ಜ.24ರ ಹವಾಮಾನ: ರಾಜ್ಯದಲ್ಲಿ ಬೆಳಗಿನ ಚಳಿಗೆ, ಸಂಜೆಯ ಶೀತಗಾಳಿಗೆ ಜನರು ಹೈರಾಣ

ಬೆಂಗಳೂರು, ಜನವರಿ 24: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನಕ್ಕೆ ಪ್ರತಿ ಮನೆಗಳಲ್ಲೂ ಶೀತ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಬೆಳಗ್ಗೆ ವಿಪರೀತ ಚಳಿ ಮತ್ತು ಸಂಜೆ ಆಗುತ್ತಿದ್ದಂತೆ ಬೀಸುವ ಶೀತ ಗಾಳಿ ಜನರು ಮನೆ ಸೇರುವಂತೆ ಮಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ 16, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಇನ್ನುಳಿದಂತೆ ಬೆಂಗಳೂರಿನ ಆಸುಪಾಸಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ ಜೊತೆ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ದರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಬೇಸಿಗೆ ಕಾಲದ ಅನುಭವವನ್ನು ನೀಡುತ್ತಿದೆ. ಕೆಲ ಭಾಗಗಳಲ್ಲಿ ಬೆಳಗಿನ ಜಾವ ಮಂಜು ಸಹ ಬೀಳುತ್ತಿದೆ.

ಜಿಲ್ಲಾವಾರು ತಾಪಮಾನ ವರದಿ
ಬೆಂಗಳೂರು 28-16, ಮೈಸೂರು 31-16, ಚಾಮರಾಜನಗರ 31-17, ರಾಮನಗರ 30-16, ಮಂಡ್ಯ 31-16, ಬೆಂಗಳೂರು ಗ್ರಾಮಾಂತರ 28-16, ಚಿಕ್ಕಬಳ್ಳಾಪುರ 28-15, ಕೋಲಾರ 29-18, ಹಾಸನ 29-13, ಚಿಕ್ಕಮಗಳೂರು 28-12, ದಾವಣಗೆರೆ 30-14, ಶಿವಮೊಗ್ಗ 31-14, ಕೊಡಗು 28-13, ತುಮಕೂರು 29-14 ಡಿಗ್ರಿ ಸೆಲ್ಸಿಯಸ್ ಇರಲಿದೆ.

Karnataka Weather Report (24 January 2022) : Heavy Cold in the Morning, cold air In the Evening

ಉಡುಪಿ 29-20, ಮಂಗಳೂರು 30-20, ಉತ್ತರ ಕನ್ನಡ 29-13, ಧಾರವಾಡ 28-12, ಹಾವೇರಿ 30-14, ಹುಬ್ಬಳ್ಳಿ 29-13, ಬೆಳಗಾವಿ 27-12, ಗದಗ 29-14, ಕೊಪ್ಪಳ 29-15, ವಿಜಯಪುರ 27-14, ಬಾಗಲಕೋಟ 29-14, ಕಲಬುರಗಿ 29-15, ಬೀದರ್ 27-12, ಯಾದಗಿರಿ 29-16, ರಾಯಚೂರ 30-16, ಬಳ್ಳಾರಿ 30-17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇತ್ತ ಉತ್ತರ ಭಾರತದಲ್ಲಿ ಹವಾಮಾನ ತದ್ವಿರುದ್ಧವಾಗಿದ್ದು, ಹಿಮಪಾತ ಮತ್ತು ಮಳೆಯಾಗುತ್ತಿದೆ. ಐಎಂಡಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆ ಅಥವಾ ಹಿಮಪಾತದ ಮುನ್ಸೂಚನೆ ಇದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಗಮನಾರ್ಹವಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಕಳೆದ 24 ಗಂಟೆಗಳಿಂದ ಮಳೆಯಾಗುತ್ತಲಿದೆ.

Karnataka Weather Report (24 January 2022) : Heavy Cold in the Morning, cold air In the Evening

ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ
ಗುಜರಾತ್‌ನಲ್ಲಿ ಕನಿಷ್ಠ ತಾಪಮಾನವು 5-7 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ. ಅದರಂತೆ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ 3-5 ಡಿಗ್ರಿ ಸೆಲ್ಸಿಯಸ್‌ ಮತ್ತು ಉತ್ತರಪ್ರದೇಶ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಡಿಗ್ರಿ ಸೆಲ್ಸಿಯಸ್‌ ಮಳೆಯಾಗಿದೆ. ಉತ್ತರ ಭಾರತದ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.

ಭಾನುವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಹಿಮಪಾತವಾಗಿದೆ. ಇಂದು ಪಂಜಾಬ್, ಹರಿಯಾಣ-ಚಂಡೀಗಢ, ದೆಹಲಿ, ಉತ್ತರಪ್ರದೇಶದಲ್ಲಿ ಗುಡುಗು, ಮಿಂಚು, ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀ ಹವಾಮಾನ ಇಲಾಖೆ ಹೇಳಿದೆ.

Karnataka Weather Report (24 January 2022) : Heavy Cold in the Morning, cold air In the Evening

ಉತ್ತರಪ್ರದೇಶದಲ್ಲಿ ದಟ್ಟವಾದ ಮಂಜು ವಾತಾವರಣ
ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದು ಕೂಡ ಶೀತಯುತ ಗಾಳಿ ಕಾಣಿಸಿಕೊಂಡಿದೆ. ಹೀಗಾಗಿ ಜನರು ಬೆಂಕಿಯ ಮುಂದೆ ಕುಳಿತು ತಮ್ಮನ್ನು ತಾವು ಬೆಚ್ಚಗಿಡುವ ಪ್ರಯತ್ನದಲ್ಲಿ ನಿರತರಾಗಿದ್ದರು. ಪೂರ್ವ ಉತ್ತರಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ದಟ್ಟವಾದ ಮಂಜು ವಾತಾವರಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Recommended Video

      IND vs SA: KL Rahul ಹಾಗು Kohli ನಡುವೆ ಮೈದಾನದಲ್ಲಿ ನಡೆದಿದ್ದೇನು | Oneindia Kannada

      ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾನುವಾರ ಹಿಮಪಾತವಾಗಿದ್ದು, ಹೀಗಾಗಿ ಕನಿಷ್ಠ 13 ರೈಲುಗಳು ತಡವಾಗಿ ಸಂಚರಿಸುತ್ತಿವೆ. ಆದ್ದರಿಂದ ಇಂದು ದೆಹಲಿಗೆ ತಡವಾಗಿ ರೈಲುಗಳು ಆಗಮಿಸುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+