ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ-ಎಚ್‌ಡಿಕೆ ಜಟಾಪಟಿ

By Manjunatha
|
Google Oneindia Kannada News

Recommended Video

ಸಮನ್ವಯ ಸಮಿತಿ ಸಭೆಯಲ್ಲೂ ಸಿದ್ದರಾಮಯ್ಯ ಹಾಗು ಎಚ್ ಡಿ ಕೆ ನಡುವೆ ಜಟಾಪಟಿ | Oneindia kannada

ಬೆಂಗಳೂರು, ಸೆಪ್ಟೆಂಬರ್‌ 01: ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಸಣ್ಣ ಮಟ್ಟಿನ ಮಾತಿನ ಜಟಾಪಟಿ ನಡೆದಿದೆ.

ಸಭೆ ಮುಗಿದ ನಂತರ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಕೈ-ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶಿಸದರಾದರೂ ಸಭೆ ನಡೆಯುವಾಗ ಚರ್ಚೆಯ ವೇಳೆ ಇಬ್ಬರೂ ನಾಯಕರ ನಡುವೆ ಕೆಲವು ಬಿಸಿ-ಬಿಸಿ ವಾಗ್ವಾದಗಳು ನಡೆದಿವೆ ಎನ್ನಲಾಗಿದೆ.

ಸಮನ್ವಯ ಸಮಿತಿ ಸಭೆ: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ್ಕೆ ಅಸ್ತು ಸಮನ್ವಯ ಸಮಿತಿ ಸಭೆ: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ್ಕೆ ಅಸ್ತು

ಕುಮಾರಸ್ವಾಮಿ ಸರ್ಕಾರವು ಮನಸೋಇಚ್ಛೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಅದನ್ನು ಸಭೆಯಲ್ಲಿ ನೇರವಾಗಿ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಮುನಿಸು

ಸಿದ್ದರಾಮಯ್ಯ ಮುನಿಸು

ಸಂಬಂಧಪಟ್ಟ ಸಚಿವರ ಗಮನಕ್ಕೆ ತರದೇ ಏಕಾ-ಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ಮುಖ್ಯಮಂತ್ರಿಗಳ ಕ್ರಮವನ್ನು ಸಿದ್ದರಾಮಯ್ಯ ಟೀಕಿಸಿದರು ಎನ್ನಲಾಗಿದೆ. ಇದಕ್ಕೆ ಟಾಂಗ್ ನೀಡಿದ ಎಚ್‌ಡಿಕೆ ನಿಮ್ಮ ಕಾಲದಲ್ಲಿ ವರ್ಗಾವಣೆ ಹೇಗೆ ನಡೆಯುತ್ತಿತ್ತು ಎಂಬುದು ಗೊತ್ತಿದೆ ಎಂದಿದ್ದಾರೆ.

ಸೆಪ್ಟೆಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ, ಮತ್ತೆ ಶುರುವಾಯ್ತು ಲಾಭಿಸೆಪ್ಟೆಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ, ಮತ್ತೆ ಶುರುವಾಯ್ತು ಲಾಭಿ

ಅಕ್ಕಿ ಹೆಚ್ಚಿಸುವ ಬಗ್ಗೆಯೂ ಸಿಟ್ಟು

ಅಕ್ಕಿ ಹೆಚ್ಚಿಸುವ ಬಗ್ಗೆಯೂ ಸಿಟ್ಟು

ಅನ್ನಭಾಗ್ಯ ಯೋಜನೆಯ ಅಕ್ಕಿ ನೀಡಲಾಗುತ್ತಿರುವ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಚರ್ಚೆ ಬಂದಾಗಲೂ ಸಿದ್ದರಾಮಯ್ಯ ಅವರು ಸಿಟ್ಟಾದರು. ಕೋಟ್ಯಂತರ ಹಣ ಸಾಲಮನ್ನಾ ಮಾಡುವ ಸರ್ಕಾರಕ್ಕೆ 7 ಕೆಜಿ ಅಕ್ಕಿ ಕೊಡುವುದು ಹೊರೆ ಆಗುತ್ತದೆಯೇ ಎಂದು ಅವರು ಕೇಳಿದ್ದಾರೆ. ಅಕ್ಕಿಯ ಪ್ರಮಾಣವನ್ನು 7 ಕೆಜಿ ಯಿಂದ 5 ಕೆಜಿಗೆ ಇಳಿಸುವ ಪ್ರಸ್ತಾಪವನ್ನು ಕುಮಾರಸ್ವಾಮಿ ಮಾಡಿದ್ದರು.

