಾನಪ್ಪ' ಅವರು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಮಹತ್ವದ ಸಾಧನೆ ಮಾಡಿ ರಾಜ್ಯಕ್ಕೆ, ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆ ಕಂಡು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ. ದೇವಮ್ಮರ ಸಾಧನೆ ಹಾಡಿ ಹೊಗಳಿದ್ದಾರೆ. ಹಠ, ಗೆಲ್ಲುವ ಛಲವೊಂದಿದ್ದರೆ ಬಡತನ ಅಡ್ಡಿಯಾಗದು ಎಂಬುದನ್ನು ಈ ಬಾಲಕಿ ಸಾಧಿಸಿ ತೋರಿಸಿದ್ದಾರೆ.

'ದೇವಮ್ಮ ಅವರ ಸಾಧನೆಯ ಹಾದಿಯಲ್ಲಿ ಹಲವು ಮೈಲಿಗಲ್ಲುಗಳು' ಎಂದು ಶಿರ್ಷಿಕೆಯಡಿ ಸಚಿವರ ಎಕ್ಸ್‌ ಪೋಸ್ಟ್ ಮಾಡಿದ್ದಾರೆ. 'ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಪುರ ಎಂಬ ಪುಟ್ಟ ಗ್ರಾಮದ ಪ್ರತಿಭೆ ದೇವಮ್ಮ ಮಾನಪ್ಪ ಅವರ ಸಾಧನೆ ನನಗೆ ಅಪಾರ ಸಂತಸ ಮತ್ತು ಹೆಮ್ಮೆ ತಂದಿದೆ. ಕಡು ಬಡತನದ ನಡುವೆಯೂ ಛಲ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಬಿಲ್ಲುಗಾರಿಕೆ (ಆರ್ಚರಿ)ಯಲ್ಲಿ ಸಾಧನೆಯ ಶಿಖರವನ್ನೇರುವತ್ತ ಮುನ್ನಡೆಯುತ್ತಿರುವ ದೇವಮ್ಮ ನಿಜಕ್ಕೂ ಸ್ಫೂರ್ತಿಯ ಚಿಲುಮೆ' ಎಂದು ಅವರ ಪರಿಶ್ರಮ, ಯಶಸ್ಸು, ಸಾಧನೆಯನ್ನು ಬಣ್ಣಿಸಿದರು.

Yadgir Archer Devamma Manappa

ಚಿನ್ನ, ಬೆಳ್ಳಿ ಪದಕಗಳಿಗೆ ಭಾಜನ

ಕಳೆದ ವರ್ಷ ನಮ್ಮ ಪ್ರಯತ್ನದಿಂದ ಸಿಎಸ್ಆರ್ ನಿಧಿಯಡಿ 3.5 ಲಕ್ಷ ರೂಪಾಯಿ ಮೌಲ್ಯದ ಬಿಲ್ಲು, ಬಾಣ ಸೇರಿದಂತೆ ಅಗತ್ಯ ಕ್ರೀಡಾ ಪರಿಕರಗಳನ್ನು ಒದಗಿಸಲಾಗಿತ್ತು. ಇಂದು ಅದೇ ಕ್ರೀಡಾ ಕಿಟ್‌ನ ನೆರವಿನಿಂದ ದೇವಮ್ಮ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಪದಕಗಳನ್ನು ಗೆದ್ದು ಸಾಧನೆಯ ನಗೆ ಬೀರಿರುವುದು ನಮ್ಮ ನೆರವಿಗೆ ಸಿಕ್ಕ ಸಾರ್ಥಕ ಪ್ರತಿಫಲ! ಜೊತೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿರುವ ಅವರ ಸಾಧನೆಯ ಪಯಣ ಹೆಮ್ಮೆಯ ಸಂಗತಿ.

ದೇವಮ್ಮ ಅವರ ಪ್ರಮುಖ ಸಾಧನೆಗಳು ಹೀಗಿವೆ

* 2025-26ನೇ ಸಾಲಿನ ಕರ್ನಾಟಕ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಸೇರಿದಂತೆ ಮೂರು ಪದಕಗಳು
* 2025ರ ಕರ್ನಾಟಕ ಒಲಿಂಪಿಕ್ ಕ್ರೀಡಾಕೂಟ, ಉಡುಪಿಯಲ್ಲಿ ದ್ವಿತೀಯ ಸ್ಥಾನ
️* 2025ರ ದಸರಾ ಸಿಎಂ ಕಪ್ ಬಿಲ್ಲುಗಾರಿಕೆ ಚಾಂಪಿಯನ್ಶಿಪ್ನಲ್ಲಿ ಪದಕಗಳ ಸಾಧನೆ
️* 2024ರ ಮೈಸೂರು ದಸರಾ ವಿಭಾಗಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
️* 2023ರ ಮೈಸೂರು ದಸರಾ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ
* ಗೋವಾದಲ್ಲಿ ನಡೆದ ಓಪನ್ ನ್ಯಾಷನಲ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಕ್ರೀಡೆಯಲ್ಲಿ ಸಾಕಷ್ಟು ಕೀರ್ತಿ ಸಂಪಾದಿಸಿದ್ದಾರೆ.

ಸಾಧನೆಗೆ ಬಡತನ ಅಡ್ಡಿ ಆಗಲ್ಲ: ಪಾಟೀಲ ಅಭಿನಂದನೆ

ಇಂದು ದೇವಮ್ಮ ಅವರನ್ನು ಭೇಟಿಯಾಗಿ ಅಭಿನಂದಿಸಿದಾಗ, ಅವರ ಸಾಧನೆಯ ಹಿಂದಿರುವ ಕಠಿಣ ಪರಿಶ್ರಮ ಮತ್ತು ಅಚಲ ಸಂಕಲ್ಪ ಮನಸ್ಸಿಗೆ ತಟ್ಟಿತು. ಪ್ರತಿಭೆಗೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗಲಾರದು ಎಂಬುದಕ್ಕೆ ದೇವಮ್ಮ ಅವರೇ ಸಾಕ್ಷಿ.

ಅವರ ಮುಂದಿನ ಗುರಿಗಳಿಗೆ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದ್ದೇನೆ. ದೇವಮ್ಮ ಅವರ ಬಿಲ್ಲು-ಬಾಣಗಳು ಒಲಿಂಪಿಕ್ಸ್ನಲ್ಲೂ ಭಾರತದ ವಿಜಯದ ಗುರಿಯನ್ನು ತಲುಪಲಿ; ಅವರ ಸಾಧನೆಯ ಬಾಣ ದೇಶದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಲಿ ಎಂಬುದು ನನ್ನ ಹಾರೈಕೆ' ಎಂದು ಸಚಿವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+