ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೃಷ್ಣ, ಚೆಲುವರಾಯಸ್ವಾಮಿ ರಾಜಕೀಯ ಜೀವನ ಸದ್ಯದ ಮಟ್ಟಿಗೆ ತೆರೆಮರೆಗೆ?

|
Google Oneindia Kannada News

ದೇವೇಗೌಡ್ರ ಕುಟುಂಬದ ಜೊತೆ ಮುನಿಸಿಕೊಂಡು, ಒಂದಷ್ಟು ದಿನ ಜೆಡಿಎಸ್ ರೆಬೆಲ್ ಆಗಿ ಮುಂದುವರಿದು, ಚುನಾವಣೆಗೆ ಸ್ವಲ್ಪ ದಿನ ಮುನ್ನಾ ಕಾಂಗ್ರೆಸ್ ಸೇರಿಕೊಂಡ, ಏಳು ಜನ ಜೆಡಿಎಸ್ ಬಂಡಾಯ ಮುಖಂಡರ ಗತಿ ಏನು? ಅಲ್ಲೂ ಇಲ್ಲ,ಇಲ್ಲೂ ಇಲ್ಲ,.. ಎಲ್ಲೆಲ್ಲೂ ಇಲ್ಲದ ರೀತಿಯಲ್ಲಿ ಇವರುಗಳ ರಾಜಕೀಯ ಜೀವನ ಸದ್ಯದ ಮಟ್ಟಿಗೆ ತೆರೆಮರೆಗೆ ಸರಿಯಲಿದೆಯೇ?

ಏಳು ಜನ ಬಂಡಾಯ ಶಾಸಕರಲ್ಲಿ ಮೂವರು ಚುನಾವಣೆಯಲ್ಲಿ ಗೆದ್ದಿದ್ದರೂ, ಉಳಿದ ನಾಲ್ಕು ಜನ ಹೀನಾಯ ಸೋಲು ಅನುಭವಿಸಿದ್ದು ಒಂದೆಡೆಯಾದರೆ, ಕುಮಾರಸ್ವಾಮಿ ಜೊತೆ ಜಿದ್ದಿಗೆ ಬಿದ್ದು ಪಕ್ಷದಿಂದ ಹೊರನಡೆದು, ಕಾಂಗ್ರೆಸ್ ಟಿಕೆಟಿನಿಂದ ಗೆದ್ದ ಶಾಸಕರು ಈಗ ಕುಮಾರಸ್ವಾಮಿಯಡಿಯಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯತೆಗೆ ಬಿದ್ದಿರುವುದು ಇನ್ನೊಂದೆಡೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆ

ಚುನಾವಣೆಯ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವೈಯಕ್ತಿಕ ಮಟ್ಟದಲ್ಲಿ ಕಿತ್ತಾಡಿ, ಬಡಿದಾಡಿಕೊಂಡು, ಚುನಾವಣಾ ಫಲಿತಾಂಶ ಹೊರಬಿದ್ದಮೇಲೆ, ತಮ್ಮಮ್ಮ ಶಾಸಕರು ಮೈತ್ರಿ ಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿರುವುದು ಕಾರ್ಯಕರ್ತರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿರುವುದು ಈ ನಾಯಕರಿಗೆ ಸದ್ಯಕ್ಕೆ ಬೇಕಾಗಿಲ್ಲ. ಇವರಿಗೆ ಬೇಕಾಗಿರುವುದು ಅಧಿಕಾರ..

ಫಲಿಸೀತೆ ಚೆಲುವರಾಯಸ್ವಾಮಿ ಸೋಲಿಗೆ ಜೆಡಿಎಸ್ ಹೆಣೆದ ರಣತಂತ್ರ? ಫಲಿಸೀತೆ ಚೆಲುವರಾಯಸ್ವಾಮಿ ಸೋಲಿಗೆ ಜೆಡಿಎಸ್ ಹೆಣೆದ ರಣತಂತ್ರ?

