• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿಕೆಶಿ ಭೇಟಿಯ ವೇಳೆ ಅಸಲಿ ನಡೆದಿದ್ದೇನು?

|
Google Oneindia Kannada News

ಕರ್ನಾಟಕದಲ್ಲಿ ಮುಂದಿನ ಚುನಾವಣೆಗೆ ಇನ್ನೂ ಹೆಚ್ಚುಕಮ್ಮಿ ಎರಡು ವರ್ಷವಿದೆ. ಒಗ್ಗಟ್ಟಾಗಿ, ಯಾವುದೇ ಗೊಂದಲವಿಲ್ಲದೇ ಚುನಾವಣೆಯನ್ನು ಎದುರಿಸಿದರೆ ಗೆಲ್ಲುವ ಸಾಧ್ಯತೆಯಿದೆ ಎನ್ನುವುದು ರಾಹುಲ್ ಗಾಂಧಿಯವರ ಲೆಕ್ಕಾಚಾರವಾಗಿರಬಹುದು. ಆ ಕಾರಣಕ್ಕಾಗಿಯೇ, ಉಸ್ತುವಾರಿ ರಣದೀಪ್ ಸುರ್ಜೇವಾಲ ರಾಜ್ಯಕ್ಕೆ ಸತತವಾಗಿ ಭೇಟಿ ನೀಡುತ್ತಿದ್ದಾರೆ.

ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಮಾತನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ ನಂತರ, ಇದು ದಿನಕ್ಕೊಂದು ಆಯಾಮ ಪಡೆಯುತ್ತಾ ಸಾಗಿದ್ದು ಗೊತ್ತೇ ಇದೆ. ಶಾಸಕರು ತಮ್ಮತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತ ಪಡಿಸಲು ಆರಂಭಿಸಿದ ನಂತರ, ಹೈಕಮಾಂಡಿಗೆ ಇದು ತಲೆನೋವಾಗಿ ಪರಿಣಮಿಸಿತು.

 'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ 'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ

ಇದಕ್ಕೆಲ್ಲಾ ಒಂದು ಹಂತಕ್ಕೆ ಬ್ರೇಕ್ ಹಾಕಲು ರಾಜ್ಯ ನಾಯಕರು ಯಶಸ್ವಿಯಾದ ನಂತರ, ಕಾರ್ಯಕರ್ತರು ಡಿಕೆಶಿ ಮುಂದಿನ ಸಿಎಂ, ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಘೋಷಣೆಯನ್ನು ಹೋದ ಬಂದಲ್ಲಿ ಕೂಗಲು ಆರಂಭಿಸಿದರು. ಇದು ರಾಜ್ಯದ ನಾಯಕರಿಗೆ ಇರಿಸುಮುರಿಸು ಉಂಟಾಗಲು ಆರಂಭಿಸಿತು.

ಇಷ್ಟೆಲ್ಲಾ ಪೀಠಿಕೆ ಏನಕ್ಕೆ ಅಂದರೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದರು. ರಾಹುಲ್ ಗಾಂಧಿ ಬುಲಾವ್ ಮೇರೆಗೆ ಇವರಿಬ್ಬರು ದೆಹಲಿಗೆ ಪ್ರಯಾಣಿಸಿದ್ದರು.

ಬಳಸಿ ಬಿಸಾಡುವುದು ಬಿಜೆಪಿಯ ಸಂಸ್ಕೃತಿ; ಸುರ್ಜೇವಾಲಬಳಸಿ ಬಿಸಾಡುವುದು ಬಿಜೆಪಿಯ ಸಂಸ್ಕೃತಿ; ಸುರ್ಜೇವಾಲ

 ಹಿರಿಯ ಮುಖಂಡರು ದೆಹಲಿಯಲ್ಲಿ ಹೈಕಮಾಂಡಿಗೆ ದೂರು ನೀಡಿ ಬಂದಿದ್ದರು

ಹಿರಿಯ ಮುಖಂಡರು ದೆಹಲಿಯಲ್ಲಿ ಹೈಕಮಾಂಡಿಗೆ ದೂರು ನೀಡಿ ಬಂದಿದ್ದರು

ಮುಂದಿನ ನಾಯಕತ್ವದ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ಸದ್ದು ಮಾಡುತ್ತಿದ್ದಂತಹ ಸಂದರ್ಭದಲ್ಲಿ ಕೆಲವು ಹಿರಿಯ ಮುಖಂಡರು ದೆಹಲಿಯಲ್ಲಿ ದೂರು ನೀಡಿ ಬಂದಿದ್ದರು. ಇದಕ್ಕೆ ಈಗಲೇ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ, ಮುಂದಿನ ಚುನಾವಣೆಯ ಹೊತ್ತಿಗೆ ಪಕ್ಷಕ್ಕೆ ಗಂಭೀರ ಸಮಸ್ಯೆಯಾಗಲಿದೆ ಎಂದು ಕೆ.ಎಚ್.ಮುನಿಯಪ್ಪ ಆದಿಯಾಗಿ ಹಿರಿಯರು ಈ ಬಗ್ಗೆ ಕಾಂಗ್ರೆಸ್ ವರಿಷ್ಠರನ್ನು ಎಚ್ಚರಿಸಿದ್ದರು. (ಸಾಂದರ್ಭಿಕ ಚಿತ್ರ)

