ಜಾತಿ ಗಣತಿ ವರದಿ ಬಗ್ಗೆ ಪೇಜಾವರ ಶ್ರೀ ಶಾಕಿಂಗ್ ಹೇಳಿಕೆ !
caste census report: ಕರ್ನಾಟಕದಲ್ಲಿ ಜಾತಿ ಗಣತಿಯ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿಯನ್ನು ಮಂಡನೆ ಮಾಡುವ ಬಗ್ಗೆ ಉತ್ಸುಕವಾಗಿದೆ. ಇದೇ ಸಂದರ್ಭದಲ್ಲಿ ಜಾತಿ ಗಣತಿಯ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲೇ ವಿರೋಧಗಳು ಇವೆ. ಈ ನಡುವೆ ಜಾತಿ ಗಣತಿಯ ಬಗ್ಗೆ ಪರ - ವಿರೋಧಗಳು ಜೋರಾಗಿ ನಡೆಯುತ್ತಿವೆ. ಈ ಮಧ್ಯೆ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಜಾತಿಗಣತಿ ಮಂಡನೆಯ ಬಗ್ಗೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮದು ಜಾತ್ಯತೀತ ದೇಶ ಹಾಗೂ ಸರ್ಕಾರ ಎನ್ನುವವರೇ ಜಾತಿ ಗಣತಿ ವರದಿ ಮಂಡನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ. ಜಾತ್ಯಾತೀತ ದೇಶದಲ್ಲಿ ಜಾತಿಗಣತಿಯ ಯಾಕೆ ಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಮುಂದುವರಿದು ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿಗಣತಿ ವರದಿಯನ್ನು ಮುಂಡಿಟ್ಟುಕೊಂಡು ಇದನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನಿಸುತ್ತಿದೆ ಎಂದು ಸಹ ಶ್ರೀಗಳು ದೂರಿದ್ದಾರೆ. ರಾಜ್ಯ ಸರ್ಕಾರ ಒಂದುಕಡೆ ಜಾತಿ ರಾಜಕೀಯ ಬೇಡ ಎಂದು ಹೇಳುತ್ತದೆ. ಮತ್ತೊಂದು ಕಡೆ ಜಾತಿ ಗಣತಿ ವರದಿ ಮಂಡಿಸುತ್ತೇವೆ. ಜಾತಿಗಣತಿ ವರದಿ ಅವಶ್ಯವಾಗಿದೆ ಎಂದು ಹೇಳುತ್ತಿದೆ. ಈ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಜಾತಿ ಗಣತಿ ವರದಿಯಿಂದ ರಾಜ್ಯದಲ್ಲಿ ಜಾತಿಗಳ ನಡುವೆ ವೈಷಮ್ಯ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.
ಇಷ್ಟು ವರ್ಷ ಮುಚ್ಚಿಟ್ಟಿದ್ದೇಕೆ: ಜಾತಿಗಣತಿ ವರದಿಯನ್ನು ಮಂಡಿಸುವ ಅವಶ್ಯಕತೆ ಅಷ್ಟಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇಷ್ಟೊಂದು ಕೋಟಿ ವೆಚ್ಚ ಮಾಡಿ ತಯಾರಿಸಿರುವ ಜಾತಿಗಣತಿ ವರದಿಯನ್ನು ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟಿರುವುದು ಏಕೆ. ಈ ವರದಿಯನ್ನು ಈ ಹಿಂದೆಯೇ ಮಂಡಿಸಬಹುದಿತ್ತು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಜಾತಿ ಆಧಾರಿತ ರಾಜಕೀಯ ಬೇಡ ಎಂದೇ ಹೇಳಲಾಗುತ್ತದೆ. ಮತ್ತೊಂದು ಕಡೆ ಜಾತಿ ಗಣತಿ ಗಣತಿ ವರದಿ ಬೇಕು ಎನ್ನುತ್ತಿದ್ದಾರೆ. ಜಾತ್ಯಾತೀತ ದೇಶದಲ್ಲಿ ಜಾತಿ ಗಣತಿಯ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿರುವುದು ವರದಿಯಾಗಿದೆ.
ಇನ್ನೊಂದು ವರ್ಷದಲ್ಲಿ ರಾಮಮಂದಿರ: ಇನ್ನೊಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ (ಮಂದಿನ ನಿರ್ಮಾಣ ಕೆಲಸ) ಎಂದು ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹೇಳಿದ್ದಾರೆ.
ನಾನು ಅಯೋಧ್ಯೆಗೆ ಹೋಗಿ ಬಂದಿದ್ದೇನೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಕೆಲಸ ಅದ್ಧೂರಿಯಾಗಿ ನಡೆದಿದೆ. ಬಾಕಿ ಉಳಿದಿರುವ ಕೆಲಸಗಳು ಸಹ ವೇಗವಾಗಿ ನಡೆಯುತ್ತಿದೆ. ಇನ್ನೂ ಒಂದು ವರ್ಷದಲ್ಲಿ ಶ್ರೀರಾಮ ಮಂದಿರ ಪೂರ್ಣವಾಗಲಿದೆ. ರಾಮರಾಜ್ಯ ನಿರ್ಮಾಣವಾಗಬೇಕದರೆ, ನಮಗೆ ರಾಮ ಮಂದಿರ ಬೇಕೇಬೇಕು ಎಂದಿದ್ದಾರೆ.
ಲಿಂಗಾಯತ ಸಮುದಾಯದಿಂದ ವಿರೋಧ: ಇನ್ನು ರಾಜ್ಯದಲ್ಲಿ ಜಾತಿ ಗಣತಿ ವರದಿ ಮಂಡನೆಯ ವಿಚಾರವಾಗಿ ಒಕ್ಕಲಿಗ ಸಮುದಾಯದಿಂದ ಹಾಗೂ ಲಿಂಗಾಯತ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಜಾತಿ ಗಣತಿಯನ್ನು ಹೊಸದಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಬೇಕು ಎಂದು ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.












Click it and Unblock the Notifications