Dk Shivakumar: ಬಿಜೆಪಿ ಮಾಡಿರುವ ಕೊಳಕು ನಾವು ಸ್ವಚ್ಛಗೊಳಿಸುತ್ತಿದ್ದೇವೆ: ಡಿ.ಕೆ ಶಿವಕುಮಾರ್!
Dk Shivakumar: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ನಮ್ಮ ತಲೆಗೆ ಕಟ್ಟುತ್ತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಈಚೆಗೆ ಮಾಡಿರುವ ಟ್ವೀಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ತನ್ನ ಭ್ರಷ್ಟಾಚಾರವನ್ನು ಅರಿವಿಲ್ಲದೆಯೇ ಬಹಿರಂಗಪಡಿಸಿದೆ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಕೂಗುತ್ತಿರುವ 63% ಭ್ರಷ್ಟಾಚಾರ ಅಂಕಿ ಅಂಶ (ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ) ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2019ರ ಅವಧಿಯದ್ದಾಗಿದೆ. ವರದಿಯ ಅಂಕಿ ಅಂಶಗಳನ್ನು ಬಿಜೆಪಿ ಅವರು ಮರು ಪ್ರಸ್ತಾವನೆ ಮಾಡುವ ಮೂಲಕ, ಅವರು ಕರ್ನಾಟಕಕ್ಕೆ ತಮ್ಮ 40% ಕಮಿಷನ್ ಸರ್ಕಾರ, COVID ಹಗರಣಗಳು, ಗುತ್ತಿಗೆದಾರರ ಆತ್ಮಹತ್ಯೆಗಳು, ಭ್ರಷ್ಟಾಚಾರ ಮತ್ತು ಪಿಎಸ್‌ಐ ಹಗರಣವನ್ನು ನೆನಪಿಸಿದ್ದಾರೆ. 2023 ರಲ್ಲಿ ನಾವು ಅವರನ್ನು 40% ಸರ್ಕಾರ ಎಂದು ಕರೆದಿದ್ದೇವೆ - ಈಗ ದತ್ತಾಂಶವು ಅದು ವಾಸ್ತವವಾಗಿ 63% ಎಂದು ತೋರಿಸುತ್ತದೆ.

ಕರ್ನಾಟಕದತ್ತ ಬೆರಳು ತೋರಿಸುವ ಬದಲು, ಬಿಜೆಪಿ ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರದಲ್ಲಿ ಜಾಗತಿಕವಾಗಿ 96 ನೇ ಸ್ಥಾನಕ್ಕೆ ಕುಸಿದಿರುವುದು ಏಕೆ ಎಂದು ವಿವರಿಸಬೇಕು. ಅವರು ಬಿಟ್ಟುಹೋದ ಅವ್ಯವಸ್ಥೆಯನ್ನು ನಾವು ಸ್ವಚ್ಛಗೊಳಿಸುತ್ತಿದ್ದೇವೆ. ಬಿಜೆಪಿ ಸುಳ್ಳು ಹೇಳುವುದನ್ನು ನಿಲ್ಲಿಸಿ ತನ್ನ ಭ್ರಷ್ಟಾಚಾರದ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲು ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ: ಇನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಅವಧಿಯ ಭ್ರಷ್ಟಾಚಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪ ಮಾಡುತ್ತಿದೆ. ಡಿ.ಕೆ ಶಿವಕುಮಾರ್ ಅವರು ಸಹ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಇಲ್ಲಿಯ ವರೆಗೂ ಒಂದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಕ್ರಮ ತೆಗೆದುಕೊಂಡಿಲ್ಲವೇಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಬಳಿ ಡೇಟಾ ಇದ್ದರೆ, ಕಳೆದ 2.5 ವರ್ಷಗಳಿಂದ ನೀವು ಏನು ಮಾಡುತ್ತಿದ್ದೀರಿ, ನಿದ್ರಿಸುತ್ತಿದ್ದೀರಾ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಒಂದು ಎಫ್‌ಐಆರ್ ತೋರಿಸಿ. ದಯವಿಟ್ಟು ಕ್ರಮ ಕೈಗೊಳ್ಳಿ, ಬಿಜೆಪಿಯ ಪ್ರತಿಯೊಬ್ಬ ಭ್ರಷ್ಟ ನಾಯಕರನ್ನು ಜೈಲಿನಲ್ಲಿಡುವುದನ್ನು ನೋಡಲು ಬಯಸುತ್ತೇನೆ ಎಂದೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ.
2.5 ವರ್ಷಗಳ ನಂತರ ಮುಖ್ಯಮಂತ್ರಿ ಸ್ಥಾನ ಹೇಗಿರುತ್ತದೆ ? ಗುಂಡಿಗಳನ್ನು ಸರಿಪಡಿಸಲು 1000 ಕೋಟಿ ರೂ. ಮತ್ತು ರಸ್ತೆ ಗುಡಿಸುವ ಟ್ರಕ್‌ಗಳಿಗೆ ಸುಮಾರು 600 ಕೋಟಿ ಬಾಡಿಗೆ ಇದೆ ಆದರೆ ಅವುಗಳನ್ನು ಕೇವಲ 90 ಕೋಟಿಗೆ ಖರೀದಿಸಬಹುದು. ಶೇ 40% ಪರ್ಸೆಂಟ್ ಕಮಿಷನ್ ಬಗ್ಗೆ ಆರೋಪ ಮಾಡಿ ಶೇ 80% ರಷ್ಟು ಭ್ರಷ್ಟಾಚಾರ ನಡೆದಿದೆ ಎಂದೂ ಕೆಲವರು ದೂರಿದ್ದಾರೆ.












Click it and Unblock the Notifications