ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಿಂದ ಬೆಂಗಳೂರಿಗೆ ಬಂದಿಳಿದ 3860 ಮತಯಂತ್ರ

|
Google Oneindia Kannada News

ಬೆಂಗಳೂರು, ಫೆಬ್ರವರಿ27 : ರಾಜ್ಯ ವಿಧಾನಸಭಾ ಚುನಾವಣೆಗೆ ಬೆಂಗಳೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಗುಜರಾತ್ ರಾಜ್ಯದಿಂದ ಸೋಮವಾರ 3860 ಮತ ಯಂತ್ರಗಳನ್ನು ನಗರಕ್ಕೆ ತರಲಾಗಿದೆ.

ಪ್ರಸ್ತುತ ಏಳು ವಿಧಾನಸಭಾ ಕ್ಷೇತ್ರಗಳಿಗೆ ಅಗತ್ಯ ಇರುವಷ್ಟು ಮತಯಂತ್ರಗಳು ಆಗಮಿಸಿವೆ. ಗುಜರಾತ್ ನಿಂದ ಆಗಮಿಸಿರುವ 3860 ಮತಯಂತ್ರಗಳ ಪೈಕಿ 3090 ಬ್ಯಾಲೆಟ್ ಯುನಿಟ್, 770 ಕಂಟ್ರೋಲ್ ಯುನಿಟ್ ಆಗಿವೆ. ಅಲ್ಲದೇ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿರುವ ವಿವಿ ಪ್ಯಾಟ್ ಗಳು ಸಹ ಬಂದಿವೆ.

ಚುನಾವಣೆಯಲ್ಲಿ ಮತ ಚಲಾವಣೆ ಖಾತ್ರಿಗೆ ವಿವಿಪ್ಯಾಟ್ ಬಳಕೆಚುನಾವಣೆಯಲ್ಲಿ ಮತ ಚಲಾವಣೆ ಖಾತ್ರಿಗೆ ವಿವಿಪ್ಯಾಟ್ ಬಳಕೆ

ಬಿಇಎಲ್ ಸಂಸ್ಥೆಯಿಂದ 500 ವಿವಿ ಪ್ಯಾಟ್ ಗಳನ್ನು ತರಲಾಗಿದೆ. ಇನ್ನು 3ಸಾವಿರ ಮತಯಂತ್ರಗಳನ್ನು ಮಂಗಳವಾರ ಬಿಇಎಲ್ ಸಂಸ್ಥೆ ಒದಗಿಸಲಿದೆ. ಮತಯಂತ್ರ ಮತ್ತು ವಿವಿ ಪ್ಯಾಟ್ ಗಳನ್ನು ಕಂದಾಯ ಭವನದ ಭದ್ರತಾ ಕೊಠಡಿಯಲ್ಲಿ ಸಂರಕ್ಷಿಸಲಾಗಿದೆ. ಮತಯಂತ್ರ ಮತ್ತು ವಿವಿಪ್ಯಾಟ್ ಗಳ ರಕ್ಷಣೆ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

VVPAT machines for Karnataka Assembly Election arrives from Gujarat

ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಭದ್ರತಾ ಕೊಠಡಿಗೆ 24 ಗಂಟೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ಪೊಲೀಸರಂತೆ ೪ ಪೊಲೀಸರನ್ನು ನಿಯೋಜಿಸಲಾಗಿದೆ. ಮತ್ತಷ್ಟು ಮತಯಂತ್ರಗಳ ಅಗತ್ಯವಿದ್ದು, ಆದಷ್ಟು ಬೇಗ ಮತಯಂತ್ರಗಳನ್ನು ತರಿಸಿಕೊಡುವಂತೆ ಜಿಲ್ಲಾಡಳಿತವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

English summary
Karnataka is setting ready for Assembly elections. Huge number of vvpat electric voting machines are arrived in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X