ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ
ಬೆಂಗಳೂರು, ಮೇ 18: ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಉಗ್ರಪ್ಪ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ನಾಯಕ ಜನಾರ್ದನ ರೆಡ್ಡಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡರಿಗೆ ಆಮಿಷ ಒಡ್ಡಿರುವ ಆಡಿಯೋ ಇದು ಎಂದು ಅವರು ಹೇಳಿದ್ದಾರೆ. ಮತ್ತು ಇದನ್ನು ಪತ್ರಿಕಾಗೋಷ್ಠಿಯಲ್ಲೇ ಅವರು ಪತ್ರಕರ್ತರಿಗೆ ಕೇಳಿಸಿದ್ದಾರೆ.
ಬಿಜೆಪಿ ನಾಯಕರು ನಿನ್ನೆವರೆಗೆ 25 ಕೋಟಿ ರೂಪಾಯಿಯ ಆಮಿಷ ತೋರಿಸುತ್ತಿದ್ದರು. ಇಂದು 150 ಕೋಟಿ ರೂಪಾಯಿಯ ಆಫರ್ ನೀಡುತ್ತಿದ್ದಾರೆ. ಜೊತೆಗೆ ಕೇಳಿದ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಗೆ ಕುದುರೆ ವ್ಯಾಪಾರ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬೆಂಬಲ ಇದೆ ಎಂದು ರೆಡ್ಡಿ ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂಬುದಾಗಿ ಉಗ್ರಪ್ಪ ತಿಳಿಸಿದ್ದಾರೆ.












Click it and Unblock the Notifications