ಸಿದ್ದರಾಮಯ್ಯಗೆ ವಾಪಸ್ ಹಣ ಎಸೆದ ಮಹಿಳೆ: ತಪ್ಪು ಯಾರದ್ದು?

ಸ್ವಕ್ಷೇತ್ರ ಬಾದಾಮಿ ಪ್ರವಾಸದ ಸಂದರ್ಭದಲ್ಲಿ ಕೆರೂರು ಗಲಭೆಯಲ್ಲಿ ಗಾಯಗೊಂಡಿದ್ದ ಕುಟುಂಬಕ್ಕೆ ಹಣ ನೀಡಲು ಹೋಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತೀವ್ರ ಮುಜುಗರ ಎದುರಾದ ಪ್ರಸಂಗ ನಡೆದಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೊಟ್ಟ ಎರಡು ಲಕ್ಷ ರೂಪಾಯಿ ಹಣವನ್ನು ಮಹಿಳೆ ವಾಪಸ್ ಎಸೆದಿದ್ದಾರೆ. ಎಸೆದದ್ದು ಒಂದೆರಡು ರೂಪಾಯಿಯಲ್ಲ, ಎರಡು ಲಕ್ಷ ರೂಪಾಯಿ. ಮಹಿಳೆ ಆಕ್ರೋಶದಿಂದ ಹೇಳಿದ್ದು ನಮಗೆ ದುಡ್ಡು ಬೇಡ, ರಕ್ಷಣೆ ಮತ್ತು ಶಾಂತಿ ಬೇಕು ಎಂದು.

 ನಮ್ಮ ರಾಜಕೀಯ ವ್ಯವಸ್ಥೆ ಬದಲಾಗುವಂತೆ ಕಾಣಿಸುವುದಿಲ್ಲ ಎನ್ನುವುದೇ ಉತ್ತರವೇ?

ನಮ್ಮ ರಾಜಕೀಯ ವ್ಯವಸ್ಥೆ ಬದಲಾಗುವಂತೆ ಕಾಣಿಸುವುದಿಲ್ಲ ಎನ್ನುವುದೇ ಉತ್ತರವೇ?

ಮಹಿಳೆ ಹಣ ವಾಪಸ್ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆ ಮಾಡಿದರಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಹೇಳಿಕೆಯನ್ನು ನೀಡಿದ್ದಾರೆ. ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ನೋಡಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ಮಹಿಳೆ ಸರಿಯಾದ ಪಾಠ ಕಲಿಸಿದೆ ಎಂದು ಬಿಜೆಪಿ ಹೇಳಿದೆ. ಹಾಗಾದರೆ, ಮಹಿಳೆಯ ಆಕ್ರೋಶದ ಧ್ವನಿಗೆ ಉತ್ತರ ಕೊಡಬೇಕಾದವರು ಯಾರು? ಎರಡು ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆಯನ್ನು ಅವಲೋಕಿಸಿದರೆ, ನಮ್ಮ ರಾಜಕೀಯ ವ್ಯವಸ್ಥೆ ಬದಲಾಗುವಂತೆ ಕಾಣಿಸುವುದಿಲ್ಲ ಎನ್ನುವುದೇ ಉತ್ತರವೇ?

