ರಾತ್ರೋರಾತ್ರಿ ಕೈ ಪಾಳಯದಲ್ಲಿ ಆಗಿದ್ದೇನು!? 28 ರ ಪಟ್ಟಿ 8 ಕ್ಕೆ ಇಳಿದಿದ್ದು ಹೇಗೆ?

ಬೆಂಗಳೂರು, ಮೇ 25: ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಹೈಕಮಾಂಡ್‌ ಅಂತಿಮ ನಿರ್ಧಾರದಂತೆ ಡಿ ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆ ನಡೆದ ಸಂಧಾನ ಸಭೆಯ ಬಳಿಕ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿಯಾಗಿ ಹೈಕಮಾಂಡ್‌ ಘೋಷಣೆ ಮಾಡಿದೆ. ಬಳಿಕ ಸಂಪುಟ ರಚನೆಯ ಕುರಿತು ಡಿ ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ನಡುವೆ ಜಟಾಪಟಿ ನಡೆಸಿದೆ.

ಮೊದಲ ಹಂತದಲ್ಲೇ 28 ಮಂದಿ ಸೇರ್ಪಡೆ ಸಂಪುಟ ಸೇರ್ಪಡೆಗೆ ಹೈಕಮಾಂಡ್‌ ನಿರ್ಧರಿಸಿತ್ತು. ಆದರೆ, ರಾತ್ರೋರಾತ್ರಿ ನಡೆದ ಚರ್ಚೆಯಿಂದಾಗಿ 28 ಜನರ ಪಟ್ಟಿಯಲ್ಲಿ 8 ಜನ ಕ್ಕೆ ಇಳಿದಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಸಂಪುಟಕ್ಕೆ ಯಾರು ಸೇರ್ಪಡೆಯಾಗಬೇಕು, ಯಾರಾಗ­ಬಾರದು ಎಂಬ ವಿಚಾರದಲ್ಲಿ ನಡೆದ ಜಟಾಪಟಿ ಏರ್ಪಟ್ಟಿದೆ. ಇತ್ತ ತಮ್ಮ ತಮ್ಮ ಬೆಂಬಲಿಗರಿಗೆ ಮಂತ್ರಿಗಿರಿ ಕೊಡಿಸುವ ನಿಟ್ಟಿನಲ್ಲಿ ಏರ್ಪಟ್ಟ ಚರ್ಚೆಯಿಂದಾಗಿ ಪಟ್ಟಿಯಲ್ಲಿ ಇಪ್ಪತ್ತು ಮಂದಿ ಔಟ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ.

Congress Camp Overnight

ಈಗಾಗಲೇ ಮುಖ್ಯಮಂತ್ರಿ ಆಯ್ಕೆ ವಿಚಾರದ ಬಳಿಕ ಸಂಪುಟ ಸಂಪುಟ ಸೇರ್ಪಡೆ ಸಂಬಂಧ ಸಿದ್ದರಾಮಯ್ಯ ಒಂದು ಪಟ್ಟಿ, ಡಿ.ಕೆ.ಶಿವಕುಮಾರ್‌ ಒಂದು ಪಟ್ಟಿ, ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲ ಹಾಗೂ ಕೆ.ಸಿ.ವೇಣು­ಗೋಪಾಲ್‌ ಅವರ ಬಳಿ ಮತ್ತೂಂದು ಪಟ್ಟಿ ರೆಡಿ ಇತ್ತು. ಆದರೆ, ಮೇ 19 ರಂದು ರಾತ್ರೋರಾತ್ರಿ ನಡೆದ ಸಭೆಯಲ್ಲಿ ಸಹಮತ ಮೂಡದ ಕಾರಣ ಮೂರೂ ಪಟ್ಟಿಯಲ್ಲಿದ್ದ ಎಂಟು ಮಂದಿ ಸೇರ್ಪಡೆಗೆ ಗ್ರೀನ್‌ ಸಿಗ್ನಲ್‌ ದೊರೆಯಿತು ಎಂದು ತಿಳಿದು ಬಂದಿದೆ

ಇನ್ನೂ ಮೊದಲ ಪಟ್ಟಿಯಲ್ಲೇ ಸೇರ್ಪಡೆ ಆಸೆ ಹೊಂದಿದ್ದ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್‌, ಟಿ.ಬಿ.ಜಯಚಂದ್ರ, ಲಕ್ಷ್ಮಣ ಸವದಿ, ಎಚ್‌.ಸಿ.ಮಹದೇವಪ್ಪ, ಯು.ಟಿ.ಖಾದರ್‌, ಲಕ್ಷ್ಮೀ ಹೆಬ್ಟಾಳ್ಕರ್‌, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಶಿವಲಿಂಗೇಗೌಡ , ಮಧು ಬಂಗಾರಪ್ಪ, ಬಸವರಾಯ ರಾಯರೆಡ್ಡಿ ಸೇರಿ ಹಲವರಿಗೆ ಇದೀಗ ಬೇಸರಗೊಂಡಿಇದ್ದು, ಪಕ್ಷದ ನಾಯಕರ ವಿರುದ್ದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವಿಧಾನಷರಿಷತ್‌ ವಿಪಕ್ಷ ನಾಯಕರಾಗಿದ್ದ ಬಿ.ಕೆ.ಹರಿಪ್ರಸಾದ್‌ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಲಾಗಿದೆ.

Congress Camp Overnight

ಸಂಭವನೀಯ ಸಚಿವರ ಪಟ್ಟಿ ಇಲ್ಲಿದೆ?:

ಬಿ.ಕೆ.ಹರಿಪ್ರಸಾದ್‌

ಆರ್‌.ವಿ.ದೇಶಪಾಂಡೆ

ಎಂ.ಕೃಷ್ಣಪ್ಪ

ಕೃಷ್ಣ ಬೈರೇಗೌಡ

ಬೈರತಿ ಸುರೇಶ್‌

ದಿನೇಶ್‌ ಗುಂಡೂರಾವ್‌

ಮಧು ಬಂಗಾರಪ್ಪ

ಶಿವಾನಂದ ಪಾಟೀಲ್‌

ಶಿವರಾಜ ತಂಗಡಗಿ

ಕೆ.ಎನ್‌.ರಾಜಣ್ಣ

ಬಸವರಾಜ ರಾಯರೆಡ್ಡಿ

ಲಕ್ಷ್ಮೀ ಹೆಬ್ಬಾಳಕರ್‌

ಲಕ್ಷ್ಮಣ ಸವದಿ

ರಾಘವೇಂದ್ರ ಹಿಟ್ನಾಳ್‌

ಎಚ್‌.ಕೆ.ಪಾಟೀಲ್‌

ರಹೀಂ ಖಾನ್‌

ಎಚ್‌.ಸಿ.ಮಹದೇವಪ್ಪ

ಈಶ್ವರ್‌ ಖಂಡ್ರೆ

ಚೆಲುವರಾಯಸ್ವಾಮಿ

ಎಸ್‌.ಎಸ್‌.ಮಲ್ಲಿಕಾರ್ಜುನ್‌

ವಿನಯ್‌ ಕುಲಕರ್ಣಿ

ಸಂತೋಷ್‌ ಲಾಡ್‌

ಸಲೀಂ ಅಹಮದ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+