ಏಳು ಜನ ಬಂಡಾಯ ಶಾಸಕರಲ್ಲಿ ಗೌಡ್ರ ಕುಟುಂಬದ ಜೊತೆ ನೇರ ಜಿದ್ದಿಗೆ ಬಿದ್ದಿದ್ದು ಮೂವರು, ಚೆಲುವರಾಯಸ್ವಾಮಿ, ಎಚ್ ಸಿ ಬಾಲಕೃಷ್ಣ ಮತ್ತು ಜಮೀರ್ ಅಹಮದ್. ಈ ಮೂವರಲ್ಲಿ ಜಮೀರ್ ಬಿಟ್ಟು ಮಿಕ್ಕ ಇಬ್ಬರೂ ಭಾರೀ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿರುವ ನಿಯೋಜಿತ ಸಿಎಂ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿರುವ ನಿಯೋಜಿತ ಸಿಎಂ ಕುಮಾರಸ್ವಾಮಿ

ಇವರನ್ನೆಲ್ಲಾ ಸೋಲಿಸಬೇಕೆಂದು ಕುಮಾರಸ್ವಾಮಿ ವಿಶೇಷ ಒತ್ತು ನೀಡಿದ್ದೂ ಗೊತ್ತಿರುವ ವಿಚಾರ. ಆದರೆ, ಜಮೀರ್ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬರುತ್ತಿರುವುದರಿಂದ ಕುಮಾರಸ್ವಾಮಿವರ ಜೊತೆ ಒಂದೆರಡು ಸುತ್ತು ಭೇಟಿಯೂ ಆಗಿದೆ. ಪ್ರೀತಿಯಿಂದ ಕುಮಾರಸ್ವಾಮಿಯವರು ಜಮೀರ್ ಕೆನ್ನೆ ಸವರಿದ್ದೂ ಆಗಿದೆ. ಆದರೆ, ಗೆದ್ದ ಯಾರಿಗೂ ಸಚಿವ ಸ್ಥಾನ ಸದ್ಯದ ಮಟ್ಟಿಗೆ ಡೌಟೇ, ಮುಂದೆ ಓದಿ..

ಯಾರೊಬ್ಬರ ಹೆಸರೂ ಕಾಂಗ್ರೆಸ್ಸಿನ ಸಂಭಾವ್ಯ ಸಚಿವರ ಪಟ್ಟಿಯಲ್ಲಿಲ್ಲ

ಯಾರೊಬ್ಬರ ಹೆಸರೂ ಕಾಂಗ್ರೆಸ್ಸಿನ ಸಂಭಾವ್ಯ ಸಚಿವರ ಪಟ್ಟಿಯಲ್ಲಿಲ್ಲ

ಬಂಡಾಯ ಶಾಸಕರಲ್ಲಿ ಮತ್ತೊಬ್ಬರಾದ ಅಖಂಡ ಶ್ರೀನಿವಾಸಮೂರ್ತಿ ಬೆಂಗಳೂರಿನ ಪುಲಿಕೇಶಿ ನಗರದಿಂದ ಭಾರೀ ಅಂತರದಿಂದ ಗೆದ್ದಿದ್ದಾರೆ. ಇನ್ನು, ಹಗರಿಬೊಮ್ಮನಹಳ್ಳಿಯಲ್ಲಿ ಭೀಮಾ ನಾಯಕ್ ಗೆದ್ದಿದ್ದಾರೆ. ಇವರಿಬ್ಬರ ಜೊತೆ ಗೆದ್ದವರ ಪಟ್ಟಿಯಲ್ಲಿ ಜಮೀರ್ ಕೂಡಾ. ಇನ್ನು ಚೆಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್ ಬಂಡೇಸಿದ್ದೇಗೌಡ, ಇಕ್ಬಾಲ್ ಅನ್ಸಾರಿ ಸೋತಿದ್ದಾರೆ. ಗೆದ್ದ ಮೂವರಲ್ಲಿ ಯಾರೊಬ್ಬರ ಹೆಸರೂ ಕಾಂಗ್ರೆಸ್ಸಿನ ಸಂಭಾವ್ಯ ಸಚಿವರ ಪಟ್ಟಿಯಲ್ಲಿಲ್ಲ.

