ST-SC ಹಣ ಗ್ಯಾರಂಟಿಗಳಿಗೆ ಬಳಕೆ ಆರೋಪಕ್ಕೆ ಹೆಚ್‌ಎಂ ರೇವಣ್ಣ ಹೇಳಿದ್ದೇನು?
ಬೆಂಗಳೂರು ಜುಲೈ 11: ST-SC ಪಂಗಡದವರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಕೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್‌ಎಂ ರೇವಣ್ಣ ಸಮರ್ಥನೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಇಪಿ-ಟಿಎಸ್‌ಪಿ ಹಣವನ್ನು ಸಿದ್ದರಾಮಯ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿದೆ. ಹಣ ದುರುಪಯೋಗ ಆಗಿಲ್ಲ. ಐದು ಗ್ಯಾರಂಟಿಗಳಲ್ಲಿ ದಲಿತ ಫಲಾನುಭವಿಗಳು ಇದ್ದಾರೆ. ಹೀಗಾಗಿ ಎಸ್‌ಇಪಿ-ಟಿಎಸ್‌ಪಿ ಹಣ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹಣ ಸರಿಯಾಗಿ ಬಳಕೆ ಮಾಡಿಕೊಳ್ಳುವುದು ನಮ್ಮ ಕೆಲಸ. ನಾನು ಕೂಡ ಇದನ್ನೇ ಮಾಡಿದ್ದು. ಬಿಜೆಪಿ ಕೇಳುತ್ತಾರೆ ಅಂತ ನಾವು ಹೆದರುವುದಿಲ್ಲ ಎಂದು ಹೇಳಿದರು.
ಏನಿದು ಆರೋಪ?
ST-SC ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಇರಿಸಲಾಗಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ( ಎನ್‌ಸಿಎಸ್‌ಸಿ) ಮಂಗಳವಾರ ರಾಜ್ಯ ಸರ್ಕಾರಕ್ಕೆ ಕೇಳಿದೆ.
ಮಾಧ್ಯಮ ವರದಿಯ ನಂತರ, ಎನ್‌ಸಿಎಸ್‌ಸಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ(ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪ ಯೋಜನೆ(ಟಿಎಸ್‌ಪಿ) ಹಣವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವ ಆರೋಪದ ಬಗ್ಗೆ ಸ್ವಯಂ ಪ್ರೇರಿತವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಎನ್‌ಸಿಎಸ್‌ಸಿ, ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಮೀಸಲಿಟ್ಟ 14,730 ಕೋಟಿ ರೂ.ಗಳನ್ನು ಮರುಹಂಚಿಕೆ ಮಾಡಲು ನಿರ್ಧರಿಸಿದೆ ಎಂದು ಹೈಲೈಟ್ ಮಾಡಿದೆ ಮತ್ತು SC/ST ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣವನ್ನು ಉತ್ತೇಜಿಸುವಲ್ಲಿ ಈ ಹಣದ ಪ್ರಾಮುಖ್ಯತೆಯನ್ನು ಆಯೋಗವು ಒತ್ತಿಹೇಳಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಎನ್‌ಸಿಎಸ್‌ಸಿ ಈ ವಿಷಯದ ಬಗ್ಗೆ ಏಳು ದಿನಗಳಲ್ಲಿ ವಿವರವಾದ ವರದಿಯನ್ನು ಕೋರಿದ್ದು, SC/ST ಸಮುದಾಯಗಳ ಕಲ್ಯಾಣಕ್ಕೆ ಧಕ್ಕೆಯಾಗದಂತೆ ಖಾತ್ರಿಪಡಿಸುವ ಹಣವನ್ನು ಇತರ ಯೋಜನೆಗಳಿಗೆ ಬಳಸಿದ ಬಗ್ಗೆ ಮತ್ತು ಅದರ ಹಿಂದಿನ ತಾರ್ಕಿಕತೆಯನ್ನು ವಿವರಿಸುವ ಮೂಲಕ ಸಮಗ್ರ ವರದಿ ನೀಡುವಂತೆ NCSC ಕೇಳಿಕೊಂಡಿದೆ.












Click it and Unblock the Notifications