ಸಮನ್ವಯ ಸಮಿತಿ ಸಭೆ: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ್ಕೆ ಅಸ್ತು ಸಮನ್ವಯ ಸಮಿತಿ ಸಭೆ: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ್ಕೆ ಅಸ್ತು

ವೇಣುಗೋಪಾಲ್ ಮಧ್ಯ ಪ್ರದೇಶ

ವೇಣುಗೋಪಾಲ್ ಮಧ್ಯ ಪ್ರದೇಶ

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಧ್ಯೆ ಅಸಮಾಧಾನ ಸ್ಫೋಟಗೊಂಡಾಗಲೆಲ್ಲಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕುಮಾರಸ್ವಾಮಿ ಅವರು ರಾಹುಲ್ ಅವರ ಬಳಿ ಸಿದ್ದರಾಮಯ್ಯ ವಿರುದ್ಧ ದೂರು ಹೇಳಿದ್ದಾರೆ ಎಂಬ ಸುದ್ದಿ ಇದ್ದ ಕಾರಣ ಸಿದ್ದರಾಮಯ್ಯ ಅವರು ಸಭೆಯಲ್ಲಿ ಹೆಚ್ಚಿನ ಜಟಾಪಟಿ ನಡೆಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅಲ್ಪ ಜಟಾಪಟಿಯೊಂದಿಗೆ ಸಭೆ ಮುಗಿದಿದೆ.

ಸಭೆ ನಂತರ ಕೈ-ಕೈ ಕುಲುಕಿಕೊಂಡ ನಾಯಕರು

ಸಭೆ ನಂತರ ಕೈ-ಕೈ ಕುಲುಕಿಕೊಂಡ ನಾಯಕರು

ಸಮನ್ವಯ ಸಮಿತಿ ಸಭೆ ಮುಗಿದ ನಂತರ ಮಾಧ್ಯಮದವರ ಮುಂದೆ ಸಿದ್ದರಾಮಯ್ಯ-ಕುಮಾರಸ್ವಾಮಿ ಇಬ್ಬರೂ ಕೈ-ಕೈ ಹಿಡಿದುಕೊಂಡು ಕ್ಯಾಮೆರಾಕ್ಕೆ ಫೊಸು ನೀಡಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, 'ಈಗಲಾದರೂ ನಂಬುತ್ತೀರಾ ನಮ್ಮಲ್ಲಿ ವೈಷಮ್ಯ ಇಲ್ಲವೆಂದು' ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು.

ಸರ್ಕಾರ ಐದು ವರ್ಷ ಮುಗಿಸುತ್ತದೆ

ಸರ್ಕಾರ ಐದು ವರ್ಷ ಮುಗಿಸುತ್ತದೆ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುವುದು ಖಚಿತ ಎಂದರು. ಅಷ್ಟೆ ಅಲ್ಲದೆ ನಮ್ಮ ನಡುವೆ ಯಾವುದೇ ವೈಷಮ್ಯ ಇಲ್ಲ. ನಾನು ಮುಂದಿನ ಚುನಾವಣೆಯಲ್ಲಿ ಸಿಎಂ ಆಗುತ್ತೇನೆ ಎಂದಿದ್ದೆ ಆದರೆ ಅದನ್ನು ತಿರುಚಿ ಪ್ರಸ್ತುತ ಪಡಿಸಲಾಗಿದೆ ಎಂದರು.

English summary
Few words exchanged between Siddaramaiah and Kumaraswamy in co ordination committee meeting yesterday. Siddaramaiah upset on Kumaraswamy for transferring officers without the department ministers notice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X