ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರು ಕಡ್ಡಾಯವಾಗಿ ಹೊಟ್ಟೆ ಕರಗಿಸುವಂತೆ ಸುತ್ತೋಲೆ !

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ದಿನಕ್ಕೆ ಐದು ಕಿ.ಮೀ. ಓಡಬೇಕು, ಎರಡು ಕಿ.ಮೀ. ನಡೀಬೇಕು. ಇದರ ಜತೆಗೆ ವ್ಯಾಯಾಮ ಮೂಲಕ ದೇಹ ದಂಡನೆ ಮಾಡಬೇಕು ! ಮುಂದಿನ ಎರಡು ತಿಂಗಳಲ್ಲಿ ಕಡ್ಡಾಯವಾಗಿ ಹತ್ತು ಕೆ.ಜಿ. ದೇಹ ತೂಕ ಇಳಿಸಲೇಬೇಕು !

ಕರ್ನಾಟಕ ರಾಜ್ಯ ಮೀಸಲು ಪಡೆ ಪೊಲೀಸ್ ಸಿಬ್ಬಂದಿಗೆ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಕೊಟ್ಟಿರುವ ಟಾಸ್ಕ್ ಇದು. ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನಿಯೋಜನೆಗೊಳ್ಳುವ ಕೆಎಸ್ ಆರ್ ಪಿ ಹಾಗೂ ಐಆರ್ ಬಿ ಸಿಬ್ಬಂದಿಯ ದೇಹ ದಂಡನೆ ಮೂಲಕ"ಫಿಟ್ ಪೊಲೀಸ್" ಅಭಿಯಾನಕ್ಕೆ ಕೆಎಸ್ಆರ್ಪಿ ಎಡಿಜಿಪಿ ಚಾಲನೆ ನೀಡಿದ್ದಾರೆ.

ಪ್ರಾಯೋಗಿಕವಾಗಿ ನಡೆಸಿದ ಈ ಅಭಿಯಾನದಿಂದ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿ ಸ್ಲಿಮ್ ಆಗಿದ್ದಾರೆ. ಪೊಲೀಸಿಂಗ್ ಮಾಡಲಿಕ್ಕೂ ಫಿಟ್ ಆಗಿದ್ದಾರೆ. ಇದು ಇಲಾಖೆಗೆ ಅನುಕೂಲವಾದರೆ, ಇನ್ನು ಎಲ್ಲರ ಆರೋಗ್ಯ ಕೂಡ ಸುಧಾರಿಸಿದೆ. ಪ್ರಾಯೋಗಿಕ ಯಶಸ್ಸು ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಗೆ ತೂಕ ಇಳಿಸಲು ಎರಡು ತಿಂಗಳು ಗುಡುವು ನೀಡಲಾಗಿದೆ. ಈ ಕುರಿತು ಎಲ್ಲಾ ಕಮಾಂಡಂಟ್ ಗಳಿಗೆ ಸೂಚಿಸಲಾಗಿದೆ. ಇಲ್ಲಿಯ ವರೆಗೂ ಬೆಳಗಿನ ಜಾವ ನಿದ್ದೆ ಮಾಡುತ್ತಿದ್ದ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಇದೀಗ ಬೆಳಗ್ಗೆ ಎದ್ದು ದೇಹ ದಂಡನೆ ಮಾಡಿ ತೂಕ ಇಳಿಸಲು ಮುಂದಾಗಿದ್ದಾರೆ.

ತೂಕ ಎಷ್ಟು ಇಳಿಸಬೇಕು:

ತೂಕ ಎಷ್ಟು ಇಳಿಸಬೇಕು:

ವಯೋಮಿತಿ ಅನುಸಾರವಾಗಿ ತೂಕ ಇಳಿಸಲು ಸೂಚಿಸಲಾಗಿದೆ. 40 ವರ್ಷದೊಳಗಿನ ಪೊಲೀಸ್ ಸಿಬ್ಬಂದಿ 10 ಕೆ.ಜಿ. ತೂಕ ಇಳಿಸಬೇಕು. 40 ರಿಂದ 50 ವರ್ಷದೊಳಗಿನ ಪೊಲೀಸ್ ಸಿಬ್ಬಂದಿ 5 ಕೆ.ಜಿ. ತೂಕ ಇಳಿಸಬೇಕು. 50 ರಿಂದ 55 ವರ್ಷದೊಳಗಿನ ಪೊಲೀಸ್ ಸಿಬ್ಬಂದಿ 2.5 ಕೆ.ಜಿ. ತೂಕ ಇಳಿಸಲೇಬೇಕು. ಏಪ್ರಿಲ್ 30, 2021 ರೊಳಗೆ ಇದು ಅನುಷ್ಠಾನಕ್ಕೆ ಬರಬೇಕು ಎಂದು ಎಲ್ಲಾ ಕಮಾಂಡಂಟ್ ಗಳಿಗೆ ಸೂಚಿಸಲಾಗಿದೆ.