 ಮತೀಯ ಭಾಗ್ಯಗಳೆಲ್ಲ, ಬಾಣವಾಗಿ ಸಿದ್ದರಾಮಯ್ಯ ಅವರನ್ನು ಕಾಡಲಿದೆ

ಮತೀಯ ಭಾಗ್ಯಗಳೆಲ್ಲ, ಬಾಣವಾಗಿ ಸಿದ್ದರಾಮಯ್ಯ ಅವರನ್ನು ಕಾಡಲಿದೆ

"ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಿದ್ದ @siddaramaiah ಅವರಿಗೆ ಈಗ ಅದೇ ಬಾಣವಾಗಿದೆ. ಮತೀಯ ಭಾಗ್ಯಗಳೆಲ್ಲ, ಬಾಣವಾಗಿ ಸಿದ್ದರಾಮಯ್ಯ ಅವರನ್ನು ಕಾಡಲಿದೆ. ಅಲ್ಪಸಂಖ್ಯಾತ ಮಹಿಳೆ ಆಮಿಷಕ್ಕೂ ಬಗ್ಗದೆ, ನ್ಯಾಯ ಕೇಳಿದ್ದು, ಆಕೆಯ ಒಬ್ಬಾಕೆಯ ದನಿ ಅಲ್ಲ, ಅದು ಅಲ್ಪಸಂಖ್ಯಾತರ ಧ್ವನಿ". "ಸಿದ್ದರಾಮಯ್ಯನವರು ನೀಡಿದ ದುಡ್ಡು ಬಿಸಾಕಿದ್ದು ಕೇವಲ ಒಬ್ಬ ಮುಸ್ಲಿಂ ಮಹಿಳೆ ಎಂದು ಭಾವಿಸಬೇಕಿಲ್ಲ. ಸುಳ್ಳು, ಕಪಟ, ದುರಂಹಕಾರ, ಅಧಿಕಾರ ಮದದ ಸಂಕೇತವಾಗಿರುವ ವ್ಯಕ್ತಿಯ ವಿರುದ್ಧ ಸಮಾಜವೇ ತಿರುಗಿ ಬೀಳುತ್ತಿರುವ ಪರಿಯಿದು" ಇದು ಬಿಜೆಪಿ ಮಾಡಿರುವ ಟ್ವೀಟ್.

 ನ್ಯಾಯ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ, ಸಿದ್ದರಾಮಯ್ಯ ಟ್ವೀಟ್

ನ್ಯಾಯ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ, ಸಿದ್ದರಾಮಯ್ಯ ಟ್ವೀಟ್

"ರಾಜ್ಯದಲ್ಲಿನ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟುಹೋಗುತ್ತಿದ್ದು ಅನ್ಯಾಯ-ದೌರ್ಜನ್ಯಗಳಿಗೆ ಬಲಿಯಾಗಿರುವ ಜನರು ಪೊಲೀಸರ ನಿಷ್ಕ್ರೀಯತೆಯಿಂದಾಗಿ ಹತಾಶರಾಗಿದ್ದಾರೆ. ಅಸಮರ್ಥ ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಪೊಲೀಸ್ ಇಲಾಖೆ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದೆ". "ಗಲಭೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ರೂಪದಲ್ಲಿ ಒಂದಷ್ಟು ಹಣ ನೀಡಿದ್ದೆ. ಹಣ ಬೇಡ, ನ್ಯಾಯ ಕೊಡಿ ಎಂದು ನೊಂದ ಕುಟುಂಬದವರು ಕೇಳಿದ್ದಾರೆ. ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವುದು ರಾಜ್ಯ @BJP4Karnataka ಸರ್ಕಾರದ ಕರ್ತವ್ಯವಾಗಿದೆ" ಇದು ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್.

 ಸಿದ್ದರಾಮಯ್ಯಗೆ ವಾಪಸ್ ಹಣ ಎಸೆದ ಮಹಿಳೆ: ತಪ್ಪು ಯಾರದ್ದು?

ಸಿದ್ದರಾಮಯ್ಯಗೆ ವಾಪಸ್ ಹಣ ಎಸೆದ ಮಹಿಳೆ: ತಪ್ಪು ಯಾರದ್ದು?

"ಅಲ್ಪಸಂಖ್ಯಾತರು ತಿರುಗಿ ಬೀಳುತ್ತಿದ್ದಾರೆ. ಎಚ್ಚರಿಕೆಯ ಕರೆಗಂಟೆಯಿದು. ಮುದ್ದಾಗಿ ಸಾಕಿದ ಗಿಣಿ, ಹದ್ದಾಗಿ ಕುಕ್ಕುತ್ತಿದೆ!" ಇದು ಬಿಜೆಪಿ ಮಾಡಿರುವ ಟ್ವೀಟ್. ಸಮಯ, ಸಂದರ್ಭ ಎನ್ನುವುದಿಲ್ಲದೇ ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವ ರಾಜಕೀಯ ಪಕ್ಷಗಳಿಗೆ ಮತದಾರ ಮಾತ್ರ ಉತ್ತರ ಕೊಡಬಲ್ಲ ಎನ್ನುವುದಷ್ಟೇ ಸಾರ್ವತ್ರಿಕ ಸತ್ಯ. ಆದರೆ ಆಗುತ್ತಾ ಎನ್ನುವುದು ಕೂಡಾ ಅಷ್ಟೇ ಕಾಡುವ ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+