ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಬಂದ ಕಾಡಾನೆ; ಭಯದಿಂದ ಬ್ಯಾಗ್‌ ಬಿಟ್ಟು ಓಡಿದ ಮಕ್ಕಳು

ಚಿಕ್ಕಮಗಳೂರು: ಶಾಲಾ ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದ ಮಕ್ಕಳ ಗುಂಪಿನತ್ತ ಒಂಟಿ ಕಾಡಾನೆ ಏಕಾಏಕಿ ನುಗ್ಗಿ ಅಟ್ಟಿಸಿಕೊಂಡು ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಗುಬ್ಬಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಕೊಡಿಗೆ ಕಾಲೋನಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಸಿದ್ದನಕೊಡಿಗೆ ಕಾಲೋನಿಯ ಆರು ವಿದ್ಯಾರ್ಥಿಗಳು ಬಿ.ಎಚ್‌. ಕೈಮರ ಹಾಗೂ ಮೂಡಬಾಗಿಲು ಪ್ರೌಢಶಾಲೆಗಳಿಗೆ ತೆರಳಲು ಶಾಲಾ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಏಕಾಏಕಿ ಕಾಡಾನೆ ಕಾಣಿಸಿಕೊಂಡಿದ್ದು, ಮಕ್ಕಳತ್ತ ದಾಳಿ ಮಾಡಲು ಮುಂದಾಗಿದೆ.

Wild Elephant Attack Wild elephant chases schoolchildren in Karnataka s NR Pura

ಕಾಡಾನೆಯನ್ನು ಕಂಡು ಆತಂಕಗೊಂಡ ಮಕ್ಕಳು ತಮ್ಮ ಶಾಲಾ ಬ್ಯಾಗ್‌ಗಳನ್ನು ಅಲ್ಲೇ ಬಿಟ್ಟು, ಪ್ರಾಣ ಉಳಿಸಿಕೊಳ್ಳಲು ಸಮೀಪದ ಮನೆಗಳತ್ತ ಓಡಿದ್ದಾರೆ. ಕಾಡಾನೆ ಕೂಡ ಕೆಲ ದೂರದವರೆಗೆ ಮಕ್ಕಳನ್ನು ಹಿಂಬಾಲಿಸಿದ್ದು, ಬಳಿಕ ಸಮೀಪದ ಅಕೇಶಿಯಾ ತೋಪಿನತ್ತ ತೆರಳಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮಸ್ಥರು ಧಾವಿಸುವಷ್ಟರಲ್ಲಿ ಕಾಡಾನೆ ಅಲ್ಲಿಂದ ಕಣ್ಮರೆಯಾಗಿತ್ತು. ಆದರೆ, ಸ್ಥಳದಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಆರು ತಿಂಗಳಿಂದ ಗ್ರಾಮಗಳ ಸುತ್ತ ಕಾಡಾನೆ ಓಡಾಟ

ಗ್ರಾಮಸ್ಥರ ಪ್ರಕಾರ, ಕಳೆದ ಆರು ತಿಂಗಳಿಂದ ಒಂಟಿ ಕಾಡಾನೆಯೊಂದು ಅರಳಿಕೊಪ್ಪ, ವಾಗಡೆ, ಸಂಕಸೆ ಹಾಗೂ ಗುಬ್ಬಿಗ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿದೆ. ಕಾಡಾನೆ ಅಡಿಕೆ, ಬಾಳೆ ಹಾಗೂ ತೆಂಗಿನ ಮರಗಳನ್ನು ಹಾನಿಗೊಳಿಸುವುದರ ಜೊತೆಗೆ ಭತ್ತದ ಗದ್ದೆಗಳಿಗೂ ನಷ್ಟ ಉಂಟುಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಡಾನೆಯನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ತಂಡಗಳು ಹಲವು ಬಾರಿ ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿವೆ. ಆದರೆ, ಕಾಡಾನೆ ಮತ್ತೆ ಮತ್ತೆ ಗ್ರಾಮಗಳತ್ತ ಮರಳುತ್ತಿದೆ ಎನ್ನಲಾಗಿದೆ.

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಶಾಲಾ ಮಕ್ಕಳನ್ನು ಕಾಡಾನೆ ಅಟ್ಟಿಸಿಕೊಂಡು ಬಂದ ಘಟನೆ ಬಳಿಕ ನೂರಾರು ಗ್ರಾಮಸ್ಥರು ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಾಡಾನೆಗಳು ಗ್ರಾಮಗಳಿಗೆ ನುಗ್ಗುವುದನ್ನು ತಡೆಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಎಂ.ಎನ್. ನಾಗೇಶ್ ಮಾತನಾಡಿ, ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಸದ್ಯ ಮೂರು ಒಂಟಿ ಕಾಡಾನೆಗಳು ಸಂಚರಿಸುತ್ತಿವೆ. ಈ ಪೈಕಿ ಒಂದು ಕಾಡಾನೆ ಮಂಗಳವಾರ ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.

ಬೇಸಿಗೆಯಲ್ಲಿಯೇ ಬದರಾ ಹಿನ್ನೀರಿನಿಂದ ಒಂಟಿ ಕಾಡಾನೆಯನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಆನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಿ ಇಲಾಖೆ ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಹಾಗೂ ಗ್ರಾಮಸ್ಥರ ಸುರಕ್ಷತೆಯ ದೃಷ್ಟಿಯಿಂದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+