Karnataka CM Oath: ಕಂಠೀರವದಲ್ಲಿ ಯಾರಿಗೆಲ್ಲಿ ಪ್ರವೇಶ? ಇಲ್ಲಿದೆ ಮಾಹಿತಿ

Karnataka CM Oath: ಬೆಂಗಳೂರು, ಮೇ 20: ಐತಿಹಾಸಿದ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಸರ್ಕಾರ ರಚನೆಗೆ ಸಿದ್ದತೆ ನಡೆಸಿದೆ. ಶನಿವಾರ ಮಧ್ಯಾಹ್ನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ 12.30ಕ್ಕೆ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪದಗ್ರಹಣ ಕಾರ್ಯಕ್ರಮವನನ್ನ ಹಮ್ಮಿಕೊಳ್ಳಲಾಗಿದೆ.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಾರ್ವಜನಿಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿವಹಿಸಲಿದ್ದು, ಕ್ರೀಡಾಂಗಣ ಪ್ರವೇಶಿಸುವ ಕುರಿತು ನಗರ ಪೊಲೀಸರು ಸೂಚನೆಗಳನ್ನು ನೀಡಿದ್ದಾರೆ.

Karnataka CM Oath

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವವರಿಗೆ ಪಾಸ್‌ ವಿತರಿಸಲಾಗಿದ್ದು, ಕೆಂಪು ಪಾಸ್‌ ಇದ್ದವರು ಕಸ್ತೂರಾಬಾ ರಸ್ತೆ ಮೂಲಕ ಕ್ರೀಡಾಂಗಣದ ಗೇಟ್‌ ಸಂಖ್ಯೆ 1 ಮತ್ತು ರಾಜಾರಾಮ ಮೋಹನರಾಯ್‌ ರಸ್ತೆಯ ಗೇಟ್‌ ಸಂಖ್ಯೆ 5 ರ ಮುಖಾಂತರ ವಾಹನಗಳ ಅಧಿಕೃತ ಪಾಸ್‌ನೊಂದಿಗೆ ವಾಹನ ಸಮೇತ ಪ್ರವೇಶ ಪಡೆಯಬಹುದಾಗಿದೆ.

ಇನ್ನೂ ಹಸಿರು ಪಾಸ್‌ ಇದ್ದವರು ರಾಜಾರಾಮ ಮೋಹನರಾಯ್‌ ರಸ್ತೆಯ ಗೇಟ್‌ ಸಂಖ್ಯೆ 5 ರ ಮೂಲಕ ಕಾಲ್ನಡಿಗೆಯಲ್ಲಿ ಮಾತ್ರ ಕ್ರೀಡಾಂಗಣ ಪ್ರವೇಶಿಸಬೇಕು. ಈ ಪಾಸ್‌ ಹೊಂದಿರುವವರಿಗೆ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಇನ್ನೂ ಹಳದಿ ಪಾಸ್‌ ಇದ್ದವರು ಸಿದ್ದಲಿಂಗಯ್ಯ ವೃತ್ತದ ಗೇಟ್‌ ಸಂಖ್ಯೆ 2 ರ ಮೂಲಕ ಕಾಲ್ನಡಿಗೆಯಲ್ಲಿ ಮಾತ್ರ ಪ್ರವೇಶಿಸಬೇಕು. ಈ ಪಾಸ್‌ ಹೊಂದಿರುವವರಿಗೂ ವಾಹನಗಳಿಗೆ ಪ್ರವೇಶವಿಲ್ಲ

ಇತ್ತ ಯಾವುದೇ ಪಾಸ್‌ ಇಲ್ಲದವರು ವಿಠಲ್‌ ಮಲ್ಯ ರಸ್ತೆಯ ಗೇಟ್‌ ಸಂಖ್ಯೆ 3 ಮತ್ತು 4ರ ಮುಖಾಂತರ ಕಾಲ್ನಡಿಗೆಯಲ್ಲಿ ಕ್ರೀಡಾಂಗಣ ಪ್ರವೇಶಿಸಬೇಕು. ಸಾರ್ವಜನಿಕರು ಕಾರ್ಯಕ್ರಮದ ಸ್ಥಳದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕಾಗಿದೆ.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸುಮಾರು 35000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ಅವಕಾಶ ನೀಡಿ ಉಳಿದ ಜಾಗದಲ್ಲಿ ಸಾರ್ವಜನಿಕರು ಕೂರಲು ವ್ಯವಸ್ಥೆ ಮಾಡಲಾಗುತ್ತದೆ. ಉಳಿದಂತೆ ಮೈದಾನಕ್ಕೆ ಕುರ್ಚಿ ವ್ಯವಸ್ಥೆ ಮಾಡುವ ಮೂಲಕ ಸುಮಾರು 1 ಲಕ್ಷ ಮಂದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+