ಎಲ್ಲಾ ಏಳು ಬಂಡಾಯ ನಾಯಕರಿಗೆ ಸಿದ್ದರಾಮಯ್ಯನವರ ಅಭಯಹಸ್ತ

ಎಲ್ಲಾ ಏಳು ಬಂಡಾಯ ನಾಯಕರಿಗೆ ಸಿದ್ದರಾಮಯ್ಯನವರ ಅಭಯಹಸ್ತ

ಎಲ್ಲಾ ಏಳು ಬಂಡಾಯ ನಾಯಕರಿಗೆ ಸಿದ್ದರಾಮಯ್ಯನವರ ಅಭಯಹಸ್ತವಿತ್ತು. ಕಾಂಗ್ರೆಸ್ಸಿನಲ್ಲಿನ ವಿರೋಧದ ನಡುವೆಯೂ ತನ್ನನ್ನು ನಂಬಿಕೊಂಡು ಬಂದಿದ್ದ ಎಲ್ಲಾ ಏಳು ಜನರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು ಕೂಡಾ. ಆದರೆ ಚುನಾವಣೆಯ ಮುನ್ನ ಸಿದ್ದರಾಮಯ್ಯನವರ ಮಾತಿಗೆ ಹೈಕಮಾಂಡ್ ಎಷ್ಟು ಬೆಲೆ ಕೊಡುತ್ತಿತ್ತೋ ಅಷ್ಟೇ ಬೆಲೆ ಚುನಾವಣೆಯ ನಂತರವೂ ಸಿಗುತ್ತದೆ ಎನ್ನಲಾಗದು. ಜೊತೆಗೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಸೇರಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವುದರಿಂದ ಗೆದ್ದ ಮೂವರಿಗೂ ಸಚಿವ ಸ್ಥಾನ ಸಿಗುವುದು ಡೌಟು. ಆದರೆ, ಜಮೀರ್ ತನ್ನ ಪ್ರಭಾವ ಬಳಸಿ, ಸ್ಥಾನ ಗಿಟ್ಟಿಸಿಕೊಳ್ಳಲೂ ಬಹುದು ಎನ್ನುವ ಮಾತಿತ್ತು, ಆದರೆ ಇದು ಸಾಧ್ಯವಿಲ್ಲ ಎನ್ನುವ ಸುದ್ದಿ ಬರುತ್ತಿದೆ.

ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ

ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ

ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರದಿಂದ ತೀವ್ರವಾದ ರಾಜಕೀಯ ಹಿನ್ನಡೆ ಅನುಭವಿಸಿದ್ದು ಚೆಲುವರಾಯಸ್ವಾಮಿ, ಬಾಲಕೃಷ್ಣ ಮತ್ತಿಬ್ಬರು ಮುಖಂಡರು. ಅತ್ತ ಶಾಸಕ ಸ್ಥಾನವನ್ನೂ ಉಳಿಸಿಕೊಳ್ಳಲಾಗದೇ, ಇತ್ತ ಯಾವ ಪಕ್ಷವನ್ನು ತ್ಯಜಿಸಿ ಬಂದರೋ, ಅದೇ ಪಕ್ಷದ ಜೊತೆಗೆ ಕಾಂಗ್ರೆಸ್ ಕೈಜೋಡಿಸಿರುವುದು ಇವರಿಗೆ ನುಂಗಲಾರದ ತುತ್ತಾಗಿದೆ. ಕಾರ್ಯಕರ್ತರಿಗೆ ಉತ್ತರಿಸಲೂ ಸಾಧ್ಯವಾಗದೇ ಅತಂತ್ರವಾಗಿದ್ದಾರೆ.

ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ

ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ

ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಇಬ್ಬರೂ ಜೆಡಿಎಸ್ ಅಭ್ಯರ್ಥಿಗಳ ವಿರುದ್ದ ಭಾರೀ ಅಂತರದಿಂದ ಸೋಲು ಅನುಭವಿಸಿದ್ದರು. ತಮ್ಮನ್ನು ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರನ್ನು ದೂರಮಾಡಿಕೊಂಡ ಇವರಿಬ್ಬರ ಮೇಲೆ, ಒಕ್ಕಲಿಗ ಸಮುದಾಯದವರಿಗೂ ಬೇಸರವಿತ್ತು ಎನ್ನುವ ಸುದ್ದಿಯಿತ್ತು. ಜೊತೆಗೆ, ಗೌಡ್ರು ಮತ್ತು ಕುಮಾರಸ್ವಾಮಿಯವರನ್ನು ಹೀನಾಯವಾಗಿ ಅವಹೇಳನ ಮಾಡಿರುವಂತದ್ದು, ಇವೆಲ್ಲಾ ಚುನಾವಣೆಯಲ್ಲಿ ಇವರಿಬ್ಬರಿಗೂ ರಿವರ್ಸ್ ಆಯಿತು.

