ಕಳಸಾ ಹಳ್ಳದಿಂದ ಮಲಪ್ರಭಾ ನದಿಗೆ ನೀರು ಹೋಗಿರುವುದು ನಿಜ: ಡಿಕೆಶಿ

ಬೆಂಗಳೂರು, ಜುಲೈ 25: ಕಳಸಾ ಹಳ್ಳದಿಂದ ಮಲಪ್ರಭಾ ನದಿಗೆ ನೀರು ತಿರುಗಿಸಲಾಗಿದೆ ಎಂದು ಗೋವಾ ಸರ್ಕಾರವು ಆರೋಪ ಮಾಡಿ, ಕರ್ನಾಟಕದಿಂದ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪ ಮಾಡಿದೆ.

ಗೋವಾದ ಆರೋಪಗಳ ಬಗ್ಗೆ ಡಿಕೆ.ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟೀಕರಣ ನೀಡಿದ್ದು, ಕಳಸಾ ಹಳ್ಳದಿಂದ ನೀರು ಸೋರಿಕೆ ಆಗಿ ಮಲಪ್ರಭಾ ನದಿಗೆ ಹೋಗಿದೆ ಅದರ ಬಗ್ಗೆ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗೋವಾ ಜತೆ ನಾವು ಯುದ್ಧಕ್ಕೆ ಇಳಿಯುವುದಿಲ್ಲ ನಮ್ಮದೇನಿದ್ದರೂ ಕಾನೂನಾತ್ಮಕ ಹೋರಾಟವಷ್ಟೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

we would not fight with Goa, court will decide: DK Shivakumar

ಆಗಸ್ಟ್‌ ತಿಂಗಳಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಬರಲಿದ್ದು, ಕರ್ನಾಟಕದ ರೈತರಿಗೆ ಒಳಿತೇ ಆಗುವ ವಿಶ್ವಾಸ ನಮಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೆ ಸದ್ದಿಲ್ಲದೆ ಗೋವಾ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಖಾನಾಪುರ ತಾಲ್ಲೂಕಿನ ಕಣಕಿಂಬಿ ಗ್ರಾಮದ ಬಳಿ ಇರುವ ಕಳಸಾ ಪ್ರದೇಶಕ್ಕೆ ಬಂದು ತನಿಖೆ ಮಾಡಿಕೊಂಡು ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+