ಕೋಲಾರ: ಆರ್ಕೆಸ್ಟ್ರಾ ಗಾಯಕಿ ಸುನೀತಾ ನಿಗೂಢ ಹತ್ಯೆ

27 ವರ್ಷದ ಗಾಯಕಿಯನ್ನು ಭೀಕರವಾಗಿ ಕೊಲೆ ಮಾಡಿ, ಆಕೆಯ ಮನೆ ಸಮೀಪವೇ ಶವ ಎಸೆಯಲಾಗಿದೆ. ಸುನೀತಾ, ಶನಿವಾರ ಚಿಂತಾಮಣಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು.
ಇಂದು ಮುಂಜಾನೆ ವೀರಾಂಜನೇಯ ನಗರದಲ್ಲಿರುವ ಅವರ ಮನೆಯ ಸಮೀಪವೇ ಇರುವ ವೀರಶೈವ ರುದ್ರಭೂಮಿಯ ಬಳಿ ಈಕೆಯ ಶವ ಪತ್ತೆಯಾಗಿದ್ದು, ಮೈ ಮೇಲೆ ಶಾಲು ಹೊದಿಸಲಾಗಿತ್ತು. ಅಕ್ಕಪಕ್ಕದವರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಲಾಗಿ, ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಬಂದ ಪೊಲೀಸರು ಮಹಜರು ನಡೆಸಿ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಮೃತ ಸುನೀತಾ, ವೀರಾಂಜನೇಯ ನಗರದ ವಾಸಿ ಎಂದು ತಿಳಿದು ಬಂದಿದೆ. ಮನೆಯವರ ಮಾಹಿತಿಯಂತೆ ಆರ್ಕೆಸ್ಟ್ರಾ ಮಾಲೀಕ ಶನಿವಾರ ರಸ ಸಂಜೆ ಕಾರ್ಯಕ್ರಮ ಮುಗಿಸಿಕೊಂಡ ನಂತರ ಪತಿ ಬಂದು ಕರೆದೊಯ್ದರೆಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕೊಲೆ ಮಾಡಿದ್ದು ಯಾರು? ಯಾವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೋಲಾರ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುನೀತಾಳ ಪತಿಯನ್ನು ಸಹ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.











Click it and Unblock the Notifications