ಇಂದು ಸಚಿವ ಸ್ಥಾನ, ಗೂಟದ ಕಾರು ಪಕ್ಕಾ ಆಗುತ್ತಿತ್ತು

ಇಂದು ಸಚಿವ ಸ್ಥಾನ, ಗೂಟದ ಕಾರು ಪಕ್ಕಾ ಆಗುತ್ತಿತ್ತು

ಇನ್ನು ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (ಬಾಲಕೃಷ್ಣ) ಆಯ್ಕೆಯ ವಿಚಾರದಲ್ಲಿ ಸಿದ್ದರಾಮಯ್ಯ ತಮ್ಮನ್ನು ಸಂಪರ್ಕಿಸಲಿಲ್ಲ ಎನ್ನುವ ಬೇಸರ ಡಿ ಕೆ ಶಿವಕುಮಾರ್ ಅವರಲ್ಲಿತ್ತು ಎನ್ನುವುದು ಗೊತ್ತಿರುವ ವಿಚಾರವೇ. ಗೌಡ್ರ ಕುಟುಂಬದ ಮಾತನ್ನು ಹೇಗೋ ಸಂಬಾಳಿಸಿಕೊಂಡು ಇವರಿಬ್ಬರು ಜೆಡಿಎಸ್ ನಿಂದಲೇ ಸ್ಪರ್ಧಿಸಿ ಗೆದ್ದಿದ್ದರೆ, ಇಂದು ಸಚಿವ ಸ್ಥಾನ, ಗೂಟದ ಕಾರು ಪಕ್ಕಾ ಆಗುತ್ತಿತ್ತು.

ಬಾಲಕೃಷ್ಣ, ಚೆಲುವರಾಯಸ್ವಾಮಿ ರಾಜಕೀಯ ಜೀವನ ಸದ್ಯದ ಮಟ್ಟಿಗೆ ತೆರೆಮೆರೆಗೆ?

ಬಾಲಕೃಷ್ಣ, ಚೆಲುವರಾಯಸ್ವಾಮಿ ರಾಜಕೀಯ ಜೀವನ ಸದ್ಯದ ಮಟ್ಟಿಗೆ ತೆರೆಮೆರೆಗೆ?

ಈಗ, ಇವರಿಬ್ಬರು ತಮ್ಮ ಮುಂದಿನ ರಾಜಕೀಯ ನಡೆಯನ್ನು ಯಾವರೀತಿಯಲ್ಲಿ ಇಡಲಿದ್ದಾರೆ ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ರಾಜಕೀಯದಲ್ಲಿ ಯಾರೂ ವೈರಿಗಳಲ್ಲ ಎನ್ನುವುದಕ್ಕೆ ಜೆಡಿಎಸ್-ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿರುವುದೇ ಸಾಕ್ಷಿ. ಆದರೆ, ತಮ್ಮ ವಿರುದ್ದ ಹೋದವರನ್ನು ಅಷ್ಟು ಬೇಗ ಗೌಡ್ರು ಹತ್ತಿರಕ್ಕೆ ಬಿಟ್ಟಿಕೊಂಡ ಉದಾಹರೆಣೆಗಳು ಕಮ್ಮಿ. ಹಾಗಾಗಿ, ಜೆಡಿಎಸ್-ಕಾಂಗ್ರೆಸ್ ಸರಕಾರ ಇರುವ ತನಕ, ಇವರಿಬ್ಬರ ರಾಜಕೀಯ ಜೀವನ ತೆರೆಮೆರೆಗೆ ಸರಿದಂತೆಯೇ ಎಂದು ವಾಖ್ಯಾನಿಸಲಾಗುತ್ತಿದೆ.

English summary
What will be the fate of JDS rebel leaders Balakrishna and Cheluvaryaswamy, both are lost the election in Magadi and Nagamangala respectively. After the rift with Deve Gowda family Balakrishna and Cheluvarayaswamy and other 5 leaders left JDS and contested the assembly election from Congress ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X