 ಇಬ್ಬರು ನಾಯಕರ ಜೊತೆಗೆ ಚರ್ಚೆ ನಡೆಸಿದ ನಂತರ, ಫೋಟೋ ತೆಗೆಸಿಕೊಂಡ ರಾಹುಲ್ ಗಾಂಧಿ

ಇಬ್ಬರು ನಾಯಕರ ಜೊತೆಗೆ ಚರ್ಚೆ ನಡೆಸಿದ ನಂತರ, ಫೋಟೋ ತೆಗೆಸಿಕೊಂಡ ರಾಹುಲ್ ಗಾಂಧಿ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನುವ ಮಾತೂ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ, ಇಬ್ಬರೂ ನಾಯಕರನ್ನು ರಾಹುಲ್ ಗಾಂಧಿ ದೆಹಲಿಗೆ ಕರೆಸಿದ್ದರು. ನಾಯಕತ್ವದ ವಿಚಾರವೇ ಇಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿತ್ತು. ಇಬ್ಬರು ನಾಯಕರ ಜೊತೆಗೆ ಚರ್ಚೆ ನಡೆಸಿದ ನಂತರ, ಫೋಟೋ ತೆಗೆಸಿಕೊಂಡ ರಾಹುಲ್ ಗಾಂಧಿ, ಒಗ್ಗಟ್ಟಿನ ಮಂತ್ರವನ್ನು ಕಾಂಗ್ರೆಸ್ ವಲಯದಲ್ಲಿ ಸಾರುವಂತೆ ಮಾಡಿದ್ದರು.

 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ರಾಹುಲ್ ಅವರಿಂದ ಒಂದು ಕಿವಿಮಾತು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ರಾಹುಲ್ ಅವರಿಂದ ಒಂದು ಕಿವಿಮಾತು

ರಾಹುಲ್ ಗಾಂಧಿ ಜೊತೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತುಕತೆಯ ವೇಳೆ, ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕೂಡಾ ಇದ್ದರು ಎಂದು ಹೇಳಲಾಗುತ್ತಿದೆ. ಚರ್ಚೆಯ ನಂತರ, ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ, ಸಿದ್ದರಾಮಯ್ಯನವರೇ ನಮ್ಮ ಆಯ್ಕೆ ಎನ್ನುವ ವಿಷಯವನ್ನು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಒಂದು ಕಿವಿಮಾತನ್ನು ಹೇಳಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. (ಸಾಂದರ್ಭಿಕ ಚಿತ್ರ)

  ಗಡ್ಡ ಹಾಗೂ ತಿಲಕಾನೆ ನನ್ನ IDENTITY !! C T RAVI | Oneindia Kannada
   ನಿಮ್ಮ ಮೇಲೆ ಇರುವ ಕೇಸುಗಳು ಕ್ಲಿಯರ್ ಆಗುವ ತನಕ ಸಿಎಂ ಹುದ್ದೆಗೆ ಪರಿಗಣಿಸಲು ಸಾಧ್ಯವಿಲ್ಲ

  ನಿಮ್ಮ ಮೇಲೆ ಇರುವ ಕೇಸುಗಳು ಕ್ಲಿಯರ್ ಆಗುವ ತನಕ ಸಿಎಂ ಹುದ್ದೆಗೆ ಪರಿಗಣಿಸಲು ಸಾಧ್ಯವಿಲ್ಲ

  ನಿಮ್ಮ ಮೇಲೆ ಇರುವ ಕೇಸುಗಳು ಕ್ಲಿಯರ್ ಆಗುವ ತನಕ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲು ಸಾಧ್ಯವಿಲ್ಲ, ಆದಷ್ಟು ಬೇಗ ಇದರಿಂದ ಹೊರಬನ್ನಿ ಎನ್ನುವ ಮಾತನ್ನು ರಾಹುಲ್ ಗಾಂಧಿಯವರು ಡಿಕೆಶಿಗೆ ಹೇಳಿದ್ದರು. ಜೊತೆಯಾಗಿ ನಾವು ಚುನಾವಣೆಗೆ ಸಾಗೋಣ, ನಮಗಿರುವ ಒಂದು ಆಶಾಭಾವನೆ ಎಂದರೆ ಕರ್ನಾಟಕ.

  ರಾಜ್ಯದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸಲು ನೀವಿಬ್ಬರೂ ಜೊತೆಯಾಗಿ ಸಾಗಿ, ಅಧಿಕಾರದ ಬಗ್ಗೆ ನಂತರ ಚಿಂತಿಸೋಣ ಎನ್ನುವ ರಾಹುಲ್ ಗಾಂಧಿ ಮಾತಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಲೆಯಾಡಿಸಿದರು ಎನ್ನುವ ಮಾತು ಕೇಳಿಬರುತ್ತಿದೆ. (ಸಾಂದರ್ಭಿಕ ಚಿತ್ರ)

  English summary
  What Is The Outcome Of Rahul Gandhi Meeting With Siddaramaiah And D K Shivakumar. Know More,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X