ತೂಕ ಇಳಿಸೋದು ಹೇಗೆ :

ತೂಕ ಇಳಿಸೋದು ಹೇಗೆ :

ಕೆಎಸ್ ಆರ್ ಪಿ ಸಿಬ್ಬಂದಿ ಪ್ರತಿ ದಿನ ಐದು ಕಿ.ಮೀ. ಓಡಬೇಕು. ಎರಡು ಕಿ.ಮೀ. ವಾಕಿಂಗ್, ಜತೆಗೆ ನಾನಾ ರೀತಿಯ ವ್ಯಾಯಾಮ ಮಾಡಬೇಕು. ಈ ಮೂಲಕ ಎರಡು ತಿಂಗಳಲ್ಲಿ ಸೂಚಿತ ತೂಕ ಇಳಿಸಬೇಕು. ಈ ಮೂಲಕ ಪೊಲೀಸ್ ಸಿಬ್ಬಂದಿ ಆರೋಗ್ಯವಂತರಾಗಬೇಕು. ಜತೆಗೆ ಪೊಲೀಸಿಂಗ್ ಮಾಡಲಿಕ್ಕೂ ಫಿಟ್ ಆಗಿರಬೇಕು ಎಂಬ ಉದ್ದೇಶದಿಂದ ಈ ಸತ್ತೋಲೆ ಹೊರಡಿಸಲಾಗಿದೆ.

ಪ್ರಾಯೋಗಿಕ ಯಶಸ್ಸು:

ಪ್ರಾಯೋಗಿಕ ಯಶಸ್ಸು:

ಅಲೋಕ್ ಕುಮಾರ್ ಕೆಎಸ್ ಆರ್ಪಿ ಎಡಿಜಿಪಿಯಾಗಿ ನಿಯೋಜನೆಗೊಂಡ ಬಳಿಕ ತೂಕ ಇಳಿಸಲು ದೇಹ ದಂಡನೆ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪೊಲೀಸ್ ಸಿಬ್ಬಂದಿಯ ಅನಾರೋಗ್ಯ, ಹೊಟ್ಟೆ ಬಿಟ್ಟುಕೊಂಡು ಓಡಲಾರದ ಸ್ಥಿತಿಯಲ್ಲಿದ್ದ ಸಿಬ್ಬಂದಿ ಹೊಟ್ಟೆ ಕರಗಿಸಲು ಪ್ರಾಯೋಗಿಕವಾಗಿ ಈ ಪ್ಲಾನ್ ರೂಪಿಸಿದ್ದರು. ಇದು ಯಶಸ್ಸು ಆದ ಬಳಿಕ ರಾಜ್ಯದ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯ ಆರೋಗ್ ಮತ್ತು ಫಿಟ್ ಪೊಲೀಸಿಂಗ್ ಭಾಗವಾಗಿ ಈ ಅಭಿಯಾನ ಮುಂದುವರೆಸಿದ್ದಾರೆ. ಅಲೋಕ್ ಅವರ ಈ ಪ್ಲಾನ್ ಗೆ ಸಂತಸ ವ್ಯಕ್ತಪಡಿಸಿರುವ ಪೊಲೀಸ್ ಸಿಬ್ಬಂದಿ ಇದೀಗ ಬೆಳಗಾದರೆ ದೇಹ ದಂಡನೆ ಕಾರ್ಯದಲ್ಲಿ ತೊಡಗಿದ್ದಾರೆ.

ಹೊಟ್ಟೆ ಇಸ್ಪೀಟು

ಹೊಟ್ಟೆ ಇಸ್ಪೀಟು

ಪೊಲೀಸ್ ಬಂದೋ ಬಸ್ತ್, ಗಲಾಟೆಯಾದರೆ ಮೊದಲು ನಿಯೋಜನೆಗೊಳ್ಳುವುದೇ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿ. ಆದರೆ, ಯಾವಾಗಲೂ ಗ್ರಿಲ್ ಇರುವಂತಹ ಪೊಲೀಸ್ ವಾಹನದಲ್ಲಿ ಟೈಂ ಪಾಸ್ ಗೆ ಇಸ್ಪೀಟ್ ಎಲೆ ತಿರುವು ಹಾಕಿಕೊಂಡೇ ಇರುತ್ತಿದ್ದರು. ಹೀಗೆ ಕೂತಲ್ಲಿ ಕೆಲಸ ನಿರ್ವಹಿಸಿ ಅಗತ್ಯಕ್ಕಿಂತಲೂ ಹೆಚ್ಚು ಹೊಟ್ಟೆ ಬೆಳೆಸಿಕೊಂಡಿದ್ದರು. ಗಲಾಟೆಯಾದರೆ ಓಡಲಾರದ ಪರಿಸ್ಥಿತಿ. ಮನಸು ಪೊಲೀಸಿಂಗ್ ಮಾಡಲು ಹೇಳಿದರೂ ಅದಕ್ಕೆ ದೇಹ ಸ್ಪಂದನೆ ಮಾಡಲಾರದು. ಹೀಗಾಗಿ ಕೆಎಸ್ ಆರ್ ಪಿ ಸಿಬ್ಬಂದಿ ಡುಮ್ಮಣ್ಣ ಪೊಲೀಸ್ ರಾಗಿ ಗುರುತಿಸಿಕೊಂಡಿದ್ದರು. ಇದೀಗ ತೂಕ ಇಳಿಸಿ ತೂಕ ಇಳಿಸಿ ದೇಹ ದಂಡನೆ ಮಾಡುವ ಮೂಲಕ ಎಲ್ಲರಿಗೂ ಮಾದರಿ ಫಿಟ್ ಪೊಲೀಸ್ ಆಗಿ ಕಾಣತೊಡಗಿದ್ದಾರೆ. ಇದು ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

English summary
weight loss task given for Karnataka state reserve police across the state know more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X