Siddaramaiah: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಸ್ವಂತ ಪಕ್ಷದಲ್ಲೇ ತೃಪ್ತಿ ಜಾಸ್ತಿ?
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಎಂ ಖುರ್ಚಿಗೆ ಕಂಟಕ ಎದುರಾಗಿದ್ದು, ಇನ್ನೇನು ಸಿದ್ದರಾಮಯ್ಯ ಅವರು ಸಿಎಂ ಪಟ್ಟ ಬಿಟ್ಟು ಕೆಳಗೆ ಇಳಿಯಲಿದ್ದಾರೆ ಎಂಬ ಮಾತು ಎಲ್ಲೆಲ್ಲೂ ಹಬ್ಬಿದೆ. ಈ ಮೂಲಕ ಸಿದ್ದರಾಮಯ್ಯ ಅವರ ಶತ್ರು ಪಾಳಯಕ್ಕೆ ಈ ಸುದ್ದಿಯಿಂದ ಖುಷಿ ಸಿಕ್ಕಿದ್ದರೆ, ಸಿದ್ದರಾಮಯ್ಯ ಬೆಂಬಲಿಗ ಶಾಸಕರಿಗೆ ತೀವ್ರ ಆಘಾತ ಎದುರಾಗಿದೆ. ಅರೆರೆ ಹಾಗಾದ್ರೆ, ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಸ್ವಂತ ಪಕ್ಷದಲ್ಲೇ ತೃಪ್ತಿ ಜಾಸ್ತೀನಾ? ಬಿಜೆಪಿಗೆ ಆಗುವ ಲಾಭಕ್ಕಿಂತ ಕಾಂಗ್ರೆಸ್ ಒಳಗೇ ಇದರಿಂದ ಲಾಭ ಜಾಸ್ತೀನಾ? ಬನ್ನಿ ತಿಳಿಯೋಣ.
ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಹವಾ ಬಲು ಜೋರಾಗಿದೆ. ಅದರಲ್ಲೂ ಅರ್ಧ ಶತಮಾನದ ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ಪಳಗಿದ್ದಾರೆ. ಈ ರೀತಿ ಕನ್ನಡ ನಾಡಿನ ರಾಜಕೀಯ ಪಡಸಾಲೆಯಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸು ಬಲು ಜೋರಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ ಎಂಬುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು. ಹೀಗಿದ್ದಾಗ ದಿಢೀರ್ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪವೇ ಸುತ್ತಿಕೊಂಡಿದೆ. 'ಮುಡಾ' ಸುಳಿಗಾಳಿಗೆ ಸಿಲುಕಿರುವ ಸಿದ್ದರಾಮಯ್ಯ ಅವರು ಸಿಎಂ ಖುರ್ಚಿ ಬಿಟ್ಟು ಇಳಿಯುತ್ತಾರಾ? ಎಂಬ ಪ್ರಶ್ನೆಗಿಂತಲೂ ಈಗ ಹೆಚ್ಚಾಗಿ ಕಾಡುತ್ತಿರುವುದು, ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಸ್ವಂತ ಪಕ್ಷದಲ್ಲೇ ತೃಪ್ತಿ ಜಾಸ್ತಿನಾ? ಎಂಬ ಪ್ರಶ್ನೆ ಹಬ್ಬಿದೆ.

ಬಿಜೆಪಿ & ಕಾಂಗ್ರೆಸ್‌ನಲ್ಲಿ ಯಾರಿಗೆಷ್ಟು ಲಾಭ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವದಂತಿ ಈಗ ಹಬ್ಬಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೆಳಗೆ ಇಳಿದರೆ ಈ ಗೆಲುವು ಬಿಜೆಪಿ ಪಾಲಿಗೆ ಎಂಬ ಮಾತು ಓಡಾಡುತ್ತಿದೆ. ಆದರೆ ಅಸಲಿ ವಿಷಯ ಅದಲ್ಲ, ಈ ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟು ಕೆಳಗೆ ಇಳಿದರೆ ಅದರ ಲಾಭ ಹೆಚ್ಚಾಗಿ ಸಿಗುವುದು ಸ್ವಂತ ಪಕ್ಷದವರಿಗೆ. ಅಂದ್ರೆ ಕಾಂಗ್ರೆಸ್‌ನವರಿಗೆ ಎಂಬ ಮಾತುಗಳು ಈಗ ಹರಿದಾಡುತ್ತಿವೆ. ಯಾಕಂದ್ರೆ ಹಲವರು ಸಿದ್ದರಾಮಯ್ಯ ಸಿಎಂ ಪಟ್ಟ ಬಿಟ್ಟು ಕೆಳಗಡೆ ಇಳಿಯಲಿ ಅಂತಾ ಕಾಯುತ್ತಿದ್ದರು! ಹೀಗಾಗಿ ಕರ್ನಾಟಕ ರಾಜಕೀಯ ಗೊಂದಲದ ಗೂಡಾಗಿದೆ.
ಮುಂದಿನ ಸಿಎಂ ಯಾರಾಗಬಹುದು?
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಗೊಂದಲ ಮೂಡುತ್ತಲೇ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಈಗ ಅಕಸ್ಮಾತ್ ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ಹೆಸರು ಮುಂಚೂಣಿಗೆ ಬರುತ್ತಿದೆ. ಹೀಗಾಗಿ ಯಾರಿಗೆ ಅಧಿಕಾರ ಸಿಗುತ್ತೆ? ಅನ್ನೋದನ್ನ ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದೆ.












Click it and Unblock the Notifications