"ಮೂರ್ಖರು ಯಾರಪ್ಪ ಅಂದ್ರೆ ನಾವೇ.. ನಾವೇ ಅಂತಾರೆ ಬಿಜೆಪಿಗರು"

ರಾಜ್ಯದಲ್ಲಿ ಭೂವಿವಾದ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದಿಂದ ಬದಲಿ ನಿವೇಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ, ಇದೀಗ ಸಚಿವ ಖರ್ಗೆ ಅವರ ಸರದಿ. ಈ ಎರಡೂ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಒಂಟಿಕಾಲಿನಲ್ಲಿ ನಿಲ್ಲುವಂತೆ ಈಗಾಗಲೇ ಬಿಜೆಪಿ ಮಾಡಿಯಾಗಿದೆ. ಇದೀಗ ಬಿಜೆಪಿ ನೀಡುವ ಟಾಂಗ್‌ಗೆ ತಿರುಗೇಟು ನೀಡಲು ಕಾಂಗ್ರೆಸ್‌ ತನ್ನ ಎಲ್ಲ ಶ್ರಮವನ್ನೂ ಹಾಕುತ್ತಿದೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಿತ್ಯವೂ ಒಂದೊಂದು ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ರಾಜ್ಯ ಕಾಂಗ್ರೆಸ್‌, ಬಿಜೆಪಿಯ ಮೇಲೆ ವಾಕ್ಸಮರವನ್ನೇ ನಡೆಸಿದೆ. ರಾಜ್ಯದಲ್ಲಿ ಮೂರ್ಖರು ಯಾರು ಅಂದ್ರೆ ಈ ಬಿಜೆಪಿ ಅವ್ರು ನಾವಿದ್ದೇವೆ ಎಂದು ವ್ಯಂಗ್ಯವಾಡಿದೆ. ಈ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕೆಣಕಿರುವ ಬಿಜೆಪಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದೆ. ಬಿಜೆಪಿಯೂ ಸಹ ಕಾಂಗ್ರೆಸ್‌ ನಾಯಕರಿಗೆ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದೆ. ನಿವೇಶನ ಹಾಗೂ ಜಮೀನು ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ಟ್ವೀಟ್‌ ವಾರ್‌ ನಡೆದಿದೆ.

Who are the fools BJP leaders We are congress

ಸಿದ್ದಾರ್ಥ ವಿಹಾರ ಟ್ರಸ್ಟ್ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ಕಾಂಗ್ರೆಸ್‌ ಸರಿಯಾಗಿಯೇ ಟಾಂಗ್‌ ಕೊಟ್ಟಿದೆ. ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ ಈ ಬಿಜೆಪಿ ನಾಯಕರು ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ. ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಮರಳಿಸಿಲ್ಲ. ಆ ನಿವೇಶನ ಇನ್ನೂ ಮಂಜೂರೇ ಆಗಿಲ್ಲ. ಹೀಗಿರುವಾಗ ಅದನ್ನು ಮರಳಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಮುಂದುವರಿದು, ಸಿಎ ನಿವೇಶನಕ್ಕೆ ಸಲ್ಲಿಸಿದ್ದ ಮನವಿ ವಾಪಸ್‌ ತೆಗೆದುಕೊಳ್ಳಲಾಗಿದೆಯಷ್ಟೇ ಎಂದು ಹೇಳಿದೆ.

ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಆಯ್ಕೆ ಆಗಿತ್ತು ಅಷ್ಟೇ. ಬಿ.ವೈ ವಿಜಯೇಂದ್ರ ಅವರೇ ನಿಮ್ಮ ಪ್ರೇರಣಾ ಟ್ರಸ್ಟ್‌ಗೆ ಅಕ್ರಮವಾಗಿ ಮಂಜೂರು ಮಾಡಿಕೊಂಡಿದ್ದ ಭೂಮಿಯನ್ನು ಹಿಂದಿರುಗಿಸುವ ನೈತಿಕತೆ ತೋರಿಸುವಿರಾ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಶಾಲೆ ನಿರ್ಮಿಸುತ್ತೇನೆ ಎಂದು ಅಕ್ರಮವಾಗಿ ಸೈಟ್ ಪಡೆದು ಬಿರಿಯಾನಿ ಹೋಟೆಲ್ ನಿರ್ಮಿಸಿದ ಛಲವಾದಿ ನಾರಾಯಣಸ್ವಾಮಿ ಅವರು ಸೈಟ್ ಹಿಂದಿರುಗಿಸುವ ನೈತಿಕತೆ ತೋರಿಸುವರೇ ಎಂದೂ ಕೇಳಿದೆ.

ಬಿಜೆಪಿ ಟ್ವೀಟ್ ಮೂಲಕ ಟೀಕೆ: ಇನ್ನು ಬಿಜೆಪಿ ಸಹ ಕಾಂಗ್ರೆಸ್‌ ಪಕ್ಷವನ್ನು ಟ್ವೀಟ್‌ ಮೂಲಕ ಸರಿಯಾಗಿಯೇ ಕಾಲೆಳೆದಿದೆ. ಕೊಳ್ಳೆ ಹೊಡೆದ ವಿಚಾರ ಬಹಿರಂಗವಾದ ಮೇಲೆ ಕೊಳ್ಳೆ ಹೊಡೆದ ಸ್ವತ್ತನ್ನು ವಾಪಾಸ್ ಕೊಡುವುದು ಕಾಂಗ್ರೆಸ್ಸಿಗರ ಜಾಯಮಾನ ಎಂದಿದೆ.

Who are the fools BJP leaders We are congress

ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಿದ್ದ 5 ಎಕರೆ ಸಿಎ ನಿವೇಶನವನ್ನು ಪ್ರಿಯಾಂಕ ಖರ್ಗೆ ಅವರು ವಾಪಾಸ್ ಮಾಡುವ ಮೂಲಕ ಅಕ್ರಮ ನಡೆದಿದ್ದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಪ್ರಿಯಾಂಕ್ ಖರ್ಗೆ ಅವರು ಹಾಗೂ ಸಿದ್ದರಾಮಯ್ಯ ಅವರು ಒಂದೇ ಮುಳುಗುವ ದೋಣಿಯಲ್ಲಿ ಸಾಗುತ್ತಿದ್ದಾರೆ. ಶೀಘ್ರದಲ್ಲಿಯೇ ಸಿದ್ದರಾಮಯ್ಯ ಅವರೊಂದಿಗೆ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡಬೇಕಾಗುವ ಕಾಲ ಬರಲಿದೆ ಎಂದು ಕಾಲೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+